ಹಾವೇರಿ :
ನಗರದಲ್ಲಿ 309 ವರ್ಷಗಳ ಹಿಂದೆ ಸ್ಥಾಪಿತವಾದ ಹಾಗೂ ಮಂತ್ರಾಲಯ 2ನೇ ವೃಂದಾವನವೂ ಸಹ ಭಕ್ತಿಯ ನೆಲೆಯಾಗಿದೆ. ಕಲಿಯುಗದಕಾಮಧೇನುವಾಗಿ ಲಕ್ಷೋಪಲಕ್ಷ ಭಕ್ತ ಶ್ರೇಷ್ಠರಿಗೆ ಹೊಸ ಬೆಳಕಾಗಿ ಶ್ರೇಷ್ಠ ಗುರುಗಳಾಗಿ ನಂತರ ಸಶರೀರರಾಗಿ ವೃಂದಾವನ ಪ್ರವೇಶ ಮಾಡಿದ ಶ್ರೀ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವವು ಆಗಸ್ಟ್ 27ರಿಂದ 29ರವರೆಗೆ ಮೂರು ದಿನಗಳವರೆಗೆ ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಇಂದು (ದಿ 27) ಸೋಮವಾರ (ಪಾಡ್ಯ) ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪೂರ್ವಾರಾಧನೆ ಬೆಳಿಗ್ಗೆ 7-00ಗಂಟೆಗೆ ಅಷ್ಟೋತ್ತರ ಹಾಗೂ 9-30ಗಂಟೆಗೆ ಪಂಚಾಮೃತ ಅಲಂಕಾರ ಮಧ್ಯಾಹ್ನ 12-30ಕ್ಕೆ ಹಸ್ತೋದಕ ಸಾಯಂಕಾಲ 7-00 ಗಂಟೆಗೆ ಹೂವಿನ ರಥೋತ್ಸವ ನಂತರ ಅಷ್ಟಾವಧಾನ ಮತ್ತು ಮಹಾಮಂಗಳಾರುತಿ.
ದಿ 28 ಮಂಗಳವಾರ ಬೆಳಿಗ್ಗೆ5-30ಕ್ಕೆ ಅಷ್ಟೋತ್ತರ, ಮುಂ.9-00ಕ್ಕೆ ಪಾದಪೂಜೆ ಪಂಚಾಮೃತ ಅಲಂಕಾರ, 11-00ಕ್ಕೆ ಬೆಳ್ಳಿ ರಥೋತ್ಸವ, ಹಸ್ತೋದಕ ಸಾಯಂಕಾಲ7-00ಕ್ಕೆ ಹೂವಿನ ರಥೋತ್ಸವ ನಂತರ ಅಷ್ಟಾವಧಾನ, ಮಹಾಮಂಗಳಾರುತಿ.
ದಿ 29 ಬುಧವಾರ ಗುರುವಾರ ತೃತಿಯಾಶ್ರೀ ಗುರು ಸಾರ್ವಭೌಮರಉತ್ತರಾಧನೆ ಬೆಳಿಗ್ಗೆ 5-30ಗಂಟೆಗೆ ಅಷ್ಟೋತ್ತರ, ಪಂಚಾಮೃತ, ಅಲಂಕಾರ ಮತ್ತು ಮುಂಜಾನೆ 11-00 ಗಂಟೆಗೆ ಬೆಳ್ಳಿ ರಥೋತ್ಸವಹಾಗೂ 11-30 ಗಂಟೆಗೆರಾಯರ ಮಹಾರಥೋತ್ಸವ, ಹಸ್ತೋದಕ ಮತ್ತುತೀರ್ಥಪ್ರಸಾದಮುಂತಾದಕಾರ್ಯಕ್ರಮಕ್ಕೆ ಭಾಗವಹಿಸಿ ಶ್ರೀ ಗುರುರಾಯರ ಕೃಪೆಗೆ ಪಾತ್ರರಾಗಬೇಕೆಂದುಡಾ|| ರಾಜಣ್ಣಎಸ್. ವೈದ್ಯ, ಹಾಗೂ ಡಾ|| ಮುರುಳಿಧರ ಎಸ್. ವೈದ್ಯಡಾ|| ವೀಣಾ ಎಸ್. ವೈದ್ಯತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