ರಾಣಿಬೆನ್ನೂರು:
ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿಯ ಪರಮ ಭಕ್ತೆ ಮಹಾ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಹೆಸರು ರಾಜ್ಯ ಹೊರ ರಾಜ್ಯಗಳಲ್ಲೂ ಚಿರಪರಚಿತ, ಮಲ್ಲಮ್ಮನ ದೈವಿಕ ಭಕ್ತಿ ಅವಳು ಮಾಡಿದ ಪವಾಡಗಳು ಇಂದಿಗೂ ಜೀವಂತವಾಗಿವೆ, ಅಂತಹ ಮಹಾನ ಸಾಧ್ವಿಯ ಜೀವನ-ಸಾಧನೆ ಸಿದ್ದಿಗಳನ್ನು ಕುರಿತು ಇಂದಿನ ಯುವ ಸಮುದಾಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಐದು ದಿವಸಗಳ ಕಾಲ ನಗರದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರವಚನ ಸೇವಾ ಸಮಿತಿ ಅಧ್ಯಕ್ಷ ವಾಸಣ್ಣ ಕುಸಗೂರ ಹೇಳಿದರು.
ಇಲ್ಲಿನ ಆಧಿಶಕ್ತಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಿನಾಯಕನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಸೆ. 9 ರಿಂದ ಸೆ. 13 ವರೆಗೆ ನಿತ್ಯ ಸಂಜೆ 6.30 ರಿಂದ 8:30 ರವರೆಗೆ ನಡೆಯಲಿದೆ ಎಂದರು.ಹೊಸಹಳ್ಳಿ ಶ್ರೀವೇಮನ ಮಠದ ವೇಮನಾನಂದ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ ಕಾರ್ಯಕ್ರಮ ಉದ್ಘಾಟಿಸುವರು, ಬಾಗಲಕೊಟೆ ಜಿಲ್ಲೆಯ ಕಜ್ಜಿ ದೋಣಿಯ ಶ್ರೀಕೃಷ್ಣಾನಂದ ಶಾಸ್ತ್ರಿಗಳು ಪ್ರವಚನ ನೀಡುವರು, ವೇಮನ ವಿಧ್ಯಾವರ್ಧಕ ಸಂಘದ ಅಧ್ಯಕ್ಷ ರಾಮಚಂದ್ರಪ್ಪ ರಾಯರೆಡ್ಡಿ, ವರ್ತಕ ವೆಂಕಣ್ಣ ಕರೂರ, ಪ್ರಾಚಾರ್ಯ ಹೆಚ್.ಪಿ ಸುಬಾಸ, ಪ್ರೋ:ಬಿ.ಬಿ.ನಂದ್ಯಾಲ, ಆರ್.ಎಂ.ಬೋಗೇಶರೆಡ್ಡಿ, ಅನಂತ ಬಾನುವಳ್ಳಿ, ಬಾಬಣ್ಣ ವಡೇರಹಳ್ಳಿ, ಬಿ.ಡಿ.ಕೊಪ್ಪ ಉಪಸ್ಥಿತರಿದ್ದರು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
