ಶಿಗ್ಗಾವಿ :
ಆಡಳಿತಕ್ಕೆ ಕರ್ತವ್ಯ ನಿಷ್ಠೆ, ಕಠಿಣ್ಯ ಶಕ್ತಿ ಮುಖ್ಯವಾಗಿಬೇಕು. ಅಧಿಕಾರ ಅನುಭವಿಸುವುದು ಅಥವಾ ಚಲಾಯಿಸುವುದಲ್ಲ, ಅಧಿಕಾರ ಎಂಬುದು ನಿಸ್ವಾರ್ಥ ಸೇವೆಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಡಿ.ಬಿ.ನಾಯಕ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ನಿಯೋಜನೆಗೊಂಡ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಪ್ರೊ. ಸಿ. ಟಿ. ಗುರುಪ್ರಸಾದ ಅವರ ಸ್ವಾಗತ ಹಾಗೂ ಕುಲಸಚಿವ ಹುದ್ದೆಯಿಂದ ಬಿಡುಗಡೆಗೊಂಡ ಪ್ರೊ ಚಂದ್ರಶೇಖರ ಬೀಳ್ಕೊಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬದಲಾವಣೆ ಸೃಷ್ಠಿಯ ನಿಯಮ, ಈ ಹಿನ್ನೆಲೆಯಲ್ಲಿ ಅಧಿಕಾರ ಮತ್ತು ಅಧಿಕಾರಿಗಳು ಬದಲಾಗುತ್ತಲೇ ಇರುತ್ತವೆ. ಅಧಿಕಾರ ಇರುವ ಸಮಯದಲ್ಲಿ ಮಾಡುವ ಕಾರ್ಯಗಳು ಅಧಿಕಾರಿಗಳ ಸೇವೆಯನ್ನು ಜೀವಂತ ಇರಿಸುತ್ತವೆ ಎಂದು ಹೇಳಿದರು.
ಕುಲಸಚಿವರ ಹುದ್ದೆಯಿಂದ ಬಿಡುಗಡೆಗೊಂಡು ಮಾತನಾಡಿದ ಪ್ರೊ. ಚಂದ್ರಶೇಖರ ಅವರು, ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಮುಖ್ಯ ಹಾಗೆಯೇ ಸಂಸ್ಥೆಯನ್ನು ಮುನ್ನಡೆಸಲು ಅಧಿಕಾರಿಗಳಿಗೆ ಕೈಜೋಡಿಸುವ ಪ್ರತಿಯೊಬ್ಬ ಉದ್ಯೋಗಿಯು ಮತ್ತು ಅವರ ಸೇವೆಯು ಪ್ರಮುಖವಾಗಿದೆ. ಅಧಿಕಾರಸ್ಥರು ಅಹಂಕಾರ ಹೊಂದಿರದೆ, ಸಂಸ್ಥೆಯ ಏಳ್ಗೆ ಶ್ರಮಿಸುವ ಮೂಲಕ ಅಧಿಕಾರಾವಧಿಯನ್ನು ಸಾರ್ಥಕಗೊಳಿಕೊಳ್ಳಬೇಕು. ಸಮಾಜ ಕನ್ನಡಿ ಇದ್ದಹಾಗೇ ಅದು ನಮ್ಮ ಎಲ್ಲ ಕಾರ್ಯಗಳನ್ನು ಪ್ರತಿಬಿಂಬವಾಗಿ ತೋರಿಸುತ್ತದೆ ಎಂದು ಹೇಳಿದರು.
ನೂತನ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಪ್ರೊ. ಸಿ.ಟಿ. ಗುರುಪ್ರಸಾದ ಅವರು, ವ್ಯಕ್ತಿಗಿಂತ ಸಂಸ್ಥೆ ದೊಡ್ಡದು, ಸಂಸ್ಥೆ ಬೆಳವಣಿಗೆ ಎಲ್ಲರೂ ಸಹಕಾರದೊಂದಿಗೆ ಶಕ್ತಿ ಮೀರಿ ಬದ್ಧತೆಯಿಂದ ಕಾರ್ಯನಿರ್ವಹಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮೌಲ್ಯಮಾಪನ ಕುಲಸಚಿವರಾದ ಡಾ. ಎಂ.ಎನ್. ವೆಂಕಟೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಚಂದ್ರಪ್ಪ ಸೊಬಟಿ, ಸಹಾಯಕ ಕುಸಚಿವರಾದ ಶಹಜಾಹನ್ ಮುದಕವಿ, ಸಂಶೋಧನಾರ್ಥಿ ಶ್ರೀ ಜಿ.ಎಸ್.ಸಣ್ಣಯ್ಯ ಅವರು ಅನಿಸಿಕೆಯನ್ನು ಈ ಸಮಯದಲ್ಲಿ ವ್ಯಕ್ತಪಡಿಸಿದರು.
ಕಲಾ ಅಧ್ಯಾಪಕರಾದ ಶ್ರೀ ಶರೀಫ್ ಮಾಕಪ್ಪನವರ ಪ್ರಾರ್ಥಿಸಿದರು, ಸಹಾಯಕ ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು, ಸಹಾಯಕ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜುನ ಮನಪ್ಪಾಡೆ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