ಹಿರಿಯೂರು:
ಅಪರಿಚಿತರು ಕೊಡುವ ತಿಂಡಿ ತಿನಿಸುಗಳನ್ನು ಸ್ವೀಕರಿಸಬಾರದು ಎಂದು ಪೊಲೀಸ್ ಹೆಡ್ ಕಾನ್ಸ್ಟೆಬಲ್ ಎನ್.ರೇಖಾ ಹೇಳಿದರು. ಪೊಲೀಸ್ ಇಲಾಖೆಯ ಓಬವ್ವ ಪಡೆ ವತಿಯಿಂದ ಹಿರಿಯೂರಿನ ಬಿ.ಎಲ್.ಗೌಡ ನಗರದಲ್ಲಿರುವ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಹಾಗೂ ಪೋಕ್ಸೋ ಕಾಯಿದೆ ಕುರಿತು ನಡೆಸಿದ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಿದರು.
ಮಕ್ಕಳಿಗೆ ತಿಂಡಿ ತಿನಿಸು ಆಸೆ ತೋರಿಸಿ ವಂಚಿಸುವಂತಹ ಜನರಿಂದ ಜಾಗರೂಕರಾಗಿರಬೇಕು ಎಂದರು ಅಲ್ಲದೇ ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಮೊಬೈಲ್ ಅನಾವಶ್ಯಕ ಬಳಕೆಯಿಂದಾಗುವ ದುಷ್ಟರಿಣಾಮದಿಂದ ದೂರ ಇರಬೇಕು ಎಂದರು.
ಓಬವ್ವ ಪಡೆಯ ಮಹಿಳಾಪೊಲೀಸ್ ಸಿಬ್ಬಂದಿ ವಿಜಯಕುಮಾರಿ, ಚೇತನ, ಲತಾ, ಮಂಜುಳ, ಪ್ರತಿಭಾ ಈ ಬಗ್ಗೆ ವಿದ್ಯಾರ್ಥಿನಿಯರಿಗೆ ಪ್ರಾತ್ಯಕ್ಷಿಕೆ ನಡೆಸಿದರು. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಾರದ ಅನುಲ ದೊಡ್ಡಮನಿ ಉಪಸ್ಥಿತರಿದ್ದರು.