ಭಾಗಿ-4: ಬಾಲಿವುಡ್ ಗೆ ಹಾರಿದ ನಿರ್ದೇಶಕ ಹರ್ಷ

ಮುಂಬೈ :

   ಕನ್ನಡ ಚಿತ್ರರಂಗದ ಹೆಸರಾಂತ ನೃತ್ಯ ನಿರ್ದೇಶಕ ಎ. ಹರ್ಷ ತನ್ನ ಚೊಚ್ಚಲ ಹಿಂದಿ ಚಿತ್ರ ‘ಬಾಗಿ 4’ ನೊಂದಿಗೆ ಬಾಲಿವುಡ್ ಗೆ ಹಾರಿದ್ದಾರೆ. ಟೈಗರ್ ಶ್ರಾಫ್ ಅಭಿನಯದ ಸಿನಿಮಾಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸುಮಾರು 800 ಗೀತೆಗಳಿಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಹರ್ಷ, 2007ರಲ್ಲಿ ಗೆಳೆಯ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕ ಕ್ಯಾಪ್ ತೊಟ್ಟಿದ್ದರು.

   ಅಲ್ಲಿಂದ ಇಲ್ಲಿಯವರೆಗೂ ಶಿವರಾಜ್ ಕುಮಾರ್ ಅವರೊಂದಿಗೆ ಭಜರಂಗಿ, ವಜ್ರಕಾಯ ಸೇರಿ 4 ಸಿನಿಮಾಗಳು, ದರ್ಶನ್ ಜೊತೆಗೆ ಚಿಂಗಾರಿ, ಪುನೀತ್ ರಾಜ್ ಕುಮಾರ್ ಜೊತೆಗೆ ಅಂಜನಿ ಪುತ್ರ ಸೇರಿದಂತೆ ಒಟ್ಟು 11 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

   ಟ್ರೈಗರ್ ಶ್ರಾಫ್ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿರುವ ಫೋಸ್ಟರ್ ನೊಂದಿಗೆ ಹರ್ಷ ನಿರ್ದೇಶಕರಾಗಿರುವುದನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಫೋಸ್ಟರ್ ನಲ್ಲಿ ಟೈಗರ್ ಶ್ರಾಫ್ ವಾಶ್ ರೂಮ್ ನಲ್ಲಿ ಮಚ್ಚು ಹಿಡಿದು ರಕ್ತಸಿಕ್ತವಾಗಿ ಕೂತಿದ್ದಾರೆ. ಈ ಬಾರಿ ಅವನು ಮೊದಲಿನಂತಿಲ್ಲ ಎನ್ನುವ ಟ್ಯಾಗ್ ಲೈನ್ ನೀಡಲಾಗಿದೆ.ಹೆಸರಾಂತ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸೋಮವಾರದಿಂದ ಚಿತ್ರೀಕರಣ ಆರಂಭವಾಗಿದ್ದು, ಸೆಪ್ಟೆಂಬರ್ 5, 2025ರಂದು ಬಿಡುಗಡೆಗೆ ಯೋಜಿಸಲಾಗಿದೆ. 

Recent Articles

spot_img

Related Stories

Share via
Copy link