ಜಗಳೂರು :
ಪಟ್ಟಣಕ್ಕೆ ಶಾಶ್ವತ ಯೋಜನೆಗಳ ಕೊಡುಗೆ ನೀಡಿದ ಕೀರ್ತಿ ಬಿಜೆಪಿ ಪಕ್ಷಕ್ಕೆ ಇದೆ, ಆದ್ದರಿಂದ ಈ ಭಾರಿ ಬಿಜೆಪಿಗೆ ಅಧಿಕಾರ ನೀಡಿ ಮಾದರಿ ಪಟ್ಟಣ ಪಂಚಾಯ್ತಿಯ ಅಭಿವೃದ್ದಿಗೆ ಕೈ ಜೋಡಿಸಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಮನವಿ ಮಾಡಿದರು.
ಪಟ್ಟಣದ ವಿವಿಧ ವಾರ್ಡ್‍ಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿ ಮಾತನಾಡಿದರು. ಕಳೆದ 5 ವರ್ಷಗಳಿಂದ ಕಾಂಗ್ರೆಸ್‍ನ ಭ್ರಷ್ಟಾಚಾರದ ಆಡಳಿತಕ್ಕೆ ಪಟ್ಟಣದ ಜನತೆ ರೋಸಿಹೋಗಿದ್ದು, ಬಿಜೆಪಿ ಪರವಾಗಿ ಮತದಾ ರರು ಒಲವು ತೋರಿದ್ದು 17 ವಾರ್ಡ್‍ಗಳಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಪಟ್ಟಣ ಪಂಚಾಯ್ತಿಯ ಅಧಿಕಾರ ಹಿಡಿಯಲಿ ದ್ದಾರೆ ಎಂದರು.
ಪಟ್ಟಣದ ಅಭಿವೃದ್ದಿಗಾಗಿ ಕಾಂಗ್ರೆಸ್ ಕೊಡುಗೆ ಶೂನ್ಯವಾಗಿದ್ದು, ಈ ಹಿಂದೆ ಮಾಜಿ ಶಾಸಕ ಗುರುಸಿದ್ದನಗೌಡ್ರು ಹಾಗೂ ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಅವರ ಆಡಳಿತ ಅವಧಿಯಲ್ಲಿ ಪಟ್ಟಣದಲ್ಲಿ ಕ್ರೀಡಾಂಗಣ, ತರಕಾರಿ ಮಾರುಕಟ್ಟೆ, ಶಾಂತಿಸಾಗರದಿಂದ ಕುಡಿಯುವ ನೀರು ಸರಬರಾಜು, ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣ ಅಗ್ನಿ ಶಾಮಕ ಠಾಣೆ, ನ್ಯಾಯಾಲಯ ಸಂಕೀರ್ಣ, ನೂರು ಹಾಸಿಗೆಗಳ ಮೇಲ್ದಂಡೆ ಆಸ್ಪತ್ರೆ, ಅಂಬೇಡ್ಕರ್ ಸಮುದಾಯ ಭವನ, ವಾಲ್ಮೀಕಿ ಸಮುದಾಯ ಭವನ, ಬಾಬು ಜಗಜೀವನ್‍ರಾವ್ ಸಮುದಾಯ ಭವನ, ಉಪ್ಪಾರ ಸಮುದಾಯ ಭವನ ಸೇರಿದಂತೆ ಹಲವು ಯೋಜನೆಗಳನ್ನು ನೀಡಿದ ಕೀರ್ತಿ ಬಿಜೆಪಿ ಪಕ್ಷಕ್ಕೆ ಇದೆ. ಮುಂದಿನ ಮಾದರಿ ಪಟ್ಟಣ ಪಂಚಾಯ್ತಿ ಅಭಿವೃದ್ದಿಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಮೂಲಕ ಶಾಸಕರಿಗೆ ಸಹಕರಿಸಿ ಆಶೀರ್ವದಿಸಬೇಕು ಎಂದರು.
