ಸುಳ್ಯ
ಸಾರಿಗೆ ಸಂಸ್ಥೆಯು ಬೆಂಗಳೂರಿನಿಂದ ಕೊಡಗಿಗೆ ಆರಂಭವಾದಂತೆ ದ.ಕನ್ನಡದ ಸುಳ್ಯದಿಂದಲೂ ಮಡಿಕೇರಿಗೆ ಬಸ್ ಸೇವೆ ಆರಂಭಿಸಿದೆ ಸದ್ಯ ಮಳೆ ಇಳಿಮುಖವಾದ್ದರಿಂದ ಸುಳ್ಯದಿಂದ ಮಡಿಕೇರಿಗೆ ಕೆಎಸ್ಸಾರ್ಟಿಸಿ ವತಿಯಿಂದ ಮಿನಿ ಬಸ್ ಸೇವೆ ಬುಧವಾರವೇ ಆರಂಭಿಸಲಾಯಿತು. ಬಸ್ ನ ಮಾರ್ಗ ಮಡಿಕೇರಿಯಿಂದ ಭಾಗಮಂಡಲ ಕರಿಕೆ ಸುಳ್ಯಕ್ಕೆ. ಕೆ.ಎಸ್.ಆರ್. ಟಿ.ಸಿ ವತಿಯಿಂದ ಮಿನಿ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದು ಮಡಿಕೇರಿ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ. ಆದರೆ ಬಸ್ ನ ಸಮಯ ನಿಗದಿಯಾಗಿಲ್ಲ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








