ತುಮಕೂರು
ಆವಿಷ್ಕಾರ ಸಾಂಸ್ಕತಿಕ ವೇದಿಕೆ ತುಮಕೂರು ಈಗಾಗಲೇ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳಾದ ಸಿನಿಮಾ ಪ್ರದರ್ಶನ, ಬೀದಿ ಬದಿ ಸಭೆ, ಸೂಕ್ತಿ ಪ್ರದರ್ಶನ, ಮಕ್ಕಳಿಗೆ ಶಿಬಿರಗಳು ಮುಂತಾದವುಗಳನ್ನು ಆಯೋಜಿಸುತ್ತಾ ಜನಮಾನಸದಲ್ಲಿ ಸದಭಿರುಚಿಯನ್ನು ಬೆಳೆಸುವಲ್ಲಿ ಪ್ರಯತ್ನಿಸುತ್ತಾ ಬರುತ್ತಿದ್ದು, ಈ ನಿಟ್ಟಿನಲ್ಲಿ ದಿನಾಂಕ 25-8-2018 ರಂದು ಮನೆಯಂಗಳದಲ್ಲಿ ವಾರದವ್ಯಕ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನವೋದಯದ ಚಿತ್ರಕಲಾವಿದ ರೆಂಬ್ರಾಂಟ್ ಅವರ ಬದುಕು ಮತ್ತು ಚಿತ್ರರಚನೆಗಳ ಕುರಿತು ಕಾರ್ಯಕ್ರಮವನ್ನು ತುಮಕೂರಿನ ಕಲಾವಿದರಾದ ಅಕ್ರಂ ಪಾಷರವರ ಸ್ಟುಡಿಯೋ ಆದ ಕ್ರಿಯೇಟಿವ್ ಬಾಕ್ಸ್‍ನಲ್ಲಿ ಆಯೋಜಿಸಲಾಗಿತ್ತು.ಕಲಾವಿದರು ಶಿಕ್ಷಕರು ಆಗಿರುವ ಆನಂದ್‍ರವರು ಆವಿಷ್ಕಾರದ ಪರವಾಗಿ ಎಲ್ಲರನ್ನು ಸ್ವಾಗತಿಸುತ್ತಾ ಕಾರ್ಯಕ್ರಮದಲ್ಲಿ ರೆಂಬ್ರಾಂಟ್‍ರನ್ನು
ಕುರಿತಾದ ಈ ಕವನವನ್ನು ವಾಚಿಸಿದರು.
ರೆಂಬ್ರಾಂಡ್ ನೆನಪಿನಲಿ…
ರೆಂಬ್ರಾಂಡ್, ನೀನೊಬ್ಬ ಹುಚ್ಚ!
ನಿನ್ನ ಗೆಳೆಯರು, ಹುಡುಗರು, ಅಲ್ಲೆಲ್ಲೋ ಪ್ರವಾಸಿ ಮಂದಿರಗಳಲಿ,
ಮದಿರೆಯಲಿ ಮೈಮರೆತು, ಇಸ್ಪೀಟನಾಡಿ, ಪ್ಯಾರಿಸ್ ಸುತ್ತುತ್ತಿರುವಲಿ,
ನೀನಿದ್ದೆ ಕಲಾ ಮಂದಿರದಲಿ; ಹುಡುಗರು ಹೋಗಿ ಹೊತ್ತಾಗಿರುವಲಿ
ರೆಂಬ್ರಾಂಡ್, ನೀನಿದ್ದೆ ಅಲ್ಲೇ, ದುಡಿದುಡಿದು ದಣಿಯುತಲಿ.
ನಿನ್ನ ಮನೆಯವರು ಬಳಲಿದರೆ ಭಂಗಿಯಲಿ ನಿಂತೂ, ಕುಂತೂ?
ನಾವಿದ್ದಂತೆ, ಸ್ವಲ್ಪ ಚೆಲುವಾಗಿ ಚಿತ್ರಿಸಿದರು ಉಳಿದವರು ನಮ್ಮನು
ನನ್ನ ಮನ ಹೇಳುವುದು. ನಾವಿದ್ದಂತೇ ಚಿತ್ರಿಸಿದೆ ನಮ್ಮನು ನೀನು;
ಹಮ್ಮಿನವರು, ದುಃಖಿತರು, ನಿಶ್ಚಯವಿಲ್ಲದವರು; ಕುರೂಪವನು
ನಾವು ಕಂಡಿದ್ದು. ಅಲ್ಲಿ ಕಂಡುಹಿಡಿದೆ ನೀನು ಸೌಂದರ್ಯವನು.
