ಹಾವೇರಿ:
ಇಂದು (15/08/2018) ಶ್ರೀ ಕನಕಗುರುಪೀಠ ಬೆಳ್ಳೊಡಿ ಶಾಖಾಮಠದಲ್ಲಿ ಚಂದ್ರ ಗುಪ್ತ ಮೌರ್ಯ ಪಬ್ಲಿಕ್ ಸ್ಕೂಲ್ ಮತ್ತು ನಿಂಚನ ಪಬ್ಲಿಕ್ ಸ್ಕೂಲ್ ನ ಸಂಯುಕ್ತ ಆಶ್ರಯದಲ್ಲಿ 72 ನೆಯ ಸ್ವಾತಂತ್ರ್ಯ ದಿನಾಚರಣೆ ಹಾಗೂ 220 ನೇ ಸಂಗೊಳ್ಳಿ ರಾಯಣ್ಣನ ಜಯಂತ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಗಿನೆಲೆ ಕನಕ ಗುರು ಪೀಠಾಧ್ಯಕ್ಷರಾದ ಶ್ರೀನಿರಂಜನಾನಂದಾಪುರಿ ಸ್ವಾಮೀಜಿ, ಶಾಲೆಯ ಕಾರ್ಯದರ್ಶಿ ನಿಂಗಪ್ಪ, ಗ್ರಾ.ಪಂ.ಸದಸ್ಯರಾದ ಪ್ರಕಾಶ್, ಶಾಲಾ ಸಿಬ್ಬಂಧಿವರ್ಗ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಧ್ವಜಾರೋಹಣ ಕಾರ್ಯ ನಿರ್ವಹಿಸಿದ ಬಳಿಕ ಮಾತನಾಡಿದ ಪೀಠಾಧ್ಯಕ್ಷರು, ದೇಶಕ್ಕೋಸ್ಕರ ಪ್ರಾಣತೆತ್ತ ಸಂಗೊಳ್ಳಿ ರಾಯಣ್ಣರಂತಹ ದೇಶಭಕ್ತರು ಜನಿಸಿದ ದಿನವೇ ಸ್ವಾತಂತ್ರ್ಯ ಸಿಕ್ಕದ್ದು, ನಾವೆಲ್ಲರೂ ಹೆಮ್ಮೆಪಡುವಂತಹ ವಿಷಯ. ದೇಶಪ್ರೇಮಿ ರಾಯಣ್ಣರ ತ್ಯಾಗ-ಬಲಿದಾನಗಳನ್ನು ನಾವಿಂದು ಸ್ಮರಿಸಲೇಬೇಕು ಎಂದು ಶುಭಕೋರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ಧಿಗಾಗಿ ಪ್ರಜಾಪ್ರಗತಿಯ facebook page ಲೈಕ್ ಮಾಡಿ
