ಶಿಗ್ಗಾವಿ :
ಪದವಿಪೂರ್ವ ಹಂತ ವಿದ್ಯಾರ್ಥಿಗಳ ಭವಿಷ್ಯಜೀವನ ರೂಪಿಸಿಕೊಳ್ಳುವ ಮೈಲುಗಲ್ಲು ಈ ಹಂತದಲ್ಲಿ ದಾರಿತಪ್ಪಿ ನಡೆಯದೇ ಗುರುಹಿರಿಯರಿಗೆ ತಂದೆ ತಾಯಿಗಳಿಗೆ ಗೌರವ ಕೊಡುವ ಮೂಲಕ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಹೊರಹೊಮ್ಮಬೇಕು ಶಿಕ್ಷಣ ಮಾನವೀಯತೆಯನ್ನು ಕಲಿಸಿಕೊಡುವ ಸಾಧನವಾಗಬೇಕು ಎಂದು ಹಾವೇರಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್ ಸಿ ಪೀರಜಾದೆ ಹೇಳಿದರು
ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ಸತತ ಅಧ್ಯಯನ ಹಾಗೂ ಪರಿಶ್ರಮದಿಂದ ಏನೆಲ್ಲವನ್ನು ಸಾಧಿಸಬಹುದು ದೃಢ ವಿಶ್ವಾಸದಿಂದ ಪ್ರತಿಯೊಬ್ಬರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಳೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಶಿಕ್ಷಣ ಬರಿ ಓದು ಬರಹ ಜ್ಞಾನವಲ್ಲ ಅದು ಮಾನವೀಯತೆಯ ವಿಕಾಸ ಅಂತ ಸಮಗ್ರ ವ್ಯಕ್ತಿತ್ವ ರೂಪಿಸುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದರು
ಎಸ್ ಆರ್ ಜೆ ವಿ ಜಿ ಕಾಲೇಜಿನ ಪ್ರಾಚಾರ್ಯ ಎಸ್ ವಿ ಕುಲಕರ್ಣಿ, ಪ್ರೊ. ಕೆ ಬಸಣ್ಣ, ಕೆ ಎಸ್ ಬರದೇಲಿ, ಎಂ ಎಸ್ ಕುರಂದವಾಡ, ಕೆ ಸಿ ಹೂಗಾರ, ಸುಮಿತ್ರ ರಾಮಾಪೂರಮಠ ಹಾಗೂ ಉಮೇಶ ತಳವಾರ ಸೇರಿದಂತೆ ಅನೇಕರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
