ಚಿಂತನೆಯೊಳಗೆ ಗುರಿ ಇದ್ದರೆ ಪ್ರತಿಫಲ ಸಾಧ್ಯ

ಶಿಗ್ಗಾವಿ :

  ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಚಿಂತನೆ ಇರಬೇಕು. ಆ ಚಿಂತನೆಯೊಳಗೆ ಗುರಿ ಇರಬೇಕು. ಆ ಗುರಿ ತಲುಪಲು ದಣಿವರಿಯದ ಪರಿಶ್ರಮವಿದ್ದಾಗ ಅಂತಹ ವ್ಯಕ್ತಿ ಸಾಧಕನಾಗಿ ಮೇರೆಯಬಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಬಂಕಾಫುರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 2018/19 ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪಠ್ಯೆತ್ತರ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಅತ್ಯ ಅಮೂಲ್ಯವಾದ ಒಂದೊಂದು ಕ್ಷಣವನ್ನು ಅನುಭವಿಸಬೇಕು. ನೀವು ಬರಿ ಮಾತನಾಡದೆ ಸಾದಕರಾಗಬೇಕು. ನೀವು ಮಾಡಿದ ಸಾದನೆಯನ್ನು ನೋಡಿ ಇಡಿ ಪ್ರಪಂಚದ ಜನ ಮಾತನಾಡಬೇಕು. ವಿದ್ಯಾರ್ಥಿಗಳು ಸೋಲಿಗೆ ಹೆದರದೇ ಮುನ್ನಡೆದಾಗ ಗೆಲವು ನಿಮ್ಮನ್ನರಸಿ ಬರಲಿದೆ ಎಂದು ಹೇಳೀದರು.

  ನಿವೃತ್ತ ಪ್ರಾಚಾರ್ಯ ಪ್ರೋ.ಪಂಚಾಕ್ಷರಯ್ಯ ಮಾತನಾಡಿ ಸಾರ್ವತ್ರಿಕ ಬದುಕಿನ ಸಾಕ್ಷಾತ್ಕಾರಕ್ಕೆ ಜ್ಞಾನ ಸಂಸ್ಕಾರ ಅತ್ಯ ಅವಸ್ಯವಾಗಿದೆ. ಮನುಷ್ಯ ಭೂಮಿಯ ಮೇಲಿನ ಮುಖ್ಯ ಉದ್ದೇಶವನ್ನು ಅರ್ಥಮಾಡಿಕೊಂಡು ಬದುಕಿನಲ್ಲಿ ನೀರು, ಬೆಳಕು, ಗಾಳಿ, ಪರಿಸರದಂತಹ ನೈಜ ದೈವತ್ವವನ್ನು ಉಳಿಸಿಕೊಂಡು ಹೋಗಬೇಕು. ಪ್ರತಿಯೊಬ್ಬ ಜೀವಿ ಬೌತಿಕ ಅಂಶವನ್ನು ಅರ್ಥಮಾಡಿಕೊಂಡು ಪಾರಮಾರ್ಥಿಕ ಸಾದನೆಮಾಡಿದಲ್ಲಿ ಅಂತರಂಗ, ಬಹಿರಂಗ ಶುದ್ಧಿಯಾಗಿ ಬದುಕಿನ ಸಾರ್ಥಕತೆಗೆ ಸಾದ್ಯವಾಗುತ್ತದೆ. ನಾವು ಭೂಮಿಯ ಮೇಲಿರುವ ನೈಸರ್ಗಿಕ ಸಂಪತ್ತನ್ನು ಅನಿಭವಿಸುತ್ತಿದ್ದೆವೆ ಅವುಗಳನ್ನು ಮುಂದಿನ ಪಿಳಿಗೆಗೆ ನೀಡುವ ಜವಾಬ್ದಾರಿ ನಮ್ಮ ನಿಮ್ಮೇಲ್ಲರ ಮೇಲಿದೆ ಆ ನಿಟ್ಟಿನಲ್ಲಿ ಪರಿಸರ, ಸ್ವಚ್ಛತೆಗೆ ಆದ್ಯತೆ ನೀಡುವ ಅವಸ್ಯಕತೆಯಿದೆ ಎಂದು ಹೇಳಿದರು.

   ಮುಖಂಡರಾದ ತಾಲೂಕಾ ಬಿಜೆಪಿ ಅದ್ಯಕ್ಷ ದೇವಣ್ಣ ಚಾಕಲಬ್ಬಿ, ಅಶೋಕ ಪಟ್ಟಣಶೆಟ್ಟರ, ಬಸವರಾಜ ನಾರಾಯಣಪುರ, ಗುಡ್ಡಪ್ಪ ಮತ್ತೂರ, ಲಿಂಗರಾಜ ಹಳವಳ್ಳಿ, ಪ್ರೋ. ಕೆ.ಪಿ.ಬೆಣಗೇರಿ, ಉಮೇಶ ಕರ್ಜಗಿ, ವಿಜಯ್ ಗುಡಗೇರಿ, ವಿಜಯಲಕ್ಷ್ಮೀ, ನಿಂಗಪ್ಪ ಕಲಕೋಟಿ, ಮಂಜುನಾಥ ನಾಯಕ, ಮೇಘರಾಜ ಚನ್ನಾಪುರ, ರಘುಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಡಿ.ಎಸ್.ಸೊಗಲದ ಸಭೆಯ ಅದ್ಯಕ್ಷತೆ ವಹಿಸಿದ್ದರು. ಸುಧಾ ಹಿರೇಮಠ ಸ್ವಾಗತಿಸಿದರು. ಪ್ರೋ. ಸುಜಾತಾ ಕಡ್ಲಿ ನಿರೂಪಿಸಿದರು. ಆನಂದ ಇಂದೂರ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page like ಮಾಡಿ

Recent Articles

spot_img

Related Stories

Share via
Copy link