ಹಗರಿಬೊಮ್ಮನಹಳ್ಳಿ:
ಕೇರಳ ಹಾಗೂ ಕೊಡಗು ಸಂತ್ರಸ್ತರ ಬದುಕಿನ ಬವಣೆ ಶೀಘ್ರಗತಿಯಲ್ಲಿ ಸುಧಾರಿಸುವಂತೆ ಕರ್ನಾಟಕಾ ರಕ್ಷಣಾ ಸೇನೆಯ ವತಿಯಿಂದ ಪಟ್ಟಣದ ಏಳು ದೇವಸ್ಥಾನಗಳಿಗೆ ಉರುಳು ಸೇವೆ ಮಾಡಲಾಯಿತು.
ತಾಲೂಕಿನ ಕರ್ನಾಟಕಾ ರಕ್ಷಣಾ ಸೇನೆಯ ವತಿಯಿಂದ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಹಾಗೂ ಕೇರಳದ ಜನತೆಗೆ ಶೀಘ್ರವೇ ಮೊದಲಿನಂತೆ ಜೀವನ ನಡೆಸಲು ಸನ್ನಧ್ಧರಾಗಲೆಂದು ದೇವರ ಮೊರೆ ಹೋಗಿದ್ದು ಅಧ್ಯಕ್ಷ ಗೋಟೂರು ಶಿವಕುಮಾರ್ರವರು ಪಟ್ಟಣದ ಏಳು ದೇವಸ್ಥಾನಗಳಿಗೆ ಬೆಳೆಗ್ಗೆ 5.30 ರಿಂದ ಉರುಳು ಸೇವೆಯನ್ನು ಪ್ರಾರಂಭ ಮಾಡಿದರು.
ಪಟ್ಟಣದ ನೀಲಕಂಠೇಶ್ವರ ದೇವಸ್ಥಾನ ದಿಂದ ಪ್ರಾರಂಭಿಸಿ ಕಲ್ಲೇಶ್ವರ ದೇವಸ್ಥಾನ ,ಹಗರಿ ಆಂಜನೇಯ ದೇವಸ್ಥಾನ, ಈಶ್ವರ ದೇವಸ್ಥಾನ,ಅಯ್ಯಪ್ಪ ಸ್ವಾಮಿ ದೇವಸ್ಥಾನ, ಪತ್ರಿ ಬಸವೇಶ್ವರ ದೇವಸ್ಥಾನ ,ಹಾಲ ಶಂಕರ ದೇವಸ್ಥಾನಗಳಿಗೆ ಕಾಲ್ನೆಡಿಗೆ ಮಾಡುವುದರ ಮುಖಾಂತರ ಮೌನವ್ರತವನ್ನು ಕೈಗೊಂಡು ದೇವರಲ್ಲಿ ಸಂತ್ರಸ್ತರಿಗೆ ಸುಖಮಯ ಜೀವನ ನಡೆಸಲು ಆಶೀರ್ವದಿಸುವಂತೆ ಹರಕೆಯನ್ನು ತೀರಿಸಿದರು.
ಹರಕೆ ತೀರಿಸಿದ ಬಳಿಕ ಕರಸೇ ಅಧ್ಯಕ್ಷ ಗೋಟೂರು ಶಿವಕುಮಾರ ಮಾತನಾಡಿ ಅತೀವೃಷ್ಠಿಯಿಂದ ಸಂಕಷ್ಠಕ್ಕೆ ಸಿಲುಕಿರುವ ಕೊಡಗು ಹಾಗೂ ಕೇರಳದಲ್ಲಿ ಈ ಘಟನೆಯಿಂದ ಹಲವಾರು ಗ್ರಾಮಗಳು ಮುಳುಗಡೆಯಾಗಿವೆ ,ಜನರು ಅಂತಂತ್ರ ಸ್ಥಿತಿಯಲ್ಲಿ ಬದುಕನ್ನು ಸವೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಸಂಗತಿಯಾಗಿದೆ. ತಾಲೂಕಿನಲ್ಲಿನ ಹಲವಾರು ಸಂಘ ಸಂಸ್ಥೆಗಳು ಹಾಗೂ ಪತ್ರಿಕಾ ಬಳಗದವರು ಹಣಕಾಸು ಹಾಗೂ ದಿನನಿತ್ಯ ಬಳಸಲ್ಪಡುವ ಸಾಮಾಗ್ರಿಗಳನ್ನು ನಿರಾಶ್ರಿತರಿಗೆ ಮುಟ್ಟಿಸುವಲ್ಲಿ ಸಫಲರಾಗಿದ್ದಾರೆ ಪಟ್ಟಣದ ಜನತೆಗೆ ಸಂಘವು ಚಿರಋಣಿಯಾಗಿದೆ ಮುಂದಿನ ದಿನಗಳಲ್ಲಿ ಸಂತ್ರಸ್ತರಿಗೆ ದೇವರು ಧೈರ್ಯ ನೀಡುವುದರ ಮೂಲಕ ಸುಖಮಯ ಜೀವನ ನಡೆಸುವಂತಾಗಲಿ ಎಂದು ಸಂಘದ ಪರವಾಗಿ ಪಟ್ಟಣದ ದೇವಸ್ಥಾನಗಳಿಗೆ ಉರುಳು ಸೇವೆಯನ್ನು ಮಾಡಿದ್ದೆವೆ ಎಂದು ತಿಳಿಸಿದರು ಹಾಗೂ ಪ್ರತಿಯೊಂದು ದೆವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಮಾಡಿಸಲಾಗಿದೆ ಎಂದರು.
ಈ ವೇಳೆಯಲ್ಲಿ ನೀಲಕಂಠೇಶ್ವರ ದೇವಸ್ಥಾನದ ಅರ್ಚಕರಾದ ಸಂಗಮೇಶ ಸ್ವಾಮಿಗಳು ಉರುಳು ಸೇವೆಯ ನಿಯಮಗಳನ್ನು ತಿಳಿಸಿದರು, ಹಿರಿಯರಾದ ರೇಣುಕಮ್ಮ ಸಹಕಾರ ನೀಡಿದರು.
ಈ ಸಂಧರ್ಭದಲ್ಲಿ ಕರಸೇ ಉಪಾಧ್ಯಾಕ್ಷ ಮಂಜುನಾಥ್, ನಗರಾಧ್ಯಕ್ಷ ರಾಜಾವಲಿ ಗಡ್ಡದ್, ಕಾರ್ಯದರ್ಶಿ ವಿಶ್ವನಾಥ್, ಖಚಾಂಚಿ ಶೇಖರ್,ಸಹ ಸಂಚಾಲಕ ಮಾಧವ, ಪ್ರದೀಪ್ಗೌಡ,ಸದಸ್ಯರಾದ ವಿಜಯ್, ಹಾಲೇಶ್, ನಾಗರಾಜ, ಶ್ರೀನಿವಾಸ್, ಹನುಮಂತ, ನವೀನ್ ಉಪಸ್ಥಿತರಿದ್ದರು.








