ಬೆಂಗಳೂರು: 
ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಅವರ ಕಾರು ಅಪಘಾತಕ್ಕೊಳಗಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಿಂದ ಪಾರಾಗಿದ್ದಾರೆ.
ಶುಕ್ರವಾರ ಮಾರ್ಗ ಮಧ್ಯೆ ಬಂದ ಬೈಕಿಗೆ ಡಿಕ್ಕಿಯಾಗೋದನ್ನು ತಪ್ಪಿಸಲು ಹೋಗಿ ಕಾರ್ ರಸ್ತೆ ಬದಿಯ ಗದ್ದೆಗೆ ನುಗ್ಗಿದೆ. ಬೆಂಗಳೂರಿನಿಂದ ಚೆನ್ನರಾಯಪಟ್ಟಣ ಮೂಲಕ ಮಡಿಕೇರಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರಿಗೆ ಅಡ್ಡವಾಗಿ ಬಂದ ಬೈಕ್ ತಪ್ಪಿಸಲು ಹೋಗಿ ಕಾರ್ ಟರ್ನ್ ಮಾಡಿದಾಗ ಕಾರು ಪಕ್ಕದಲೇ ಇದ್ದ ಜಮೀನಿಗೆ ನುಗ್ಗಿದೆ ಇದನ್ನು ಗಮಸಿದ ಸ್ಥಳಿಯರು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೈ ಜಗದೀಶ್ ಅವರಿಗೆ ಸಣ್ಣ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.








