ಸಂಬಳದ ಕೇವಲ 100 ರೂಗಳಿಗೆ ಜಗಳ ತೆಗೆದು ಕೊಲೆಗೈದ ಮನೆಕಳ್ಳ

ಬೆಂಗಳೂರು:

ಸಂಬಳದ ಕೇವಲ 100 ರೂಗಳಿಗೆ ಜಗಳ ತೆಗೆದು ಕಬಾಬ್ ಅಂಗಡಿ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆಗೈದ ಮನೆಕಳ್ಳ ಸೇರಿ ಇಬ್ಬರು ಆರೋಪಿಗಳಿಗೆ ಚಿಕ್ಕಬಳ್ಳಾಪುರದ 2ನೇ ಸತ್ರ ನ್ಯಾಯಲಯ ಜೀವವಾಧಿ ಶಿಕ್ಷೆ ವಿಧಿಸಿದೆ.

ಚಿಂತಾಮಣಿಯಲ್ಲಿ ತಳ್ಳುವ ಗಾಡಿಯಲ್ಲಿ ಕಬಾಬ್ ವ್ಯಾಪಾರ ಮಾಡುತ್ತಿದ್ದ ತಬರೇಜ್‍ಖಾನ್‍ನನ್ನು ಕೊಲೆಗೈದಿದ್ದ ಆರೋಪಿಗಳಾದ ಮನೆಗಳ್ಳ ಹರೀಶ್ ಹಾಗೂ ಶ್ರೀನಿವಾಸ್‍ಗೆ 2ನೇ ಸತ್ರ ನ್ಯಾಯಲಯದ ನ್ಯಾಯಾಧೀಶರಾದ ಸರ್ವೋದಯ ಶೆಟ್ಟಿಗಾರ್ ಅವರು 50 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ವಿವರ

ಕಬಾಬ್ ಅಂಗಡಿಯನ್ನು ನಡೆಸುತ್ತಿದ್ದ ತಬರೇಜ್‍ಗೆ ಚಿಂತಾಮಣಿಯ ಜೆಜೆ ಕಾಲೋನಿಯ ಹರೀಶ್ ಪರಿಚಯವಾಗಿದ್ದು ಕೆಲಸವಿಲ್ಲದ ಆತನಿಗೆ ತನ್ನ ಅಂಗಡಿಯಲ್ಲಿ ಸಹಾಯಕನಾಗಿ ಸೇರಿಕೊಂಡಿದ್ದರು.ಕೆಲ ದಿನ ಕಾಲ ಕೆಲಸ ಮಾಡಿಕೊಂಡಿದ್ದ ಹರೀಶ್ ಹಾಗೂ ತಬರೇಜ್ ನಡುವೆ ಸಂಬಳದ ವಿಚಾರವಾಗಿ ಜಗಳ ಉಂಟಾಗಿದೆ.

ಕಳೆದ 2016ರ ಜೂನ್ 14ರಂದು ನನಗೆ ಇನ್ನೂ ಹಣ ಬರಬೇಕಿದೆ ಎಂದು ಹರೀಶ್ ಗಲಾಟೆ ಶುರು ಮಾಡುತ್ತಾನೆ.ಇದೇ ವೇಳೆ ತಬರೇಜ್ ಖಾನ್ ಅಣ್ಣ ಬಂದು ಗಲಾಟೆಯನ್ನು ಸರಿಪಡಿಸಿ ತಮ್ಮನನ್ನು ಮನೆಗೆ ಕಳುಹಿಸುತ್ತಾನೆ.

ತಮ್ಮನನ್ನು ಮನೆಗೆ ಕಳುಹಿಸಿದ ಅಣ್ಣ ತನ್ನ ಮನೆಗೆ ಹೊರಡುತ್ತಾನೆ. ಆದರೆ ಹರೀಶ್ ತನಗೆ ಹಣ ಕೊಟ್ಟಿಲ್ಲವೆಂದು ತಬರೇಜ್‍ನನ್ನು ಬಿಡಬಾರದೆಂದು ತೀರ್ಮಾನಿಸುತ್ತಾನೆ.ಅಲ್ಲಿ ಪರಿಚಯವಾದನೇ 2ನೇ ಹಂತಕ ಶ್ರೀನಿವಾಸ್. ಅದೇ ದಿನ ರಾತ್ರಿ ಶ್ರೀನಿವಾಸ್‍ಗೆ ಹರೀಶ್ ನಡೆದ ಘಟನೆಯನ್ನೆಲ್ಲ ತಿಳಿಸುತ್ತಾನೆ. ಬಾರ್‍ಗೆ ಹೋಗಿ ಕಂಠಪೂರ್ತಿ ಕುಡಿದು ತಬರೇಜ್ ಖಾನ್ ಬಳಿ ಹಣ ಪಡೆಯಲೇಬೇಕೆಂದು ಇಬ್ಬರೂ ತೀರ್ಮಾನಿಸುತ್ತಾರೆ.

