ಕಣ್ಮರೆಯಾದವರ ಹುಡುಕಾಟ

ಮಡಿಕೇರಿ:

ಮಳೆ, ಪ್ರವಾಹ ಮತ್ತು ಭೀಕರ ಭೂಕುಸಿತಗಳಿಂದ ಜರ್ಜರಿತವಾಗಿದ್ದ, ಕಾಫಿಯ ನಾಡು ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಕಾರ್ಯಕರ್ತರು ಪರಿಹಾರ ಕಾರ್ಯ ಹಾಗು ಕಾಣೆಯಾದವರ ಶೋಧ ಕಾರ್ಯಾಚರಣೆಯನ್ನು ಇನ್ನೂ ಮುಂದುವರೆಸಿದ್ದಾರೆ.

ತೀವ್ರ ಬಾಧಿತವಾಗಿದ್ದ, ಮಡಿಕೇರಿ ತಾಲೂಕು ಸೇರಿದಂತೆ ಇತರೆಡೆ ಶಾಲಾ ಕಾಲೇಜುಗಳು ಆರಂಭವಾಗಿವೆ. ಪರಿಹಾರ ಶಿಬಿರಗಳಲ್ಲಿರುವ ಮಕ್ಕಳಿಗೂ ಸಹ ಸಮೀಪದ ಶಾಲೆಗಳಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕಾಣೆಯಾಗಿರುವ ತಮ್ಮ ಸಂಬಂಧಿಕರ ಶೋಧನೆಗಾಗಿ ಜಿಲ್ಲಾಡಳಿತಕ್ಕೆ ಸ್ಥಳೀಯರಿಂದ ಹಲವಾರು ಮನವಿಗಳು ಬಂದಿದ್ದು, ದೂರ ದೂರದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಕರ್ತರು ಶೋಧನಾ ಕಾರ್ಯ ಮುಂದುವರೆಸಿದ್ದಾರೆ. ಭೂಕುಸಿತಗಳ ಅವಶೇಷಗಳಡಿಯಲ್ಲಿ ಇನ್ನು ಕೆಲವರು ಸಿಕ್ಕಿಹಾಕಿಕೊಂಡಿರಬಹುದೆಂಬ ಶಂಕೆ ಇದೆ. ಸುಗಮ ವಾಹನ ಸಂಚಾರಕ್ಕೆ ರಸ್ತೆ ದುರಸ್ಥಿ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಪ್ರವಾಹಗಳಿಂದ ಸಂಕಷ್ಟಕ್ಕೀಡಾದ ದೂರ ದೂರದ ಗ್ರಾಮಗಳ ಸುಮಾರು 50 ಸಾವಿರ ಜನರ ಮನೆ ಬಾಗಿಲಿಗೆ ವಿಶೇಷ ಅನ್ನ ಭಾಗ್ಯ ಯೋಜನೆಯಡಿ ಜಿಲ್ಲಾಡಳಿತ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ.ಈ ಮಧ್ಯೆ ಪ್ರವಾಹ ಪೀಡಿತ ಕೊಡಗಿನಲ್ಲಿ ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬರುತ್ತಿದ್ದು, ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳ ರಕ್ಷಣಾ ತಂಡವನ್ನು ಹಿಂಪಡೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತುರ್ತು ಪರಿಸ್ಥಿತಿ ನಿಭಾಯಿಸಲು ಎನ್‍ಡಿಆರ್‍ಎಫ್‍ನ ಒಂದು ತಂಡ ಅಲ್ಲಿಯೇ ಉಳಿದಿದೆ ಎಂದು ಪರಿಹಾರ ಆಯುಕ್ತ ಗಂಗಾರಾಮ್ ಬಡೇರಿಯಾ ತಿಳಿಸಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link