ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದ ಸಂಘಟನೆಗಳು

ತುಮಕೂರು:

       ರಾಜ್ಯದ ಕೊಡಗಿನಲ್ಲಿ ಉಂಟಾಗಿರುವ ಭೀಕರ ಮಳೆ-ಪ್ರವಾಹ ಸಂತ್ರಸ್ಥರಿಗೆ ನೆರವು ನೀಡಲು ನಗರದ ಸ್ನೇಹ ಸ್ಪೂರ್ತಿ ಸೇವಾ ಟ್ರಸ್ಟ್ ಮುಂದಾಗಿದ್ದು ಸಮಿತಿ ಪದಾಧಿಕಾರಿಗಳು ಮತ್ತು ವಿಜಯ ಪಿಯು ಕಾಲೇಜ್ ಸಹಯೋಗದೊಂದಿಗೆ ಸಾರ್ವಜನಿಕರಿಂದ ವಸ್ತುಗಳ ರೂಪದಲ್ಲಿ ಸಾಮಾನುಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಗಳಿಗೆ ತಪುಪಿಸುವ ಕಾರ್ಯ ಆರಂಭಿಸಿದೆ.

      ನಗರದ ಡಾ. ಶಿವಕುಮಾರ ಸ್ವಾಮಿಜಿ ವೃತ್ತದ ಐಸಿಐಸಿ ಬ್ಯಾಂಕ್ ಎದುರು ಭಾನುವಾರದಿಂದ ವಿವಿಧ ವಸ್ತುಗಳ ಸಂಗ್ರಹ ಕಾರ್ಯ ಆರಂಭಿಸಿದ್ದು ನಗರದ ನಾಗರೀಕರು ಹಲವು ವಸ್ತುಗಳನ್ನು ಸ್ಥಳಕ್ಕೆ ಬಂದು ನೀಡುತ್ತಿದ್ದಾರೆ.

      ಆ.22 ಬುಧವಾರದ ವರೆಗೆ ವಸ್ತುಗಳನ್ನು ಶಿವಕುಮಾರ ಸ್ವಾಮಿ ವೃತ್ತದಲ್ಲಿ ಸ್ನೇಹ ಸ್ಪೂರ್ತಿ ಸೇವಾ ಟ್ರಸ್ಟ್ ವತಿಯಿಂದ ಸಂಗ್ರಹಣೆ ಮಾಡಲಾಗುವುದು ಆಸಕ್ತರು ಇಲ್ಲಿಗೆ ಬಂದು ತಮ್ಮ ಕೈಲಾದ ವಸ್ತುಗಳನ್ನು ನೀಡಬಹುದೆಂದು ಟ್ರಸ್ಟ್‍ನ ಕಾರ್ಯದರ್ಶಿ ಪವಿತ್ರ ದೀಪಕ್ ಮನವಿ ಮಾಡಿದ್ದಾರೆ.

      ನಾಗರೀಕರು ಆ್ಯಂಟಿ ಫಂಗಲ್ ಕ್ರೀಮ್, ಪ್ಲಾಸ್ಟಿಕ್ ಮ್ಯಾಟ್ಸ್, ಬಳಸದಿರುವ ಬಟ್ಟೆಗಳು, ಲುಂಗಿ, ಬ್ಲಾಂಕೆಟ್ಸ್ ಮತ್ತು ಬೆಡ್‍ಶೀಟ್‍ಗಳು, ಅಕ್ಕಿ, ಕಾಳು, ದವಸ ಧಾನ್ಯಗಳು, ಟೆಟ್ರಾಪ್ಯಾಕ್ ಹಾಲು, ಹಾಲಿನ ಪುಡಿ, ಟೂತ್‍ಪೇಸ್ಟ್, ಬ್ರೇಶ್‍ಗಳು, ಕೆಮ್ಮು ಶೀತದ ಔಷದಿ, ಪ್ಯಾರಸಿಟೆಮೆಲ್, ರ್ಯಾಟಕ್ ಮಾತ್ರೆ, ಒಆರ್‍ಎಸ್, ಬೆಚ್ಚನೆಯ ಉಡುಪುಗಳು, ಕ್ಯಾಂಡಲ್, ಬೆಂಕಿಪಟ್ಟಣ, ಸೋಪು, ಒಣ ಹಣ್ಣುಗಳು ಬಿಸ್ಕತ್ ಎಲ್ಲಾ ವಯೋಮಾನದವರ ಒಳ ಉಡುಪುಗಳು, ಬಟ್ಟೆ ನೀರಿನ ಬಾಟಲ್ ಮಾತ್ರ ಸ್ವೀಕರಿಸಲಾಗುವುದು ಯಾವುದೇ ನಗದು ಸ್ವೀಕರಿಸುವುದಿಲ್ಲ ವಸ್ತುಗಳನ್ನು ಮಾತ್ರ ಸ್ವೀಕರಿಸಲಾಗುವುದೆಂದು ಟ್ರಸ್ಟ್‍ನ ಅಧ್ಯಕ್ಷೆ ಶಾಂತಪುರುಷೋತ್ತಮ್ ತಿಳಿಸಿದ್ದಾರೆ.

      ಈ ಟ್ರಸ್ಟ್ ನೊಂದಿಗೆ ನಾವು ಸ್ಪಂಧಿಸಿ ಸಮಸ್ಯೆಗಳಲ್ಲಿ ಸಿಲುಕಿರುವ ಜನರಿಗೆ ನೆರವಾಗುತ್ತಿದ್ದೇವೆ ಎಂದು ವಿಜಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಧನಂಜಯ ಅವರು ತಿಳಿಸಿದ್ದಾರೆ. ನಾಗರೀಕರು ತಮ್ಮ ಕೈಲಾದ ಸಹಾಯವನ್ನು ನೆರೆ ಸಂತ್ರಸ್ತರಿಗೆ ನೀಡಬಹುದು ಎಂದು ಕೋರಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link