ಚಿತ್ರದುರ್ಗದಲ್ಲಿ ಎರಡು ಕಂಪ್ಯೂಟರ್ ಕೇಂದ್ರಗಳನ್ನು ಆರಂಭಿಸಿದ ವೇದಾಂತ

ಚಿತ್ರದುರ್ಗ:

      ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿರುವ ವೇದಾಂತ ಸೆಸಾ ಗೋವಾ ಐರನ್ ಓರ್‍ನ ಕರ್ನಾಟಕ ವಿಭಾಗದ ಚಿತ್ರದುರ್ಗದಲ್ಲಿ ನಿರ್ಮಾಣ ಮಾಡಿರುವ ಎರಡು ಕಂಪ್ಯೂಟರ್ ಕೇಂದ್ರಗಳನ್ನು ಉದ್ಘಾಟನೆ ಮಾಡಿದೆ.

      ಚಿತ್ರದುರ್ಗದ ಮುತ್ತುಗದೂರು ಮತ್ತು ಮಲ್ಲಪ್ಪನಹಟ್ಟಿ ಗ್ರಾಮಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಕೌಶಲ್ಯಾಭಿವೃದ್ಧಿ ಇಲಾಖೆಯ ಎಸ್‍ಎಂಐಡಿಯ ಮಿಶನ್ ಮ್ಯಾನೇಜರ್ ಸೌಮ್ಯ ಎಸ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಈ ಕೇಂದ್ರಗಳನ್ನು ಉದ್ಘಾಟಿಸಿದರು. ವೇದಾಂತ-ಸೆಸಾ ಗೋವಾ ಐರನ್ ಓರ್-ಕರ್ನಾಟಕದ ಸಿಎಸ್‍ಆರ್ ಮತ್ತು ಪಿಆರ್ ವಿಭಾಗದ ಮುಖ್ಯಸ್ಥರಾದ ಚಂದ್ರಕಾಂತ್ ಎಸ್ ಪಾಟೀಲ್ ಅವರು ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು.

      ಈ ಎರಡು ಕೇಂದ್ರಗಳಲ್ಲಿ ಯಾವುದೇ ವಯೋಮಿತಿ ಇಲ್ಲದೇ ಗ್ರಾಮಸ್ಥರಿಗೆ ಕಂಪ್ಯೂಟರ್ ಜ್ಞಾನ ಮತ್ತು ಕಂಪ್ಯೂಟರ್ ಅನ್ನು ಬಳಸುವ ಬಗ್ಗೆ  ಅರಿವು ಮತ್ತು ಶಿಕ್ಷಣ ನೀಡಲಾಗುತ್ತದೆ. ಈ ಕೇಂದ್ರಗಳಲ್ಲಿ 20 ಕ್ಕೂ ಹೆಚ್ಚು ಕಂಪ್ಯೂಟರ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಅತ್ಯುತ್ತಮ ಮೂಲಸೌಕರ್ಯಗಳೊಂದಿಗೆ ಸುಮಾರು 500 ಕ್ಕೂ ಹೆಚ್ಚು ಜನರು ಇದರ ಸೌಲಭ್ಯ ಪಡೆಯಬಹುದಾಗಿದೆ. ಈ ತರಬೇತಿ ಕೇಂದ್ರಗಳಲ್ಲಿ ಆರು ಪ್ರಮುಖ ಕಂಪ್ಯೂಟರ್ ಕೋರ್ಸ್‍ಗಳ ತರಬೇತಿ ನೀಡಲಾಗುತ್ತದೆ. ಈ ಕೇಂದ್ರಗಳಲ್ಲಿ ಸಾರ್ವಜನಿಕರು ಉಚಿತವಾಗಿ ಕಂಪ್ಯೂಟರ್ ತರಬೇತಿ ಪಡೆಯಬಹುದಾಗಿದೆ. ಅಲ್ಲದೇ ಸೂಕ್ತ ತರಬೇತಿ ಹೊಂದಿದವರಿಗೆ ಇಲ್ಲಿ ಉದ್ಯೋಗವಕಾಶವನ್ನೂ ಕಲ್ಪಿಸಲಾಗುತ್ತದೆ.

      ಈ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ಸೌಮ್ಯ ಎಸ್ ಅವರು, ವೇದಾಂತ ಲಿಮಿಟೆಡ್ ಉತ್ತಮ ಸಮಾಜಕ್ಕಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. “ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸದಾ ಶ್ರಮಿಸುತ್ತಿರುವ ವೇದಾಂತದ ಪ್ರಯತ್ನಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಎರಡು ಕೇಂದ್ರಗಳಿಂದ ಸಾರ್ವಜನಿಕರು ಕಂಪ್ಯೂಟರ್ ಜ್ಞಾನವನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಉತ್ತಮ ತರಬೇತಿಯನ್ನು ನೀಡಲಾಗುತ್ತಿರುವ ಈ ಕ್ರಮ ಸ್ತುತ್ಯಾರ್ಹವಾದುದು. ಇಂತಹ ಸಹಯೋಗಗಳಿಗೆ ಸರ್ಕಾರ ಸದಾ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತದೆ’’ ಎಂದು ತಿಳಿಸಿದರು.

      ವೇದಾಂತ-ಸೆಸಾ ಗೋವಾ ಐರನ್ ಓರ್-ಕರ್ನಾಟಕದ ಸಿಎಸ್‍ಆರ್ ಮತ್ತು ಪಿಆರ್ ವಿಭಾಗದ ಮುಖ್ಯಸ್ಥರಾದ ಚಂದ್ರಕಾಂತ್ ಎಸ್ ಪಾಟೀಲ್ ಅವರು ಮಾತನಾಡಿ, “ನಮ್ಮ ಈಗಿನ ಯುವ ಪೀಳಿಗೆ ದೇಶದ ಭವಿಷ್ಯವಾಗಿದೆ. ದೇಶದ ಉತ್ತಮ ಭವಿಷ್ಯಕ್ಕೆ ಇವರು ಕಾರಣರಾಗಲಿದ್ದಾರೆ. ಈ ನಿಟ್ಟಿನಲ್ಲಿ ಈಗಿನ ಟ್ರೆಂಡ್ ಆಗಿರುವ ಡಿಜಿಟಲ್ ಕಡೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಉತ್ತಮ ಕೌಶಲ್ಯವನ್ನು ರೂಪುಗೊಳ್ಳಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ’’ ಎಂದು ಹೇಳಿದರು.   

ಈ ಉದ್ಘಾಟನಾ ಸಮಾರಂಭದಲ್ಲಿ ವೇದಾಂತದ ಸಿಬ್ಬಂದಿ ಮತ್ತು ಎರಡೂ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap