ಇಂದು ಪಾಲಿಕೆಗೆ ಮೊದಲ ಚುನಾವಣೆ: ಪಕ್ಷ ಹಾಗೂ ಪಕ್ಷೇತರರಾದ 215 ಅಭ್ಯರ್ಥಿಗಳ ‘ರಾಜಕೀಯ ಭವಿಷ್ಯ ನಿರ್ಧಾರ

 ತುಮಕೂರು:

      ತುಮಕೂರು ಮಹಾನಗರ ಪಾಲಿಕೆಗೆ ಇಂದು (ಆಗಸ್ಟ್ 31) ಮೊದಲನೇ ಚುನಾವಣೆ ನಡೆಯಲಿದ್ದು, ಪಕ್ಷ ಹಾಗೂ ಪಕ್ಷೇತರರಾಗಿ ಕಣದಲ್ಲಿರುವ 215 ಅಭ್ಯರ್ಥಿಗಳ ‘‘ರಾಜಕೀಯ ಭವಿಷ್ಯ’’ ವನ್ನು ಮತದಾರರು ದಾಖಲಿಸಲಿದ್ದಾರೆ.

      ಪಾಲಿಕೆಯು ಒಟ್ಟು 35 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎಲ್ಲ 35 ವಾರ್ಡ್ಗಳಲ್ಲೂ ಸ್ಪರ್ಧಿಸಿವೆ. ಆದರೆ ಬಿಜೆಪಿ ಮಾತ್ರ ಅಚ್ಚರಿಯೆಂಬಂತೆ ಕೇವಲ 33 ವಾರ್ಡ್ಗಳಿಗೆ ಮಾತ್ರ ಸ್ಪರ್ಧಿಸಿದೆ. 10 ನೇ ವಾರ್ಡ್ (ಲೇಬರ್ ಕಾಲೋನಿ- ಹಿಂದುಳಿದ ವರ್ಗ ‘ಎ’ ಮಹಿಳೆ) ಮತ್ತು 13 ನೇ ವಾರ್ಡ್ (ಕುರಿಪಾಳ್ಯ- ಸಾಮಾನ್ಯ ಮಹಿಳೆ)ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿಲ್ಲ. ಮಿಕ್ಕುಳಿದ ಅಭ್ಯರ್ಥಿಗಳಲ್ಲಿ ಸಿಪಿಎಂ, ಬಿಎಸ್ಪಿ ಮತ್ತು ಪಕ್ಷೇತರರು ಇದ್ದಾರೆ.

ಒಟ್ಟು 271 ಮತಗಟ್ಟೆಗಳು:

      ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಆಯಾ ವಾರ್ಡ್ಗಳಲ್ಲಿ ಮತದಾನ ಮಾಡಲು ಅನುಕೂಲವಾಗುವಂತೆ ನಗರಾದ್ಯಂತ ಒಟ್ಟು 271 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

      ಈ ಬಾರಿ ಮತದಾನಕ್ಕೆ ಮತ ಯಂತ್ರ (ಎಲೆಕ್ಟ್ರಾನಿಕೆ ವೋಟಿಂಗ್ ಮೆಷಿನ್ -ಎವಿಎಂ) ಬಳಸಲಾಗುತ್ತಿದೆ. ‘‘ನೋಟಾ’’ (ಮೇಲ್ಕಂಡ ಯಾರಿಗೂ ಇಲ್ಲ) ಗೂ ಮತದಾರರಿಗೆ ಅವಕಾಶವಿರುತ್ತದೆ.

      ಒಟ್ಟು 2,59,513 ಮತದಾರರು ನಗರದಲ್ಲಿ ಒಟ್ಟಾರೆ 2,59,513 ಮತದಾರರು ಇದ್ದಾರೆ. ಇವರಲ್ಲಿ 1,28,882 ಪುರುಷರು, 1,30,597 ಮಹಿಳೆಯರು ಮತ್ತು 34 ಇತರರು ಇದ್ದಾರೆ. ಪುರುಷರಿಗಿಂತ ಮಹಿಳಾ ಮತದಾರರೇ ಅಧಿಕವಾಗಿರುವುದು ಒಂದು ವಿಶೇಷ.

ಮಹಿಳೆಯರಿಗೆ 17 ಸ್ಥಾನಗಳು:

      ಪಾಲಿಕೆಯು ಒಟ್ಟು 35 ಸದಸ್ಯಬಲ ಹೊಂದಿದೆ. ಹೊಸ ಮಾರ್ಗಸೂಚಿ ಅನ್ವಯ ಇದೇ ಮೊದಲ ಬಾರಿಗೆ ಅರ್ದದಷ್ಟು ಭಾಗ ಮಹಿಳಾ ಮೀಸಲಾತಿ ಲಭಿಸಿದೆ. ಅದರಂತೆ ಒಟ್ಟು 17 ವಾರ್ಡ್ಗಳಿಂದ ಮಹಿಳಾ ಅಭ್ಯರ್ಥಿಗಳು ಪಾಲಿಕೆಗೆ ಆಯ್ಕೆ ಆಗಲಿದ್ದಾರೆ. ಮಹಿಳಾ ಮೀಸಲಾತಿ ಆಗಿರುವ ವಾರ್ಡ್ಗಳೆಂದರೆ 1, 4, 6, 9, 10, 13, 14, 15, 18, 19, 21, 25, 27, 29, 33, 34 ಮತ್ತು 35.

