ದೊಡ್ಡೇರಿ:
ಭಾರತ ದೇಶದ ಪ್ರತಿಯೋಬ್ಬ ನಾಗರೀಕರು ಸಹ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚುವಂತ ಸಮಗ್ರವಾಗಿರುವಂತಹ ನಾಣ್ಣುಡಿಗೆ ಸೇವೆಯನ್ನು ಮಾಡಿರುವಂತಹ ಈ ಒಂದು ಸ್ವತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದಂತಹ ಮಹನೀಯರನ್ನು ಸ್ಮರಿಸುವುದು ನಮ್ಮನಿಮ್ಮೆಲ್ಲರ ಸುದೈವದಿನವೇಂದು ಜಿಪಂ ಸದಸ್ಯ ಹೂವಿನ ಚೌಡಪ್ಪ ತಿಳಿಸಿದರು.
ಆ.15 ರಂದು ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರೌಢಶಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಮುರಾರ್ಜಿದೇಸಾಯಿ ವಸತಿ ಶಾಲೆ ಖಾಸಗಿ ವಿದ್ಯಾ ಸಂಸ್ಥೆಗಳಾದ ಶ್ರೀರಂಗ ವಿದ್ಯಾಸಂಸ್ಥೆ ಲೋಕಪಾಲ್ ವಿದ್ಯಾಸಂಸ್ಥೆ ಹಾಗೂ ಐನ್ಸ್ಟೀನ್ ಮತ್ತು ಅಂಗನವಾಡಿ ಕೇಂದ್ರಗಳ 72 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸಮಾಡುತ್ತಿರುವ ಪ್ರತಿಯೋಬ್ಬ ವಿದ್ಯಾರ್ಥಿಗೆ ಸಮಗ್ರ ಶಿಕ್ಷಣ ಕಾಯಿದೆ ಜಾರಿಗೆ ಬರಬೇಕು ಅಂದರೆ ಪ್ರಾಥಮಿಕ ಹಂತದಿಂದಲು ಸಮೇತ ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣದ ಜೊತೆಗೆ ಆಂಗ್ಲಭಾಷೆಯನ್ನು ಬೋದಿಸುವುದಾದರೆ ಆ ಮಕ್ಕಳ ಒಂದು ತಾರತಮ್ಯವನ್ನು ನಿವಾರಿಸುವಲ್ಲಿ ಸರ್ಕಾರ ಇದನ್ನು ಒಂದು ಕಾನೂನಾತ್ಮಕವಾಗಿ ಜಾರಿಗೆ ತಂದಾಗ ಮಾತ್ರ ಈ ಸಮಗ್ರಶಿಕ್ಷಣದ ನೀತಿಯ ಜೊತೆಗೆ ಆಂಗ್ಲ ಭಾಷೆಯ ಕಲಿಕೆಯ ಮಖಾಂತರ ಮಾತೃಭಾಷೆಯ ಶಿಕ್ಷಣವನ್ನು ಪೂರೈಸುವುದಕ್ಕೆ ಸಾಧ್ಯ.
