ತಾಲ್ಲೂಕು ಮಟ್ಟದ ಕ್ರೀಡಾಕೂಟ : ಖೋ ಖೋ ಪಂದ್ಯಾವಳಿ : ಚಿತ್ರನಾಯಕನಹಳ್ಳಿ ಶ್ರೀಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಪ್ರಥಮ ಸ್ಥಾನ

ಚಳ್ಳಕೆರೆ

               ತಾಲ್ಲೂಕಿನ ಗ್ರಾಮಾಂತರ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಪರಶುರಾಮಪುರ ಹೋಬಳಿ ಜುಂಜರಗುಂಟೆ ಗ್ರಾಮದಲ್ಲಿ ಉದ್ಘಾಟನೆಗೊಂಡಿದ್ದು, ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಚಿತ್ರನಾಯಕನಹಳ್ಳಿ ಶ್ರೀಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ವಿದ್ಯಾರ್ಥಿನಿಯರು ಉತ್ತಮ ಆಟವನ್ನು ಪ್ರದರ್ಶಿಸಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ.

                ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಮುಖ್ಯೋಪಾಧ್ಯಾಯ ಆರ್.ಪ್ರಶಾಂತ್‍ಸಾಗರ, ತಾಲ್ಲೂಕು ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿಯರು ತಮ್ಮದೇಯಾದ ಉತ್ತಮ ಆಟವನ್ನು ಪ್ರದರ್ಶಿಸಿ ಪ್ರಥಮ ಬಹುಮಾನ ಗಳಿಸಿರುತ್ತಾರೆ. ಶಾಲೆಯ ದೈಹಿಕ ಶಿಕ್ಷಕ ಕೆ.ಟಿ.ವೇಲೂರು ಮಾರ್ಗದರ್ಶನದಲ್ಲಿ ಉತ್ತಮ ತರಬೇತಿಯನ್ನು ಪಡೆದ ಬಾಲಕಿಯರು ತಮ್ಮ ಆಟದಿಂದ ಈ ಸಾಧನೆಯನ್ನು ಮಾಡಿದ್ಧಾರೆ. ಇವರ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಸಮೂಹ ಅಭಿನಂದನೆಗಳನ್ನು ಸಲ್ಲಿಸುತ್ತದೆಯಲ್ಲದೆ ಪ್ರತಿಬಾರಿಯೂ ಸಹ ಉತ್ತಮ ಆಟವಾಡಿ ವಿಜೇತರಾಗಿ ಶಾಲೆಗೂ, ಗ್ರಾಮಕ್ಕೂ ಹಾಗೂ ತಾಲ್ಲೂಕಿಗೂ ಕೀರ್ತಿ ತರುವಂತೆ ಹಾರೈಸಲಾಗಿದೆ ಎಂದರು.

                  ಕಳೆದ ಹಲವಾರು ತಿಂಗಳುಗಳಿಂದ ಶಾಲೆಯ ವಿದ್ಯಾರ್ಥಿನಿಯರಿಗೆ ಖೊ ಖೋ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಪ್ರತಿನಿತ್ಯ ತರಬೇತಿ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳನ್ನು ಓಲೈಸಿಕೊಂಡು ಅವರಿಗೆ ಶಿಕ್ಷಣದಷ್ಟೇ ಮಹತ್ವವನ್ನು ಕ್ರೀಡೆಗೂ ನೀಡಬೇಕೆಂಬ ಇಲಾಖೆಯ ನಿರ್ದೇಶನವನ್ನು ಪಾಲಿಸಲಾಗಿದೆ. ಮಕ್ಕಳು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಕೊಂಡರೆ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ಸಾಮಥ್ರ್ಯವನ್ನು ಹೊಂದುತ್ತಾರೆ. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಅತ್ಯಂತ ಲವಲವಿಕೆಯಿಂದ ಆಟವನ್ನು ಪ್ರದರ್ಶಿಸಿದ್ದು, ಇದು ಎಲ್ಲರಿಗೂ ತೃಪ್ತಿ ತಂದಿದೆ ಎಂದರು.

                 ಶಾಲೆಯ ವಿದ್ಯಾರ್ಥಿನಿಯರಾದ ಟಿ.ರಂಜಿತಾ, ವಿ.ಸುಚಿತ್ರ, ಎಂ.ಆಶಾ, ಎನ್.ರಶ್ಮಿ, ಎನ್.ರೇಷ್ಮ, ಕೆ.ವನಜಾಕ್ಷಿ, ಎನ್.ಅರ್ಪಿತ, ಎನ್.ಸೃಷ್ಠಿ, ಎಂ.ವರ್ಷ, ಎಂ.ಕವಿತಾ, ಎಸ್.ಅಮೃತ, ಎಂ.ಭವ್ಯ ಮುಂತಾದ ವಿದ್ಯಾರ್ಥಿನಿಯರು ಆಟದಲ್ಲಿ ಪಾಲ್ಗೊಂಡಿದ್ದರು. ವ್ಯವಸ್ಥಾಪಕರಾಗಿ ಬಿ.ಮಲ್ಲಿಕಾರ್ಜುನ ಕಾರ್ಯನಿರ್ವಹಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link