ಕಣದಲ್ಲಿರುವ ಪ್ರಮುಖರು:

      ಈ ಚುನಾವಣೆಯಲ್ಲಿ ಮಾಜಿ ಮೇಯರ್ ಕೆ.ಜಿ.ಗೀತಾ (ಗೀತಾ ರುದ್ರೇಶ್) ಪಕ್ಷೇತರರಾಗಿ 18 ನೇ ವಾರ್ಡ್ನಿಂದ (ಬನಶಂಕರಿ-ಸಾಮಾನ್ಯ ಮಹಿಳೆ) ಕಣಕ್ಕಿಳಿದಿದ್ದಾರೆ. ಮತ್ತೋರ್ವ ಮಾಜಿ ಮೇಯರ್ ಲಲಿತಾ ರವೀಶ್ ಜೆಡಿಎಸ್ ಅಭ್ಯರ್ಥಿಯಾಗಿ 21 ನೇ ವಾರ್ಡ್ನಿಂದ (ಕುವೆಂಪು ನಗರ- ಹಿಂದುಳಿದ ವರ್ಗ ‘ಎ‘ ಮಹಿಳೆ) ಹಾಗೂ ಇನ್ನೋರ್ವ ಮಾಜಿ ಮೇಯರ್ ಎಚ್.ರವಿಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ 22 ನೇ ವಾರ್ಡ್ನಿಂದ (ವಾಲ್ಮೀಕಿನಗರ- ಸಾಮಾನ್ಯ) ಸ್ಪರ್ಧಿಸಿದ್ದಾರೆ.

      ಕಳೆದ ಅವಧಿಯ ಕೊನೆಯ ಮೇಯರ್ ಆಗಿದ್ದ ಸುಧೀಶ್ವರ್ 9 ನೇ ವಾರ್ಡ್ (ವೀರಸಾಗರ- ಪರಿಶಿಷ್ಟ ಜಾತಿ ಮಹಿಳೆ)ನಿಂದ ಮೀಸಲಾತಿ ಬದಲಾದ ಕಾರಣ ತಮ್ಮ ಪತ್ನಿ ಪ್ರಭಾವತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ.

      ಮಾಜಿ ಉಪಮೇಯರ್ಗಳಾದ ಟಿ.ಆರ್.ನಾಗರಾಜು ಜೆಡಿಎಸ್ ಅಭ್ಯರ್ಥಿಯಾಗಿ 7 ನೇ ವಾರ್ಡ್ (ಅಗ್ರಹಾರ- ಹಿಂದುಳಿದ ವರ್ಗ ‘ಬಿ’)ನಿಂದ, ಧನಲಕ್ಷ್ಮೀ ರವಿ ಕಾಂಗ್ರೆಸ್ ಅಭ್ಯರ್ಥಿಯಾಗಿ 33 ನೇ ವಾರ್ಡ್ (ಕ್ಯಾತಸಂದ್ರ-ಸಾಮಾನ್ಯ ಮಹಿಳೆ)ನಿಂದ ರಾಜಕೀಯ ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ.

      ಇನ್ನು ನಗರದ 3 ನೇ ವಾರ್ಡ್ (ಅರಳೀಮರದ ಪಾಳ್ಯ- ಸಾಮಾನ್ಯ) ಬಿಜೆಪಿಯ ಬಿ.ಎಸ್.ನಾಗೇಶ್ ಅವರ ಸ್ಪರ್ಧೇಯಿಂದ ‘‘ಹೈವೋಲ್ಟೇಜ್’’ ವಾರ್ಡ್ ಆಗಿ ಗುರುತಿಸಲ್ಪಟ್ಟಿದ್ದು, ನಗರಾದ್ಯಂತ ಕುತೂಹಲವನ್ನು ತನ್ನತ್ತ ಸೆಳೆದಿದೆ.
      ಮಾಜಿ ನಗರಸಭಾ ಅಧ್ಯಕ್ಷೆ ಕಾಂಗ್ರೆಸ್ನ ಟಿ.ಎಸ್.ದೇವಿಕಾ ಪಕ್ಷೇತರರಾಗಿ 28 ನೇ ವಾರ್ಡ್ (ಸದಾಶಿವನಗರ-ಸಾಮಾನ್ಯ) ನಿಂದ ಕಣಕ್ಕಿಳಿದಿದ್ದಾರೆ.

ಸೆ.3 ಮತ ಎಣಿಕೆ:

      ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಸೆಪ್ಟೆಂಬರ್ 3 ರಂದು ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಮತಯಂತ್ರ ಬಳಸಿರುವುದರಿಂದ ಲಿತಾಂಶ ಶೀಘ್ರವಾಗಿ ಲಭಿಸುವುದೆಂದು ತಿಳಿದುಬಂದಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link