ಹಾವೇರಿ:
ವಿಶ್ವ ಛಾಯಾಗ್ರಹಣ ದಿನ ಹಾಗೂ ಬೆಂಗಳೂರು ದೇವನಹಳ್ಳಿ ಟೌನ್ ಛಾಯಾಗ್ರಾಹಕರ ಸಂಘದ ದಶಮಾನೋತ್ಸವ ಪ್ರಯುಕ್ತ ಏರ್ಪಡಿಸಿದ್ದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಹಾವೇರಿಯ ಪತ್ರಿಕಾ ಛಾಯಾಗ್ರಾಹಕ ನಾಗೇಶ ಬಾರ್ಕಿಯವರ `’ಬುಲ್ ಕಿಕ್; ಶೀರ್ಷಿಕೆಯ ಛಾಯಾಚಿತ್ರವು `ನಮ್ಮ ಕರ್ನಾಟಕ’ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಪ್ರಶಸ್ತಿಯು ನಗದು, ಪ್ರಮಾಣಪತ್ರ ಹಾಗೂ ಪಾರಿತೋಷಕ ಒಳಗೊಂಡಿದೆ