ಹಾವೇರಿ :
ರೈತ ದೇಶದ ಬೆನ್ನೆಲಬು ಎಂದು ಹೇಳುತ್ತಾರೆ ಆದರೆ ಅವರಿಗೆ ಹೊಲಕ್ಕೆ ಹಾಕುವ ಬೀಜ ಗೊಬ್ಬರ ಸೇರಿದ ಕಂಪನಿಗಳು ಎಂತಹ ಬೀಜ ಕೊಟ್ಟಿದ್ದಾರೆ ಎಂಬುವುದು ಕಂಪನಿಗೆ ಗೊತ್ತು. ಹೊರತೆ ರೈತನಿಗೆ ಅಲ್ಲ ಎನ್ನಬಹುದು. ಇಂತಹ ಒಂದು ಘಟನೆ ತಾಲೂಕಿನ ಕನಕಾಪೂರ ಗ್ರಾಮದ ಹೊಲದಲ್ಲಿ ನೋಡಿದರೆ ರೈತರ ಗೋಳು ಏನು ಎಂಬುವುದು ಗೊತ್ತಾಗುತ್ತದೆ. ರೈತ ಹನಮಂತಗೌಡ ಬೀರನಗೌಡ ಕೆರೆಗೌಡ ತನ್ನ ಜಮೀನಿನಲ್ಲಿ ಮೆಕ್ಕೆಜೋಳ (ಗೋವಿನಜೋಳ)ವನ್ನು ಹಾಕಿದ್ದು, ಈ ಬೀಜ ಡಿಕೆಸಿ 9133 ಮಾನಸೆಂಟೋ ಕಂಪನಿ ಹಾಕಿದ್ದನು ಎನ್ನುತ್ತಿದ್ದಾರೆ. ಆದರೆ ಪ್ರಾರಂಭದಲ್ಲಿ ಚನ್ನಾಗಿ ಬೆಳೆದ ಫಸಲು ಚಿಕ್ಕ ಚಿಕ್ಕ ತೆನೆ ತೆಗೆದು ಒಂದೊಂದು ತೆನೆ ಇಲ್ಲದೇ ಆ ಬೆಳೆ ಬೇರು ಕೊಳೆತು ಮೆಕ್ಕೆಜೋಳ ಒಣಗಿ ಹೋಗಿರುವ ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ರೈತ ಹನಮಂತಗೌಡ ಬೀರನಗೌಡ ಕೆರೆಗೌಡ ನಾನು 1 ಎ 33 ಗುಂಟೆಯಲ್ಲಿ ಮೆಕ್ಕೆಜೋಳ ಹಾಕಲಾಗಿದ್ದು, ನಾನು ಪ್ರಾರಂಭದಲ್ಲಿ ಬೆಳೆಗೆ ಬೇಕಾಗುವ ಗೊಬ್ಬರ ಔಷಧಿಗಳನ್ನು ಹಾಕಿಯೋ ಅದಕ್ಕು ಸುಮಾರು 20-30 ಸಾವಿರ ರೂ ಖರ್ಚು ಮಾಡಿದ್ದೇನೆ.
ಇದೇ ಹೊಲದಿಂದ ಕುಟುಂಬ ಅವಲಂಬಿತವಾಗಿದೆ. ಬೆಳೆ ಸರಿಯಾಗಿ ಬರದೇ ಇದ್ದರೆ ಹೇಗೆ ? ಕಷ್ಟಕರ ಜೀವನ ನಡೆಸಬೇಕಾಗುತ್ತದೆ. ಮಾನಸೆಂಟೋ ಕಂಪನಿ ಬೀಜ ಹಾಕಲಾಗಿದೆ. ಯಾವ ಕಾರಣಕೊಸ್ಕರ ಹೀಗೆ ಆಗಿದೆ ಎಂಬುವುದು ಗೊತ್ತಾಗುತ್ತಿಲ್ಲ. ನನಗೆ ನ್ಯಾಯ ಒದಗಿಸಬೇಕು ಎಂದು ತಮ್ಮ ಗೊಳು ಹೇಳಿಕೊಂಡರು.ನ್ಯಾಯಕ್ಕಾಗಿ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಲಾಗಿದೆ ಎಂದು ಹೇಳಿದರು. ಉತ್ತರ ಕರ್ನಾಟಕ ರೈತ ಸಂಘದ ತಾಲೂಕಾಧ್ಯಕ್ಷ ಫಕ್ಕಿರಗೌಡ ಗಾಜೀಗೌಡ್ರ ಮಾತನಾಡಿ ವಿವಿಧ ಕಂಪನಿಗಳು ರೈತರಿಗೆ ಬೀಜ ವಿತರಿಸುವ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಬೀಜ ಜಿಲ್ಲೆಯ ಎಲ್ಲ ರೈತರಿಗೂ ವಿತರಿಸುವಂತೆ ಕ್ರಮ ಕೈಗೊಳ್ಳಬೇಕು ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಹನಮಂತಪ್ಪ ಅವರು ತಮ್ಮ ಜಮೀನಿನಲ್ಲಿ ಡಿಕೆಸಿ 9133 ಮಾನಸೆಂಟೋ ಕಂಪನಿ ಬೀಜ ಹಾಕಿ ಅವರ ಬೆಳೆ ಇಂದು ಚಿಕ್ಕ ಚಿಕ್ಕ ತೆನೆ ತೆಗೆದು ಅವನ ಜೀವನಕ್ಕೆ ಆಧಾರವಾಗಬೇಕಾಗಿದ್ದ ಬೆಳೆ ಇಲ್ಲದೇ ಕಂಗಾಲಾಗಿದ್ದಾನೆ. ಆದರೆ ಉತ್ತರ ಕರ್ನಾಟಕ ರೈತ ಸಂಘ ಜಿಲ್ಲೆಯ ಯಾವ ರೈತನಿಗೂ ಅನ್ಯಾಯವಾಗಲು ಬಿಡುವುದಿಲ್ಲ ಕೊಡಲೇ ಕಂಪನಿಯವರು ಹಾಗೂ ಕೃಷಿ ಇಲಾಖೆಯವರು ಬೆಳೆ ಬರದೇ ಇರಲು ಏನು ಕಾರಣ ಕಳಪೆ ಬೀಜವೋ ಅಥವಾ ಅವಧಿ ಮಿರಿದ ಬೀಜವೋ ಪರಿಶೀಲಿಸಿ ಈ ರೈತನಿಗೆ ಸೂಕ್ತ ನ್ಯಾಯಪರ ನೀಡಲು ಮುಂದಾಗಬೇಕು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಉಕ ರೈತ ಸಂಘದ ಜಿಲ್ಲಾ ಸಂಚಾಲಕರಾದ ಫಕ್ಕಿರೇಶ ಡಿ ಕಾಳಿ. ಗ್ರಾಪಂ ಸದಸ್ಯರಾದ ಗಿರಿಜಾಶಂಕರಗೌಡ ಕರೆಗೌಡ್ರ.ಬಸವಗೌಡ ಭ ಕರೆಗೌಡ್ರ.ಉಮೇಶ ಕರೆಪ್ಪನವರ.ಭರಮಗೌಡ್ರ ಕರೆಗೌಡ್ರ ಹೊಲದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
