ಹಾವೇರಿ :
ಇಂದಿನ ಆಧುನಿಕ ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅತಿ ಶೀಘ್ರವಾಗಿ ಬೆಳೆಯುತ್ತಿದ್ದು, ಮಕ್ಕಳಿಗೆ ಪ್ರಾಯೋಗಿತ ವಿಜ್ಞಾನದ ಅಧ್ಯಯನ ಹಾಗೂ ವೈಜ್ಞಾನಿಕ ಚಟುವಟಿಕೆಗಳು ಅವಶ್ಯಕವಾಗಿದೆ ಎಂದು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪಾಚಾರ್ಯರಾದ ರವಿಕುಮಾರ ಪೂಜಾರ ಹೇಳಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜ್ ಹಾಗೂ ವಿಶ್ವಭಾರತಿ ಇಂಗ್ಲೀಷ್ ಮಿಡಿಯಂ ಶಾಲೆ ಸಂಯುಕ್ತ ಆಶ್ರಯದಲ್ಲಿ ಬಸವೇಶ್ವರ ನಗರದಲ್ಲಿರುವ ಶಾಲೆಯಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ನಾಟಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅವರು ವಿಜ್ಞಾನ ಮಹತ್ವದ ಬಗ್ಗೆ ಮಾತನಾಡಿದರು. ಪ್ರತಿ ಮಗು ಅದ್ವಿತೀಯವಾಗಿದ್ದು,ಮಗುವಿನ ಪ್ರತಿಭೆ ಗುರುತಿಸಿ ಪ್ರೇರೆಪಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ.
ಮಕ್ಕಳಿಗೆ ಅನ್ವೇಷಣೆ, ಸಂಶೋಧನೆ ಹಾಗೂ ಸೃಜನಾತ್ಮಕ ಮನೋಧೋರಣೆಯನ್ನು ಬೆಳೆಸಲು ಇಂತಹ ವಿಜ್ಞಾನದ ನಾಟಕ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ತುಂಬಾ ಅನುಕೂಲವಾಗಿವೆ. ಸಂಪ್ರದಾಯಿಕ ನಮ್ಮ ದೇಶದಲ್ಲಿ ಮಕ್ಕಳಿಗೆ ವೈಜ್ಞಾನಿಕ ವಿಚಾರ ಬೆಳೆಸಲು ವಿಜ್ಞಾನ ಮಹತ್ವ ಸಾರುವ ಕ್ರೀಯಾತ್ಮಕ ಚಟುವಟಿಕೆ ಕೈಗೊಳ್ಳಲು ಶಿಕ್ಷಣ ಇಲಾಖೆ ಹೆಚ್ಚಿನ ಗಮನ ನೀಡುತ್ತಿರುವುದು ಸ್ವಾಗತಾರ್ಹ ಎಂದು ರವಿಕುಮಾರ ಪೂಜಾರ ತಿಳಿಸಿದರು. ವಿದ್ಯಾಭಾರತಿ ಶಾಲೆಯ ಅಧ್ಯಕ್ಷರಾದ ಎಂ ಪಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.
ಡಯಟ್ ಉಪನ್ಯಾಸಕರಾದ ಸಿಬಿ ಮೂಲಿಮನಿ ಪ್ರಾಸ್ತಾವಿಕವಾಗಿ ಸ್ಪರ್ಧೆ ಮಾಡುವ ಮೂಲಕ ವಿಜ್ಞಾನ ವಿವಿಧ ವಿಚಾರ ತಿಳಿದುಕೊಂಡು ರಾಜ್ಯ ಅಂತರ ರಾಜ್ಯ ಮಟ್ಟದವರಿಗೂ ಆಯ್ಕೆ ಆಗುವಂತಹ ಜಿಲ್ಲೆಯ ವಿದ್ಯಾರ್ಥಿಗಳ ಆಸಕ್ತಿದಾಯತವಾಗಿ ವಿಜ್ಞಾನ ವಸ್ತುಗಳನ್ನು ಪರಿಕರಗಳನ್ನು ತಯಾರು ಮಾಡಿಕೊಂಡು ಬಂದಿದ್ದಾರೆ. ಡಯಟ್ ವಿಜ್ಞಾನದ ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮಕ್ಕಳ ಪ್ರತಿಭೆಯನ್ನು ಜಿಲ್ಲೆಯ ಶಿಕ್ಷಕರು ಗುರುತಿಸಿ ಪ್ರೋತ್ಸಹಿಸುವ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ಶಿಕ್ಷಣ ಇಲಾಖೆ ಬೆಂಬಲವಾಗಿ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದರು. ಡಯಟ್ ಪ್ರಾಚಾರ್ಯರಾದ ಜಿಬಿ ಬಸಲಿಂಗಪ್ಪ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದು ವಿಜ್ಞಾನದ ಆವಿಷ್ಕಾರಗಳು ಕ್ಷಣಾರ್ಧದಲ್ಲಿ ಬದಲಾವಣೆ ಕಾಣುತ್ತಿವೆ.
ವಿದ್ಯಾರ್ಥಿಗಳಿಗೆ ಅದರ ಪರಿಪೂರ್ಣ ಪರಿಕಲ್ಪನೆಯಾಗಲು ವಿಜ್ಞಾನ ಪಠ್ಯಪುಸ್ತಕದ ಭೋಧನೆ ಜೊತೆಗೆ ಪ್ರಾಯೋಗಿಕ ಅಧ್ಯಯನಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಮಕ್ಕಳಿಗೆ ಪ್ರೋತ್ಸಾಹಕ ಹಾಗೂ ಪ್ರೇರೆಪಿಸುವ ಕೆಲಸ ಮಾಡಲಿದೆ ಎಂದು ಹೇಳಿದರು. ಮುಖ್ಯ ಅಥಿತಿಗಳಾಗಿ ನಿಜಲಿಂಗಪ್ಪ ಬಸೇಗಣ್ಣಿ.ವಿದ್ಯಾಭಾರತಿ ಶಾಲೆಯ ಕಾರ್ಯದರ್ಶಿಗಳಾದ ಎನ್ ವಿ ದೊಡ್ಡಗೌಡ್ರ ವಿದ್ಯಾರ್ಥಿಗಳ ಕುರಿತು ವಿಜ್ಞಾನ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಡಯಟ್ ಉಪನ್ಯಾಸಕರಾದ ಶ್ರೀಮತಿ ಕಮಲಮ್ಮ ಶಾಲೆಯ ಮುಖ್ಯ ಗುರುಮಾತೆಯಾರಾದ ಲೋಚನಾ ಆರ್ಕೆ. ವಿವಿಧ ಶಾಲೆಯ ವಿಜ್ಞಾನ ಶಿಕ್ಷಕರು. ಸ್ಪರ್ಧಾಳುಗಳು ಸೇರಿದಂತೆ ಉಭಯ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದದವರು ಪಾಲ್ಗೊಂಡಿದ್ದರು.