ಶಾಸಕ ಎಸ್.ವಿ.ರಾಮಚಂದ್ರ ಮಾತ ನಾಡಿ 5 ವರ್ಷಗಳಲ್ಲಿ ಯಾವುದೇ ಅಭಿವೃದ್ದಿಯಾ ಗದೇ ಭ್ರಷ್ಟಾಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಆಡಳಿತವನ್ನು ಕ್ಷೇತ್ರದಿಂದ ಕಿತ್ತೆಸೆದಿದ್ದಾರೆ. ಇದೀಗ ಪಟ್ಟಣ ಪಂಚಾಯ್ತಿಯಲ್ಲೂ ಸಹ ಕಾಂಗ್ರೆಸ್‍ನ್ನು ಬುಡ ಸಮೇತವಾಗಿ ತೆಗೆಯುವ ಮೂಲಕ ಉತ್ತ ಮ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇ ಕಾಗಿದೆ. 18 ವಾರ್ಡ್‍ಗಳಲ್ಲೂ ಕಳಪೆ ಕಾಮಗಾರಿ ಗಳು ತಾಂಡವವಾಡುತ್ತಿದ್ದು, ಬೋಗಸ್ ಬಿಲ್‍ಗಳ ನ್ನು ಸೃಷ್ಠಿ ಮಾಡುವ ಮೂಲಕ ಕೋಟ್ಯಾನು ಗಟ್ಟಲೇ ಅನುದಾನವನ್ನು ದುರುಪಯೋಗ ಮಾಡಲಾಗಿದೆ. ಈ ಹಿಂದೆ ನನ್ನ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿ ಬಿಡುಗಡೆ ಯಾಗಿದ್ದ 5 ಕೋಟಿ ರೂ. ಅನುದಾನವನ್ನು ಬೇಕಾಬಿಟ್ಟು ಖರ್ಚು ಮಾಡಿ ದುರುಪಯೋಗ ಪಡಿಸಿಕೊಳ್ಳಲಾಗಿದೆ. ನಾಲ್ಕು ಕೋಟಿ ರೂ. ಯುಜಿಡಿ ಕಾಮಗಾರಿಗೆ ಹಣ ಮೀಸಲಿದ್ದರೂ ಖರ್ಚು ಮಾಡಲಾಗಿಲ್ಲ. ಮುಂದಿನ ನನ್ನ ಕನಸಿನ ಮಾದರಿ ಪಟ್ಟಣ ಪಂಚಾಯ್ತಿ ಅಭಿವೃದ್ದಿಗಾಗಿ ಈ ಭಾರಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಮೂಲಕ ಅಭಿವೃದ್ದಿಗೆ ಸಹಕರಿಸಿ ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶೀಲ ಮಾತನಾಡಿ ದಾವಣಗೆರೆ ಜಿಲ್ಲೆಯ 3 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ನಮ್ಮ ಅಭ್ಯರ್ಥಿಗಳೇ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಭದ್ರ ಪಡಿಸಿ ಮುಂದಿನ ಲೋಕಸಭಾ ಚುನಾವಣೆಗೆ ತಯಾರಾಗಬೇಕಾಗಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮಾದರಿ ಜಿಲ್ಲೆಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ರಶ್ಮಿರಾಜಣ್ಣ, ಸದಸ್ಯರಾದ ಎಸ್.ಕೆ.ಮಂಜಣ್ಣ, ಶಾಂತಕುಮಾರಿ, ಮಾಜಿ ಸದಸ್ಯ ಹೆಚ್.ನಾಗರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ಡಿ.ವಿ.ನಾಗಪ್ಪ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ದೇವಿಕೆರೆ ಶಿವಕುಮಾರಸ್ವಾಮಿ, ಸೋಮನಹಳ್ಳಿ ಶ್ರೀನಿವಾಸ್, ಬಿದರಕೆರೆ ರವಿಕುಮಾರ್, ಪಣಿಯಾಪುರ ಲಿಂಗರಾಜು, ಅರವಿಂದ್, ರಮೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