ಬಳ್ಳಾರಿ:
ಹಣಕಾಸಿನ ವಹಿವಾಟಿಗೆ ಸಂಬಂದಿಸಿ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಿನ್ನೆ ತಾಲೂಕಿನ ಮೋಕಾ ಗ್ರಾಮದಲ್ಲಿ ನಡೆದಿದೆ. ವೃದ್ದೆ ಬಸಮ್ಮ (70) ಸಾವನ್ನಪ್ಪಿದ್ದಾಳೆ ಮಾರ್ಕಂಡೇಯ ವೃದ್ದೆಯ ಸಾವಿಗೆ ಕಾರಣನಾಗಿದ್ದಾನೆ.
ಮಾರ್ಕಂಡೇಯ ಬಸಮ್ಮ ಮತ್ತವರ ಮಗಳು ಗಂಗಮ್ಮಗೆ ಹಣ ನೀಡಿದ್ದ.ಹಣ ವಾಪಸ್ಸು ನೀಡುವ ವಿಚಾರದಲ್ಲಿ ಜಗಳವಾಗಿದೆ.ಬಿಡಿಸಲು ಬಂದ ಬಸಮ್ಮಳನ್ನು ಮಾರ್ಕಂಡೇಯ ತಳ್ಳಿದಾಗ ಕೆಳಗೆ ಬಿದ್ದ ಬಸಮ್ಮ ಸಾವನ್ನಪ್ಪಿದ್ದಾಳೆ.ಈ ಬಗ್ಗೆ ಸ್ಥಳೀಯ ಮೋಕಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ.
![](https://prajapragathi.com/wp-content/uploads/2018/08/1-20.gif)