ಆ ಬೈಬಲನು? ಹದ ಮಾಡಿ, ಮಾನವೀಯ ಮಾಡಿದೆ. ಕ್ರಿಸ್ತನ
ನೋವು, ಮ್ಯಾಗ್ದಲೀನಳ ಬೆರಗು ನಾ ನೋಡಿದೆ; ನೀ ಚಿತ್ರಿಸಿದೆ
ಮಾನವನ. ನೀನೊಬ್ಬ ದಡ್ಡ, ಹಣದ ವಿಷಯದಲಿ, ನಿನ್ನ
ಸಾಲಗಳನು ನೀ ತೀರಿಸಲಿಲ್ಲ, ತೀರಿಸಲು ಸಾಧ್ಯವೂ ಇಲ್ಲ.
ಹಿಡಿದ ಪಟ್ಟು ಬಿಡದವನು, ವ್ಯಯ ಮಾಡದವನು, ತೂಕದವನು.
ನಮ್ಮನು ಕಲಾಕೃತಿಯೊಳಗಿಟ್ಟವನು, ಕ್ಷಮಿಸುತ್ತೇವು ನಿನ್ನನು.
ಹಣ ತರುವ, ಸಾಲ ತೀರುವ ಕಲಾಕೃತಿಗಳನು ಬಿಟ್ಟೆ ನೀನು;
ಚಿತ್ರಿಸುತ್ತಿದ್ದೆ, ಸೃಷ್ಟಿಸುತ್ತಿದ್ದೆ ನಿನ್ನ ಕಲಾಕೃತಿಗಳನು ನೀನು.
ಕ್ಷಮಿಸುತ್ತೇವೆ ನಿನ್ನನು, ಕಾರಣವಿಷ್ಟೇ ನೀನು ಕಲಾವಿದನು
ತೂಕ ಹಾಕಲಾಗದ, ಹೋಲಿಕೆಗೂ ನಿಲುಕದ ಸುಂದರ
ಕಲಾಕೃತಿಗಳ ಜನಕ ನೀನು. ಕ್ಷಮಿಸುತ್ತೇವೆ ನಿನ್ನನು.
ಮೂಲ ರಚನೆ: ಜೂಸ್ ವಾನ್ ದೆ ವಂದೆಲ್
ಕನ್ನಡ ಅನುವಾದ : ಎಸ್.ಎನ್.ಸ್ವಾಮಿ
ಶಿಕ್ಷಕರಾದ ಈರಣ್ಣ ರೆಂಬ್ರಾಂಟ್‍ರನ್ನು ಸಭೆಗೆ ಪರಿಚಯಿಸಿದರು. ರೆಂಬ್ರಾಂಟ್‍ರ ಮುಖ್ಯ ಚಿತ್ರಗಳಾದ ಪ್ರಾಜಿóಗಲ್ ಸನ್, ನೈಟ್ ವಾಚ್, ಮ್ಯಾನ್ ವಿಥ್ ಗೋಲ್ಡನ್ ಚೈನ್, ಸೆಲ್ಫ್ ಪೋಟ್ರೇಟ್ಸ್, ಬೆಗ್ಗರ್ಸ್ ಅಟ್ ದ ಡೋರ್ ಹಾಗೂ ಹಾಗೂ ಇನ್ನಿತರ ಡ್ರಾಯಿಂಗ್ಸಗಳ ಸ್ಲೈಡ್‍ಗಳನ್ನು ತೋರಿಸಿ ವಿವರಿಸಲಾಯಿತು. ನಂತರ ಆವಿಷ್ಕಾರದ ಸದಸ್ಯರಾದ ವಿಶ್ವನಾಥ್‍ರವರು ಮಾತನಾಡುತ್ತಾ ಮಧ್ಯಯುಗ ಅಥವಾ ಕತ್ತಲೆ ಯುಗದಲ್ಲಿ ಮನುಷ್ಯ(ಕೆಲವರು) ಕೇವಲ ದುಡಿಯುವುದು, ಹೊಟ್ಟೆತುಂಬಿಸಿಕೂಳ್ಳುವುದೊಂದನ್ನು ಬಿಟ್ಟರೆ ಇನ್ನಾವುದೇ ರೀತಿಯಾದ ಜ್ಞಾನಾರ್ಜನೆಯಲ್ಲಿ ತೊಡಗಿದ್ದುದು ಬಹಳ ವಿರಳ ಏಕೆಂದರೆ ಆಗಿನ್ನು ವೈಜ್ಞಾನಿಕ ವಿಚಾರಗಳು ಮನುಷ್ಯನಿಗೆ ತಿಳಿದಿರಲಿಲ್ಲ ನಂತರದ ಕಾಲಾವಧಿಯಲ್ಲಿ ಕೆಲವು ಜನರು ವೈಜ್ಞಾನಿಕ ವಿಚಾರಗಳನ್ನು ಚಿಂತಿಸತೊಡಗಿದರು. ಒಟ್ಟಾರೆ ಸಮಾಜದಲ್ಲಿ ಮನುಷ್ಯನ ಜೀವನವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಜನರು ಚಿಂತಿತೊಡಗಿದರು.
