ಆ 700 ಕೋಟಿಯ ಮರ್ಮ: ಯುಎಇ ಸ್ಪಷ್ಟನೆ

ನವದೆಹಲಿ

                  ಕೇರಳದ ಪ್ರವಾಹ ಪೀಡಿತ ಪ್ರವಾಹ ಪೀಡಿತರಿಗೆ ಮೋದಿ ಸರಕಾರ ನೀಡಿದ್ದು 600 ಕೋಟಿ, ಆದರೆ ಯುಎಇ ಸರಕಾರ ಕೊಡೋಕೆ ಮುಂದಾಗಿರುವುದು 700 ಕೋಟಿ. ಒಂದಾ ತಾನು ಕೊಡಬೇಕು, ಇಲ್ಲಾಂದ್ರೆ ಕೊಡೋಕೆ ಬಂದವರನ್ನ ತಡೆಯೋಗೆ ಹೋಗಬಾರದು.. ಹೀಗೆ.. ಸಾಮಾಜಿಕ ತಾಣದಲ್ಲಿ ಮೋದಿ ಸರಕಾರವನ್ನು ಅಣಕವಾಡಿದವರೇ ಹೆಚ್ಚು.

                    ಅಸಲಿಗೆ, ಯುಎಇ ಸರಕಾರ 700 ಕೋಟಿ ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದು ನಿಜಾನಾ? ಎಂಬ ಪ್ರಶ್ನೆಗೆ  ಅಲ್ಲಿನ ಸರಕಾರ ಅತ್ಯಂತ ಸ್ಪಷ್ಟವಾಗಿ ಉತ್ತರಿಸಿದೆ. ಕೇರಳಕ್ಕೆ ಎಷ್ಟು ಆರ್ಥಿಕ ಸಹಾಯ ಮಾಡಬೇಕೆಂದು ಇನ್ನೂ ನಿರ್ಧಾರವಾಗಿಲ್ಲ ಎಂದು ಯುಎಇ ರಾಯಭಾರಿ ಅಹಮದ್ ಅಲ್ಬಾನಾ ತಿಳಿಸಿದ್ದಾರೆ. ಆದರೆ, ಯುಎಇ  ಸರಕಾರ ನೆರವಿನ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಕೇಂದ್ರ ಸರಕಾರ ಈ ನೆರವನ್ನು ಒಪ್ಪಿಕೊಳ್ಳಬೇಕೆಂದು ಕೇರಳದ ಸಿಎಂ ಪಿಣರಾಯಿ ವಿಜಯನ್ ಹೇಳುವ ಮೂಲಕ ತಮ್ಮ ಹಿಂದಿನ ನಿಲುವಿಗೆ ಬದ್ದರಾಗಿದ್ದಾರೆ.

ಸ್ಪಷ್ಟನೆ:

                   ನವದೆಹಲಿಯ ಯುಎಇ ದೂತಾವಾಸ ಕಚೇರಿಯಲ್ಲಿ ಮಾತನಾಡುತ್ತಿದ್ದ ಅಲ್ಬಾನಾ, ಪ್ರವಾಹ ಪೀಡಿತ ಕೇರಳಕ್ಕೆ ನೆರವಿನ ವಿಚಾರದಲ್ಲಿ ನಮ್ಮ ಸರಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಹೇಳಿಕೆ ಹೊರಬೀಳುತ್ತಿದ್ದಂತೇ ಸ್ಪಷ್ಟನೆ ನೀಡಿದ ಕೇರಳದ ಸಿಎಂ, ಅನಿವಾಸಿ ಉದ್ಯಮಿ ಯೂಸುಫ್ ಆಲಿ ಈ ನೆರವಿನ ಬಗ್ಗೆ ನನಗೆ ತಿಳಿಸಿದ್ದರು ಎಂದು ತಿಳಿಸಿದ್ದಾರೆ.
          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link