ಗುಬ್ಬಿ ಪಟ್ಟಣ ಪಂಚಾಯಿತಿ: ಶೇ.79.10ರಷ್ಟು ಮತದಾನ

ಗುಬ್ಬಿ
        ಪಟ್ಟಣ ಪಂಚಾಯಿತಿಯ 19 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಶೇ.79.10 ರಷ್ಟು ಮತದಾನವಾಗಿದ್ದು ಮತದಾನ ಬಹುತೇಕ ಶಾಂತಿಯುವಾಗಿ ನಡೆಯಿತು.
         ಪಟ್ಟಣ ಪಂಚಾಯಿತಿ ವ್ಯಾಪ್ತಿಯ 19 ವಾರ್ಡ್‍ಗಳಲ್ಲಿ 15740 ಮತದಾರರಿದ್ದು ಈ ಪೈಕಿ 6231 ಪುರುಷರು (ಶೇ.80.57) ಮತ್ತು 6319 ಮಹಿಳೆಯರು (ಶೇ.78.94) ಸೇರಿ ಒಟ್ಟು 12550 (ಶೇ.79.73) ಮತದಾರರು ಮತದಾನ ಮಾಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 19, ಬಿಜೆಪಿಯಿಂದ 16, ಜೆಡಿಎಸ್‍ನಿಂದ 19 ಮತ್ತು ಪಕ್ಷೇತರರು 14 ಅಭ್ಯರ್ಥಿಗಳು ಸೇರಿದಂತೆ ಒಟ್ಟು 68 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದರು.
          ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು ಆರಂಭದಲ್ಲಿ ಮಂದಗತಿಯಲ್ಲಿ ನಡೆದ ಮತದಾನ 10 ಗಂಟೆಯ ನಂತರ ಬಿರುಸುಗೊಂಡಿತು. ಮಧ್ಯಾಹ್ನ 3 ಗಂಟೆಯ ನಂತರ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಮತಗಟ್ಟೆಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮತಗಟ್ಟೆಗಳಿಗೆ ವಿಶೇಷ ಪೊಲೀಸ್ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಬಹುತೇಕ ಶಾಂತಿಯುವಾಗಿ ಮತದಾನ ನಡೆಯಿತು.
         ಮತಪಟ್ಟಿಯಲ್ಲಿ ಕೆಲ ಕುಟುಂಬಗಳ ಸದಸ್ಯರ ಹೆಸರುಗಳು ಮತಪಟ್ಟಿಯಲ್ಲಿ ಬೇರೆ ಬೇರೆ ವಾರ್ಡ್‍ಗಳಿಗೆ ಹಂಚಿಹೋಗಿರುವುದರಿಂದ ಮತದಾರರು ಮತಗಟ್ಟೆ ಹುಡುಕುತ್ತಲೆ ಬೇಸರದಿಂದಲೆ ಮತ ಚಲಾಯಿಸಿದರು. ಮತದಾನಕ್ಕೂ ಮುಂಚೆ ಮತ ಹಾಕಲು ಮತದಾರರಿಗೆ ಚೀಟಿಯನ್ನು ಬಿಎಲ್‍ಒಗಳು ಮನೆಮನೆಗೆ ತಲುಪಿಸಬೇಕಿತ್ತು. ಆದರೆ ಕೆಲವು ಕಡೆಗಳಲ್ಲಿ ಚೀಟಿ ತಲುಪದೆ ಇದ್ದರಿಂದ ಮತದಾರರು ಮತಗಟ್ಟೆಗೆ ಬಂದು ಪರದಾಡುವಂತಾಗಿತ್ತು.

Recent Articles

spot_img

Related Stories

Share via
Copy link