ಈ ವಿಚಾರಗಳು ಜೀವನದ ಎಲ್ಲಾ ರಂಗಗಳಲ್ಲೂ ಪ್ರತಿಧ್ವನಿಸತೂಡಗಿದವು ಕಲಾವಲಯದಲ್ಲೂ ಸಹ ಹಲವಾರು ಜನ ಕಲಾವಿದರು ತಮ್ಮ ಕಲಾರಚನೆಗಳಲ್ಲಿ ಬಿಂಬಿಸತೊಡಗಿದರು. ಅಂದಿನ ಕಾಲದಲ್ಲಿ ಚಿತ್ರ ರಚನೆಯ ವಸ್ತುಗಳು ಅತೀಂದ್ರೀಯ ಶಕ್ತಿಗಳ ಕುರಿತಾಗಿದ್ದು ಚಿತ್ರಗಳಲ್ಲಿ ಸಹಜವಾಗಿ ಯಾವ ಭಾವನೆಗಳು ಕಾಣಿಸುವುದಿಲ್ಲ ಇಂತಹ ಸ್ಥಿತಿಯಲ್ಲಿದ್ದಂತಹ ಚಿತ್ರಕಲೆಯಲ್ಲಿ ಮಾನವನ ನೋವು, ನಲಿವು, ದು:ಖ, ಸುಖ, ಪ್ರೇಮ, ಸಿಟ್ಟು, ಕರುಣೆ, ಕ್ಷಮಾಗುಣ ಮುಂತಾದ ಮಾನವ ಭಾವನೆಗಳನ್ನು ಕಲಾಕೃತಿಗಳಲ್ಲಿ ತಂದು ಮಾನವನನ್ನು ಪ್ರತಿನಿಧಿಸಿ ಮಾನವತಾವಾದಿ ಕಲಾವಿದರಾದರು ಎಂದರು.
ಹಿರಿಯ ಕಲಾವಿದರಾದ ಪ್ರಭು ಹರಸೂರರವರು ಮಾತನಾಡುತ್ತಾ ರೆಂಬ್ರಾಂಟ್ ಅವರು ವಿಶಿಷ್ಟವಾದ ನೆರಳು ಬೆಳಕುಗಳ ಚಮತ್ಕಾರವನ್ನು ಗ್ರೀಕ್ ನಾಟಕಗಳಲ್ಲಿನ ನೆರಳು ಬೆಳಕುಗಳನ್ನು ತಮ್ಮ ಕಲಾಕೃತಿಗಳಲ್ಲಿ ಉಪಯೋಗಿಸಿಕೂಂಡರು ಎಂದರು. ಆವಿಷ್ಕಾರದ ಸಂಘನಾಕಾರರಾದ ಎಸ್.ಎನ್.ಸ್ವಾಮಿಯವರು ಮಾತನಾಡುತ್ತಾ ರೆಂಬ್ರಾಂಟ್‍ರವರ ಜೀವನಪ್ರೀತಿ, ಆತ್ಮಸೌಂದರ್ಯಪ್ರಜ್ಞೆಗಳ ಬಗ್ಗೆ ವಿವರಿಸಿದರು. ಈ ಚರ್ಚಾಕೂಟದಲ್ಲಿ ಕಥೆಗಾರರಾದ ಶ್ರೀ ಮಿರ್ಜಾ ಬಷೀರ್ರವರು, ಶಿಕ್ಷಕರಾದ ಶಾಂತಮೂರ್ತಿಯವರು, ಕಲಾವಿದರಾದ ಅಕ್ರಂ ಪಾಷರವರು, ಹರೀಶರವರು, ಸರ್ಕಾರಿ ಚಿತ್ರಕಲಾಮಹಾವಿದ್ಯಾಯದ ಶಿಕ್ಷಕರಾದ ಅರ್ಜುನ್‍ರವರು, ಸರ್ಕಾರಿ ಚಿತ್ರಕಲಾಮಹಾವಿದ್ಯಾಯದ ವಿದ್ಯಾರ್ಥಿಗಳು, ಕಲಾಸಕ್ತ ಮಕ್ಕಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