ಹಿರಿಯೂರಿನ ಚಿನ್ನದ ಹುಡುಗಿ : ಅಮೃತಲಕ್ಷ್ಮಿಯವರಿಗೆ ರೆಡ್‍ಕ್ರಾಸ್‍ನಿಂದ ಸನ್ಮಾನ

ಹಿರಿಯೂರು:

              ಹಿರಿಯೂರಿನ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿಎಸ್ಸಿ ಪದವಿಯಲ್ಲಿ ದಾವಣಗೆರೆ ವಿಶ್ವ ವಿದ್ಯಾನಿಲಯಕ್ಕೆ ಪ್ರಥಮ ರ್ಯಾಂಕ್‍ಗಳಿಸಿ ಚಿನ್ನದ ಪದಕ ಪಡೆದಿರುವ ಹಿರಿಯೂರಿನ ಚಿನ್ನದ ಹುಡುಗಿ ಎಂ.ಆರ್.ಅಮೃತಲಕ್ಷ್ಮಿಯವರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಗರದ ಪಾರಿಜಾತ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀಮತಿ ಪೂರ್ಣೀಮಾ ಶ್ರೀನಿವಾಸ್ ರವರು ಆತ್ಮೀಯವಾಗಿ ಸನ್ಮಾನಿಸಿ, ಪದಕ ಮತ್ತು ನೆನಪಿನ ಕಾಣಿಕೆ ನೀಡಿದರು.

               ಈ ಸಂದರ್ಭದಲ್ಲಿ ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ಮಾತನಾಡಿ, ಕುಮಾರಿ ಅಮೃತಲಕ್ಷ್ಮಿಯವರ ಸಾಧನೆ ಇಡೀ ತಾಲ್ಲೂಕಿಗೆ ಕೀರ್ತಿ ತರುವಂತಹುದು ಎಂದರಲ್ಲದೆ ಪದವಿತರಗತಿವರೆಗೂ ಹಿರಿಯೂರಿನಲ್ಲೇ ವ್ಯಾಸಂಗ ಮಾಡಿವಿಶ್ವ ವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಈ ಚಿನ್ನದ ಹುಡುಗಿ ಈ ತಾಲ್ಲೂಕಿಗಷ್ಟೇ ಅಲ್ಲ ಹೆತ್ತ ತಂದೆ ತಾಯಿಗಳಿಗೂ ಹಾಗೂ ಈ ನಾಡಿಗೂ ಕೀರ್ತಿ ತರುವಂತಾಗಲಿ ಎಂದರು.

                ಈ ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಹೆಚ್.ಎಸ್.ಸುಂದರರಾಜ್, ಛೇರ್ಮನ್ ಬಿ.ಎಸ್.ನವಾಬ್‍ಸಾಬ್, ಆರ್ಯವೈಶ್ಯ ಸಮಾಜದ ಗೌರವ ಅಧ್ಯಕ್ಷರಾದ ಕೆ.ಆರ್.ವೆಂಕಟೇಶ್ ರೋಟರಿಕ್ಲಬ್ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರ, ಮಹಾಬಲೇಶ್ವರ ಶೆಟ್ಟಿ, ಪಿ.ಆರ್.ಸತೀಶ್‍ಬಾಬು, ಗಜೇಂದ್ರಶರ್ಮ, ಹೆಚ್.ಎಸ್.ರಾಧಾಕೃಷ್ಣ, ಎ.ರಾಘವೇಂದ್ರ, ಎಚ್.ಪಿ ರವೀಂದ್ರನಾಥ್, ಎಸ್.ಜೋಗಪ್ಪ, ಸಣ್ಣ ಭೀಮಣ್ಣ, ದೇವರಾಜ್‍ಮೂರ್ತಿ, ಕೇಶವಮೂರ್ತಿ, ತ್ರಿಯಂಬಕೇಶ್ವರ್, ಶ್ರೀಮತಿ ಎಂ.ಎನ್.ಸೌಭಾಗ್ಯವತಿ ದೇವರು ಶ್ರೀಮತಿ ಶಶಿಕಲಾರವಿಶಂಕರ್, ಶ್ರೀಮತಿ ಗೀತಾರಾಧಾಕೃಷ್ಣ, ರೆಡ್‍ಕ್ರಾಸ್ ರಾಜ್ಯ ಕಾರ್ಯದರ್ಶಿ ಅಶೋಕ್‍ಕುಮಾರ್, ಶ್ರಾವಣ್‍ಗುಡತೂರ್, ಪುರುಷೋತ್ತಮ್, ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link