ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ

ಸಿರಿಗೇರಿ: 

      ತುಂಗಾಭದ್ರಾ ಜಲಾಶಯ ಭರ್ತಿಅಗಿದ್ದರಿಂದ ನದಿಗೆ 2ಲಕ್ಷ ಕ್ಯೂಸೆಕ್ ಗೂ ಅಧಿಕ ನೀರನ್ನು ನದಿಯ ಮೂಲಕ ಹರಿಬಿಟ್ಟಿದ್ದು ನದಿಯಲ್ಲಿ ಅಪಾಯದ ಮಟ್ಟ ಮೀರಿಯೂ ನದಿ ಹರಿಯುತ್ತಿದ್ದು. ನದಿತಿರದ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿ ಭತ್ತದ ಬೇಳಗಳು ಕೊಚ್ಚಿಹೋದ ಕಾರಣದಿಂದ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ರವರು ನದಿ ಪಾತ್ರದ ಜನರ ಕುಂದು ಕೊರೆತೆ ವೀಕ್ಷಣೆ ಹಾಗೂ ಸಿರಿಗೇರಿ ಗ್ರಾಮದ ನಾನ ಸಮಸ್ಯೆಗಳ ಕುರಿತು ಬೇಟಿ ನೀಡಿದರು.

      ಪ್ರಾರಂಭದಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿಕೊಟ್ಟು ಕುಂದುಕೊರತೆ ಬಗ್ಗೆ ಮಾಹಿತಿ ಪಡೆದರು.ನಂತರ ಗ್ರಾಮದ ಮುಖಂಡರು ಹಾಗೂ ಸಂಘ ಸಂಸ್ಥೆಯ ಪಾದಧಿಕಾರಿಗಳು ಪ್ರಾಥಮಿಕ ಆರೋಗ್ಯಕೇಂದ್ರವನ್ನು ಸಮುದಾಯ ಕೇಂದ್ರಕ್ಕೆ ಮೇಲ್ದೆರ್ಜೆಗೆ ವತ್ತಹಿಸಿ ಮನವಿ ಸಲ್ಲಿಸಿದರು. ಮನಿವಿ ಶ್ವಿಕರಿಸಿ ಮಾತನಾಡಿ. ನಾನು ಮೋದಲಬಾರಿಗೆ ಗ್ರಾಮಕ್ಕೆ ಬೇಟಿ ನೀಡಿದ್ದನೆ. ನಿಮ್ಮ ಕ್ಷೇತ್ರದ ಜಿಪಂ ಸದ್ಯಸೆ ರತ್ನಮ್ಮ ಅಡಿವೆಸ್ವಾಮಿಯವರು ಪ್ರತಿ ಸಭೆಯಲ್ಲಿ ಕ್ಷೇತ್ರದ ಅಭಿವೃದ್ದಿ ಬಗ್ಗೆ ಕಾಳಜಿ ವಹಿಸಿ ಮಾತನಾಡುತ್ತರೆ. ಪ್ರಾಥಮಿಕ ಆರೋಗ್ಯದ ಕೇಂದ್ರದ ಮೇಲ್ದರ್ಜೆ ಬಗ್ಗೆ ಬಹಳ ಸಾರಿ ನಮಗೆ ಮನವಿ ಸಲ್ಲಿಸಿದ್ದರೆ. ಅದ್ದರಿಂದ ಡಿಹೆಚ್‍ಓ ಅವರನ್ನು ಕೇಂದ್ರದ ಮಾಹಿತಿ ಪಡೆಯಲು ಒಂದುವಾರದ ನಂತರ ಪರಿಶೀಲನಗೆ ಕಳಿಸಿಕೊಡುತ್ತನೆ. ಮತ್ತು ನಾನು ಕೂಡ ಸರಕಾರಕ್ಕೆ ವತ್ತಹಿಸಿ ಮೇಲ್ದೆರ್ಜಗೆ ಅನೂಕುಲ ಮಾಡುತ್ತನೆ ಎಂದು ಭರವಸೆ ನೀಡಿದರು.

      ಕೇಂದ್ರದಲ್ಲಿ ರೋಗಿಗಳಿಗೆ ಯಾವುದೆ ತರಹದ ನಿರ್ಲಕ್ಷ್ಯ ವಹಿಸಿದಂತೆ ಚಿಕಿತ್ಸೆ ನೀಡಬೇಕು ನಿರ್ಲಕ್ಷ್ಯ ಕಂಡುಬಂದಲ್ಲಿ ಯಾರೆ ಅಗಿರಲಿ ಅವರನ್ನು ನೇರವಾಗಿ ಕೇಲಸದಿಂದ ವಜಾ ಮಾಡಲಾಗುತ್ತದೆ ಎಂದು ಸಿಬ್ಬಂದಿಗಳಿಗೆ ಖಡಕ್ ಹೆಚ್ಚರಿಕೆ ನೀಡಿದರು.

