ನವದೆಹಲಿ:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಮೂರನೇ ದಿನವೂ ಏರಿಕೆಯಾಗಿದ್ದು, ಇಂದು(ಮಂಗಳವಾರ) ಬೆಳಿಗ್ಗೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಆಮದು ವೆಚ್ಚ ಹೆಚ್ಚಳವಾಗಿದ್ದು, ಅದರ ನೇರ ಪರಿಣಾಮ ತೈಲ ದರದ ಮೇಲಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಂತಾಗಿದೆ.
ಡೀಸೆಲ್ ದರ ಲೀಟರ್ಗೆ 69 ಮತ್ತು ಪೆಟ್ರೋಲ್ ಲೀಟರ್ಗೆ 78 ರೂ.ಗೆ ದಾಟಿದೆ. ಡೀಸೆಲ್ ದರ ಸೋಮವಾರ ಲೀಟರ್ಗೆ ಏಕಾಏಕಿ 14 ಪೈಸೆ ಮತ್ತು ಪೆಟ್ರೋಲ್ಗೆ 13 ಪೈಸೆ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯು ಲೀಟರ್ಗೆ 80.49 ರೂ. ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್ಗೆ 71.73ರಷ್ಟಿದೆ. ದೆಹಲಿಯಲ್ಲಿ ಡೀಸೆಲ್ ದರ ದಾಖಲೆಯ 69.61, ಮುಂಬೈನಲ್ಲಿ 73.90, ಜೈಪುರದಲ್ಲಿ 74.02 ರೂ.ಗೆ ತಲುಪಿದೆ. ಕಡಿಮೆ ಮಾರಾಟ ತೆರಿಗೆಯ ಕಾರಣ ದೆಹಲಿಯಲ್ಲಿ ಉಳಿದ ಎಲ್ಲ ಮೆಟ್ರೊ ನಗರಗಳು ಹಾಗೂ ರಾಜ್ಯದ ರಾಜಧಾನಿಗಳಿಗಿಂತ ಕಡಿಮೆ ದರವಿದೆ.
ಅಮೆರಿಕದ ಡಾಲರ್ ಎದುರು ರೂಪಾಯಿ ದರವು ಆಗಸ್ಟ್ 16ರಿಂದ ತೀವ್ರ ಕುಸಿತ ಕಂಡಿರುವುದರಿಂದ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