ಜಕಾರ್ತಾ:
ಏಷ್ಯನ್ ಗೇಮ್ಸ್ನ ಬ್ಯಾಡ್ಮಿಂಟನ್ ಫೈನಲ್ ಪ್ರವೇಶಿಸಿದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
3-21, 16-21 ನೇರ ಸೆಟ್ಗಳಿಂದ ಸಿಂಧು ಅವರನ್ನು ಯಿಂಗ್ ಮಣಿಸಿದರು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಯಿಂಗ್ ಅವರ ಚುರುಕಿನ ಆಟವನ್ನು ಎದುರಿಸುವಲ್ಲಿ ಸಿಂಧು ವಿಫಲರಾದರು. ಮೊದಲ ಸೆಟ್ನಲ್ಲಿ ಯಿಂಗ್ ಸುಲಭವಾಗಿ ಗೆದ್ದುಕೊಂಡರು.
ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನಿನ ಮಾಜಿ ವಿಶ್ವ ಚಾಂಪಿಯನ್ ಅಕಾನೆ ಯೆಮಗುಚಿ ವಿರುದ್ಧ 21-17, 15-21, 21-10ರ ಅಂತರದಲ್ಲಿ ಗೆಲ್ಲುವ ಮೂಲಕ ಏಷ್ಯಾಡ್ ಫೈನಲ್ಸ್ಗೆ ಐತಿಹಾಸಿಕ ಪ್ರವೇಶ ಪಡೆದಿದ್ದರು.
ಸಿಂಧು ಸಾಧನೆಗೆ ದೇಶವೇ ಮೆಚ್ಚುಗೆಯ ಸುರಿಮಳೆ ಸುರಿಸಿದ್ದು, ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
