ಹಾನಗಲ್ಲ :
ತಾಲೂಕಿನ ಬಮ್ಮನಹಳ್ಳಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕವಿತಾ ಮಲ್ಲಿಕಾರ್ಜುನ ಹಾವಣಗಿ ಆಯ್ಕೆಯಾಗಿದ್ದಾರೆ.
ಬಮ್ಮನಹಳ್ಳಿ ಗ್ರಾಪಂನಲ್ಲಿ ಒಟ್ಟು 20 ಸದಸ್ಯ ಸ್ಥಾನಗಳಿದ್ದು, 14 ಜನ ಬಿಜೆಪಿ ಬೆಂಬಲಿತ ಹಾಗೂ 6 ಜನ ಕಾಂಗ್ರೆಸ್ ಪಕ್ಷ ಬೆಂಬಲಿತರಿದ್ದಾರೆ. ಸಧ್ಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಮಲಾಕ್ಷಿ ಯಲ್ಲಪ್ಪ ಮಂಡಕ್ಕಿ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರೆಲ್ಲರ ಬಹುಮತದೊಂದಿಗೆ ಕವಿತಾ ಮಲ್ಲಿಕಾರ್ಜುನ ಹಾವಣಗಿ ಅವರು ಆಯ್ಕೆಯಾಗಿದ್ದಾರೆ.
ಅಭಿನಂದನೆ :
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷೆ ಹಾವಣಗಿ ಅವರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಸಿ.ಎಂ.ಉದಾಸಿ, ಪಂಚಾಯತರಾಜ್ ವ್ಯವಸ್ಥೆಯಲ್ಲಿ ಎಲ್ಲರನ್ನೂ ಒಟ್ಟಾಗಿ ವಿಶ್ವಾಸದಿಂದ ಮುನ್ನಡೆಸುವುದು ಪಕ್ಷದ ಮುಖಂಡರಿಗೆ ಕಷ್ಟಸಾಧ್ಯವಾಗುತ್ತಿದೆ. ಆದರೆ ಬಮ್ಮನಹಳ್ಳಿ ಗ್ರಾಪಂ ಸದಸ್ಯರು ಈ ವಿಷಯದಲ್ಲಿ ಒಮ್ಮತವನ್ನು ಪ್ರದರ್ಶಿಸಿರುವುದು ಶ್ಲಾಘನೀಯವಾಗಿದೆ. ಪಕ್ಷದ ಮುಖಂಡರ ನಿರ್ಣಯಕ್ಕೆ ಒಪ್ಪಿಕೊಂಡು ಶಿಸ್ತನ್ನು ಪಾಲಿಸಿದ್ದಾರೆ. ಹಿಂದಿನ ಅಧ್ಯಕ್ಷರು ಒಪ್ಪಂದದಂತೆ ಮುಂದಿನವರಿಗೆ ಅವಕಾಶ ಮಾಡಿಕೊಟ್ಟಿರುವುದು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಗ್ರಾಪಂ ಅಭಿವೃದ್ಧಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಹರಿದು ಬರುತ್ತಿದೆ. ನಿಮ್ಮ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಾಧ್ಯವಿದೆ. ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ಕಾರ್ಯಗಳು ಜನಮನದಲ್ಲಿ ಉಳಿಯುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಪದ್ಮನಾಭ ಕುಂದಾಪುರ, ಸದಸ್ಯರಾದ ರೇಣುಕಾ ಸವಣೂರ, ಗೀತಾ ಚಿಕ್ಕಣಗಿ, ಅಂಜನಾದೇವಿ ರಜಪೂತ, ಸರೋಜಾ ಕಮ್ಮಾರ, ದೊಡ್ಡಬಸಪ್ಪ ಮಲ್ಲಮ್ಮನವರ, ಫಕ್ಕೀರಪ್ಪ ಜಿಗಳಿಕೊಪ್ಪ, ರಾಮಣ್ಣ ಬಂಕಾಪುರ, ಮಾರುತಿ ವಡ್ಡರ, ಬಸನಗೌಡ ಪಾಟೀಲ, ಸ್ಥಳೀಯ ಬಿಜೆಪಿ ಮುಖಂಡರಾದ ಯಲ್ಲಪ್ಪ ಮಂಡಕ್ಕಿ, ಬಂಗಾರಪ್ಪ ಕಾಮನಹಳ್ಳಿ, ಲೋಕೇಶ ಹೊಳಲದ, ಚಂದ್ರು ಗಾಣಿಗೇರ, ಸಿದ್ದನಗೌಡ ಪಾಟೀಲ ಮೊದಲಾದವರಿದ್ದರು.