ಗ್ಯಾರಾಘಟ್ಟದಲ್ಲಿ ವಾಂತಿ ಬೇದಿಯಿಂದ ಇಬ್ಬರು ಮಕ್ಕಳು ಮೃತ

ತಿಪಟೂರು 

                 ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಗ್ಯಾರಾಘಟ್ಟ ಗ್ರಾಮದಲ್ಲಿ ವಾತಿ ಬೇದಿಯಿಂದ ಆಕಾಶ್ (13), ಲಿಖಿತಾ (7) ಮೃತಪಟ್ಟಿದ್ದಾರೆ. ಇಬ್ಬರಿಗೂ ಶನಿವಾರವೇ ವಾಂತಿ ಬೇದಿ ಕಾಣಿಸಿಕೊಂಡಿದ್ದು ಭಾನುವಾರ ಬೆಳಗ್ಗೆ ಅರಸೀಕೆರೆ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ್ದರೇ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುವ ಮಾರ್ಗದಲ್ಲಿ ಲಿಖಿತಾ ಸಾವನ್ನಪ್ಪಿದ್ದಾಳೆ. ಆಕಾಶ್‍ಕೂಡ ತನ್ನ ಮನೆಯಲ್ಲೇ ಮೃತಪಟ್ಟಿದ್ದಾನೆ. ಗ್ರಾಮದಲ್ಲಿ ಕಲುಷಿತ ನೀರು ಸರಬರಾಜು ಮತ್ತು ಸ್ವಚ್ಚತೆಯಿಲ್ಲದೇ ಇರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಮಕ್ಕಳು ಸಾವನ್ನಪ್ಪಲು ಕಾರಣವೆನ್ನಲಾಗಿದೆ. ಸ್ಥಳೀಯರು ಹೇಳುವಂತೆ ಗ್ರಾಮ ಪಂಚಾಯಿತಿಯವರು ಕುಡಿಯುವ ನೀರಿನ ಟ್ಯಾಂಕ್ ಮತ್ತು ಚರಂಡಿಯನ್ನು ಸರಿಯಾಗಿ ಸ್ವಚ್ಚತೆಮಾಡದೇ ಇರುವುದೇ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ. ಸುದ್ದಿತಿಳಿದ ತಕ್ಷಣ ಅಧಿಕಾರಿಗಳು, ವೈದ್ಯರು ಗ್ರಾಮಕ್ಕೆ ದೌಡಾಯಿಸಿದ್ದಾರೆ. ಮಕ್ಕಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗಮಾಡುತ್ತಿದ್ದರೆಂದು ತಿಳಿದು ಬಂದಿದೆ.

Recent Articles

spot_img

Related Stories

Share via
Copy link