ಬಗೂರು
ಸ್ವಾತಂತ್ರ ಯೋದರ ಆದರ್ಶವನ್ನು ಇಂದಿನ ಯುವ ಸಮೋಹ ಅಳವಾಡಿಸಿಕೊಂಡಾಗ ಮಾತ್ರ ದೇಶದ ಅಭಿವೃದ್ದಿ ಕಾಣಲು ಸಾಧ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಪುಟ್ಟಬಸಪ್ಪ ನುಡಿದರು.
ಅವರು ಸಿರಾ ತಾಲ್ಲೂಕು ಬರಗೂರು ಪಟ್ಟಣದ ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆ ಅವರಣದಲ್ಲಿ ಏರ್ಪಡಿಸಿದ್ದ 72ನೇ ಸ್ವಾತಂತ್ರ್ಯ ದಿನಚಾರಣೆಯಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಾ ತಿಳಿಸಿದರು
ದೇಶ, ಭಾಷೆಯ ಬಗ್ಗೆ ಅಭಿಮಾನ ಹೊಂದುವುದು ಪ್ರತಿಯೋಬ್ಬರಲ್ಲು ಬೆಳೆಯಬೇಕಿದೆ, ವಿದ್ಯಾವಂತ ಯುವಕರೇ ಇಂದು ಜಾಗೃತರಾಗಿ ದೇಶದ ಉಳಿವಿಗೆ ಪಣ ತೋಡಬೇಕಿದೆ ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಿಆರ್ ನಾಗಣ್ಣ,ಬರಗೂರು ಗ್ರಾಪಂ ಪಿಡಿಓ ವನಿತಾ, ಸದಸ್ಯರಾದ ಮಹಾಲಕ್ಷ್ಮೀ,ಇರ್ಷದ್ಉನ್ನೀಸಾ,ಚಂದ್ರವತಿ, ಪತ್ರಕರ್ತರಾದ ವಲಿಸಾಬ್ಬರಗೂರು,ವಿರಭದ್ರಸ್ವಾಮಿ, ಪ್ರಾಂಶುಪಾಲರಾದ ಡಿಎನ್ ಪರಮೇಶ್ಗೌಡ, ಉಪನ್ಯಾಸಕರಾದ ಕೆಹೆಚ್ರವಿ,ಲಕ್ಷ್ಮೀ,ಮಂಜುನಾಥ್,ಮುತ್ತುರಾಜು,ಮಧು,ರಮೇಶ್,ಕಾನ್ವೇಂಟ್ ಮುಖ್ಯಶಿಕ್ಷಕಿ ಪುಷ್ಪಲತಾ,ಜ್ಯೋತಿ,ಮಂಗಳಗೌರಿ,ಶಾಂತಕುಮಾರ್,ಮುಭಾರಕ್,ಸೂರ್ಯಕಲಾ, ನರಸಮ್ಮ,ಪ್ರಭವತಿ,ರಂಗನಾಥಪ್ಪ,ಲಾವಣ್ಯ ಇತರರು ಹಾಜರಿದ್ದರು ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪ್ರತಿದಿನದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿಯ facebook page like ಮಾಡಿ