 ನವ ಗ್ರಾಮಕ್ಕೆ ಬೇಟಿ :

      ನವ ಗ್ರಾಮಕ್ಕೆ ಬೇಟಿ ನೀಡಿದ ವೇಳೆ ಅಲ್ಲಿನ ಮಹಿಳೆಯರು ಇಲ್ಲಿನ ನಾವುಗಳು ನೀರು ಬಹಳ ದೂರದಿಂದ ತರಬೇಕು ನಮಗೆ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಅಳಲನ್ನು ತೊಡಿಕೋಂಡರು. ಅದಕ್ಕೆ ಉತ್ತರಿಸಿದ ಅಧ್ಯಕ್ಷೆ ಮುಂದಿನ ಕೆಡಿಪಿ ಸಭೆಯಲ್ಲಿ ತಿರ್ಮಾನಿಸಿ ಪೈಪಲೈನ್ ವ್ಯವಸ್ಥೆಮಾಡುಸುತ್ತನೆ ಎಂದುರು.

ಗ್ರಾಮದ ಹುಚ್ಚೇಶ್ವರ ನಗರಕ್ಕೆ ಬೇಟಿ :

ನಗರದ ಹಾವಿನಹಾಳು ರಸ್ತೆಯ ಚರಂಡಿಯು ಸಂಪೂರ್ಣ ಆಳಾಗಿದ್ದು ನೀರು ಮುಂದಕ್ಕೆ ತೆರಳಲಾಗದೆ ಇದ್ದ ಸ್ಥಳದಲ್ಲೆ ನಿಲ್ಲುತ್ತವೆ ಅದ್ದರಿಂದ ನಾನರೋಗಳಿಗೆ ಜನರು ತುತ್ತಾಗಿದ್ದರೆ ಎಂದು ಅಲ್ಲಿನ ಜನರು ಅಧ್ಯಕ್ಷರಿಗೆ ತಿಳಿಸಿದರು.ತಕ್ಷಣವೇ ಚರಂಡಿಯ ಕ್ರೀಯ ಯೋಜನೆ ಮಾಡಿ ನಮ್ಮ ಕಛೆರಿಗೆ ಪಿಡಿಒ ರವರನ್ನು ತೆಗದುಕೊಂಡು ಬನ್ನಿ ಎಂದು ತರಾಟಗೆ ತೆಗದುಕೋಡರು.

      ತದ ನಂತರ ಮಣ್ಣೂರು ಸುಗೂರೂ ಗ್ರಾಮದ ಜಲಾ ವಿದ್ಯುತ್ ಘಟಕಕ್ಕೆ ಮತ್ತು ನದಿ ದಂಡೆಯ ಬೆಳೆನಾಶವಾದ ಜಮೀನುಗಳಿಗೆ ಬೇಟಿ ನೀಡಿ ಪರಿಶೀಲಿಸಿದರು ಸಂತ್ರಸ್ತರ ಅಹವಾಲು ಸ್ವೀಕರಿಸಿ ಸೂಕ್ತ ಕ್ರಮಕ್ಕಾಗಿ ಜಿಪಂ ಸಭೆಯಲ್ಲಿ ಚರ್ಚಸಿ ಸರಕಾರಕ್ಕೆ ಮನವಿ ಸಲ್ಲಿಸಿಲಾಗುವುದಾಗಿ ಭರವಸೆ ನೀಡಿದರು.

      ಈಸಂದರ್ಭದಲ್ಲಿ ಜಿಪಂ ಸದಸ್ಯೆ ರತ್ನಮ್ಮ ಅಡಿವೆಯ್ಯ ಸ್ವಾಮಿ, ಗ್ರಾಪಂ ಅಧ್ಯಕ್ಷೆ ಕೊಳ್ಳಿದ್ಯಾವಮ್ಮ ಪಾವಡಿನನಾಯ್ಕ ಉಪಾಧ್ಯಕ್ಷ ಗೋಡೆ ಸಂಪ್ಪತ್ತ ತಾಪಂ ಉಪಾದ್ಯಕ್ಷ ಶಾಂತನಗೌಡ, ನೆನಕ್ಕಿ ವಿರಿಪಾಕ್ಷಿ,ಅಡಿವೆಯ್ಯ ಸ್ವಾಮಿ, ಬಕಾಡಿ ಈರಯ್ಯ,ರಾಮಚಂದ್ರಪ್ಪ ಟಿಹೆಚ್‍ಒ ಸುರೇಶ ಗೌಡ,ಪಿಡಿಒ ಯು ರಾಮಪ್ಪ ಪಿಎಸ್‍ಐ ವಿ ಶಂಕರಪ್ಪ, ಎಇಇ ಮಲ್ಲಿಕಾರ್ಜನ್ ರೆಡ್ಡಿ, ಕೃಷಿ ಅಧಿಕಾರಿ ಪಾಲಾಕ್ಷಿಗೌಡ, ನರೇಗ ನೀರ್ಮಲಾ, ಕಂದಾಯ ಇಲಾಖೆ ಈಶ್ವರಪ್ಪ, ಮಹೇಶ, ತೋಟಗಾರಿಕೆ.ವಿಶ್ವನಾಥ, ಬಿ ಕೋಮಾರೆಪ್ಪ ವಿಹನುಮೇಶ, ಮಲ್ಲಿಕಾರ್ಜನ್ ಬಿ ಮಲ್ಲಯ್ಯ ಹನುಮಂತ ಭಮೇಶ್ ಕಾಳಿ ಎರ್ರೆಪ್ಪ, ಅನ್ವರಬಾಸ, ರಮೇಶ ಇನ್ನಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link