ತುಮಕೂರು :
ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅನುಕೂಲಕ್ಕಾಗಿ ಎಲ್ಲಾ ಬಿಎಲ್‍ಓಗಳು ವೋಟರ್ ಸ್ಲಿಪ್‍ನೊಂದಿಗೆ ನಿಯೋಜಿಸಿರುವ ಮತಗಟ್ಟೆ ಬಳಿ ಬೆಳಿಗ್ಗೆ 7 ಗಂಟೆಯಿಂದಲೇ ಹಾಜರಿರಬೇಕೆಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯಲ್ಲಿ ಇಂದು ನಡೆಯಲಿರುವ ತುಮಕೂರು ಮಹಾನಗರಪಾಲಿಕೆ, ಚಿಕ್ಕನಾಯಕನಹಳ್ಳಿ ಹಾಗೂ ಮಧುಗಿರಿ ಪುರಸಭೆ, ಗುಬ್ಬಿ ಹಾಗೂ ಕೊರಟಗೆರೆ ಪಟ್ಟಣ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮತದಾರರಿಗೆ ವೋಟರ್ ಸ್ಲಿಪ್‍ಗಳನ್ನು ವಿತರಣೆ ಮಾಡಲಾಗಿದೆ. ಬಿಎಲ್‍ಓಗಳು ಚುನಾವಣೆ ದಿನದಂದು ನಿಯೋಜಿಸಿರುವ ಮತಗಟ್ಟೆ ಬಳಿ ಹಾಜರಿದ್ದು, ವಿತರಣೆಯಾಗದೇ ಉಳಿದಿರುವ ವೋಟರ್ ಸ್ಲಿಪ್‍ಗಳನ್ನು ಸ್ಥಳದಲ್ಲಿಯೇ ಮತದಾರರಿಗೆ ನೀಡಬೇಕು ಎಂದು ಅವರು ಸೂಚಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