ನಮ್ಮದು ಸಾತಂತ್ರ್ಯ ಚಳುವಳಿಯಾಗಿರುವಂತಹ ದೇಶ ಪ್ರತಿಯೋಬ್ಬನಿಗೂ ತನ್ನದೇ ಆದ ನಾಡಿನಲ್ಲಿ ಬದಕುವಂತಹ ಸ್ವತಂತ್ರ ಪ್ರದೇಶ ಶಿಕ್ಷಣ ಮಾದ್ಯಮ ಇಂದು ಪ್ರತಿಯೋಬ್ಬ ಪ್ರಜೆಗೂ ಸಹ ಉನ್ನತ ಶಿಕ್ಷಣ ಕೊಡುವಲ್ಲಿ ಒಂದು ಮಹತ್ತರವಾದ ಸಾಧನೆ ಮಾಡಿದೆ ಇಂತಹ ಒಂದು ಸಂಸ್ಥೆಗಳ ಮುಖಾಂತರ ಮಕ್ಕಳ ವಿದ್ಯಾಬ್ಯಾಸದ ಪೂರೈಕೆಯನ್ನು ಸಮಗ್ರವಾಗಿ ನಾವು ಅಭ್ಯಸಿಸುದಾದರೆ ಅವರನ್ನು ನಮ್ಮ ಭಾರತ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವುದರ ಮುಖಾಂತರ ಒಂದು ಸಮಗ್ರ ನೀತಿ ಶಿಕ್ಷಣ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಿದರೆ ಉನ್ನತ ಶಿಕ್ಷಣಕ್ಕೆ ನಾಂದಿಯಾಗುತ್ತದೆ ಇಂದು ಪಾಠ ಪ್ರವಚನಗಳ ಜೊತೆಗೆ ಕ್ರೀಡೋತ್ಸವಗಳನ್ನು ಹೇಗೆ ಆಚರಣೆ ಮಾಡುತ್ತೇವೊ ಹಾಗೆ ಮುಂದಿನ ದಿನಗಳಲ್ಲಿ ಅರ್ದ ಭಾಗ ಪಾಠವನ್ನು ಕಲಿತರೆ ಅರ್ದಭಾಗವನ್ನು ಶಿಕ್ಷಣ ಮಾದ್ಯಮವನ್ನಾಗಿ ಕ್ರೀಡಾವ್ಯವಸ್ಥೆಯನ್ನು ಜಾರಿಗೊಳಿಸುವಂತಹ ಮಹತ್ತರವಾದ ಶಿಕ್ಷಣ ಮಸೂದೆ ಕಾಯ್ದೆ ಜಾರಿಗೆ ಬರುತ್ತದೆ ಎಂದರು ಈ ಸಂಧರ್ಭದಲ್ಲಿ ಬಡವನಹಳ್ಳಿ ಗ್ರಾಂ. ಪಂ ಅಧ್ಯಕ್ಷೆ ಕೀರ್ತಿಸುರೇಶ್ ಅಧ್ಯಕ್ಷತೆ ವಹಿಸಿದ್ದರು ಗ್ರಾಂ.ಪಂ ಉಪಾಧ್ಯಕ್ಷೆ ರಂಗಮ್ಮಚಿಕ್ಕರಂಗನಾಯಕ. ಆರ್ ಜಯರಾಮಯ್ಯ, ಗಬಾಲಿ ರಾಜಣ್ಣ, ಮಂಜುಳ,ನೂರ್ಜಾನ್ ಸುರೇಶ್ ಬಾವಿಮನೆ ರಂಗನಾಥ ನಾಗಲಕ್ಷ್ಮೀದೇವರಾಜು, ಜಯಲಕ್ಷ್ಮೀರಮೇಶ್, ಹಿರಿಯ ನಾಗರೀಕರಾದ ಕರಿಬಸಪ್ಪ, ಬಾಣ್ಣಪ್ಪ, ಲಿಂಗಪ್ಪ, ಎಸ್.ಡಿ.ಎಮ್.ಸಿ ಅದ್ಯಕ್ಷ ಬಿ,ಕೆ.ರಂಗನಾಥ್ ಹಾಗೂ ಮುರಾರ್ಜಿದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಡಿ,ಆರ್.ರಮೇಶ್ ಬಡವನಹಳ್ಳಿ ಗ್ರಾಂ ಪಂ ಪಿ.ಡಿಓ ವಾಸುದೇವಮೂರ್ತಿ ಕಾರ್ಯದರ್ಶಿ ನರಸಪ್ಪ ಮುಖ್ಯಶಿಕ್ಷಕ ರಾಜಶೇಖರ್ ಹಾಗೂ ಎಲ್ಲಾ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯವರು,ಮುಖ್ಯಶಿಕ್ಷಕರುಗಳು, ಸಹಶಿಕ್ಷಕರು ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
