ಬರಗೂರು
ತ್ಯಾಗ, ಬಲಿದಾನದ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬವನ್ನು ಬುಧವಾರ ಸಿರಾ ತಾಲ್ಲೂಕು ಬರಗೂರಿನಲ್ಲಿ ಸಮಸ್ತ ಮುಸ್ಲಿಂ ಬಾಂಧವರು ಸೇರಿ ಜಾಮೀಯಾ ಮಸೀದಿಯಿಂದ ಮೆರವಣಿಗೆ ಹೊರಟು ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ, ಸಂಭ್ರಮದಿಂದ ಆಚರಿಸಿದರು.
ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಆಸ್ಪತ್ರೆ ಸರ್ಕಲ್ ಮೂಲಕ ಹಳೆ ಮಸೀದಿವರೆಗೂ ಬಂದು ಗೋರಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಗುರುಗಳೊಂದಿಗೆ ಪರಸ್ಪರ ಶಭಾಶಯ ವಿನಿಮಯ ಮಾಡಿಕೊಂಡರು.