ರಾತ್ರಿ ಗಲಾಟೆ ಕೊಲೆ

ಅದೇ ರಾತ್ರಿ ಸುಮಾರು 1:30ರ ಸುಮಾರಿಗೆ ತಬರೇಜ್ ಖಾನ್ ಮನೆ ಬಳಿ ಹೋಗಿ ಗಲಾಟೆ ಮಾಡುತ್ತಾರೆ. ಕೆಲಸ ಮಾಡಿದ ಹಣವನ್ನು ಕೊಡುವುದಿಲ್ವಾ ಬಾ ನಿನಗೆ ಇದೆ, ಇವತ್ತು ನಿನ್ನನ್ನು ನೋಡಿಕೊಳ್ತೇವೆ ಎಂದು ಹೇಳಿ ಶ್ರೀನಿವಾಸ್ ಹಾಗೂ ಹರೀಶ್ ಮನೆಯಿಂದ ರಸ್ತೆ ಬದಿಗೆ ಎಳೆದೊಯ್ದು ಮುಗಿಸುವುದಾಗಿ ತಬರೇಜ್‍ಗೆ ಬೆದರಿಸುತ್ತಾರೆ. ರಾತ್ರಿ ನಿದ್ರೆಯಲ್ಲಿದ್ದ ಸ್ಥಳೀಯರಿಗೆ ಘಟನೆ ಅಷ್ಟಾಗಿ ಅರಿವಿಗೂ ಬರುವುದಿಲ್ಲ.

ಆದರೆ ಕೂಗಾಡುವುದು ತಬರೇಜ್ ಖಾನ್ ಅಣ್ಣನಿಗೆ ಕೇಳಿಸಿ ಆತ ಹೊರಬರುತ್ತಾನೆ. ಅಷ್ಟರಲ್ಲಿ ಶ್ರೀನಿವಾಸ್ ತಬರೇಜ್‍ನನ್ನು ರಸ್ತೆಯಲ್ಲಿ ಕೆಳಗೆ ಬೀಳಿಸಿರುತ್ತಾನೆ. ಹರೀಶ್ ತಂದಿದ್ದ 2 ಚಾಕುಗಳಲ್ಲಿ ಬಲಗೈಯಲ್ಲಿದ್ದ ಚಾಕುವಿನಿಂದ 5-6 ಬಾರಿ ಬೆನ್ನಿಗೆ ಚುಚ್ಚುತ್ತಾನೆ. ಇದನ್ನು ಗಮನಿಸಿದ ಅಣ್ಣ ಜೋರಾಗಿ ಕೂಗಿದಾಗ ಕೈಯಲ್ಲಿದ್ದ ಒಂದು ಚಾಕುವನ್ನು ಅಲ್ಲೇ ಬಿಸಾಡಿ ಆರೋಪಿಗಳು ಪರಾರಿಯಾಗುತ್ತಾರೆ.

ತಬರೇಜ್ ಖಾನ್ ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾನೆ. ತಮ್ಮನನ್ನು ಅಲ್ಲೇ ಇದ್ದ ವಾಹನದಲ್ಲಿ ನಗರದ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಆದರೆ ಅಷ್ಟರಲ್ಲಿ ತಬರೇಜ್ ಸಾವನ್ನಪ್ಪಿರುತ್ತಾನೆ. ಆರೋಪಿ ಹರೀಶ್ ಮೇಲೆ ಈಗಾಗಲೇ ಕಳ್ಳತನ ಪ್ರಕರಣಗಳು ಸಹ ದಾಖಲಾಗಿರುತ್ತದೆ.

ಆರೋಪಿಗಳ ಬೆನ್ನಟ್ಟಿ ಸೆರೆ

ತಬರೇಜ್ ಖಾನ್ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ನಗರದ ಠಾಣೆ ಪೆÇಲೀಸರು, ಆರೋಪಿಗಳ ಬೆನ್ನುಹತ್ತಿದ್ದು ಪೆÇಲೀಸರು ಬರುವುದನ್ನು ಗಮನಿಸಿದ ಆರೋಪಿಗಳು ತಾಲೂಕಿನ ಕೆಂಚಾರಹಳ್ಳಿ ಕೆರೆ ಬಳಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸುತ್ತಾರೆ.

ಆದರೆ ಯಶಸ್ವಿ ಕಾರ್ಯಾಚರಣೆ ನಡೆಸಿದ ನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನಡೆಸಿ ವಿಚಾರಣೆ ವೇಳೆ ಆರೋಪಿಗಳು ತಪ್ಪು ಒಪ್ಪಿಕೊಳ್ಳುತ್ತಾರೆ.ತನಿಖೆಯ ನಂತರ ಸೂಕ್ತ ಸಾಕ್ಷ್ಯಗಳೊಂದಿಗೆ 2ನೇ ಸತ್ರ ನ್ಯಾಯಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು ಈ ಬಗ್ಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಸರ್ವೋದಯ ಶೆಟ್ಟಿಗಾರ್ ಅವರು ಆರೋಪಿಗಳಿಗೆ 50 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

Recent Articles

spot_img

Related Stories

Share via
Copy link