ಚೇಳೂರು :
ಉತ್ತಮವಾದ ಕೃಷಿ ಬೇಸಾಯ ಇದ್ದಲ್ಲಿ ಸುಭಿಕ್ಷೆಯಾದ ಜೀವನ ಮಟ್ಟವು ಸಹ ಎತ್ತರ ಮಟ್ಟಕ್ಕೆ ಬೆಳೆಯುತ್ತಾದೆ ಎಂದು ಧರ್ಮಸ್ಥಳದ ಧರ್ಮಧಿಕಾರಿ ಡಾ,ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಹೋಬಳಿಯ ಮೂಗನಹುಣೆಸೆಯ ವಾಯುಪುತ್ರ ಪ್ರಗತಿ ಬಂಧು ಸಂಘದ ಮಾರುತಿನಳಿನಿಯವರ ಮನೆಯಲ್ಲಿ ಅಡಿಕೆ ಹಾಳೆ ತಟ್ಟೆ ಘಟಕ ಹಾಗೂ ಲಿಂಗಪುರದ ಸಂಪಿಗೆ ಪ್ರಗತಿ ಬಂಧು ಸಂಘದ ಪುಟ್ಟಿರಮ್ಮನವರ ಜಮೀನಲ್ಲಿ ಬೆಳೆದ ಸಮಗ್ರ ಕೃಷಿಯಲ್ಲಿ ತೆಂಗು, ಅಡಿಕೆ, ವಿಳ್ಯದೆಲೆ, ಕೊತ್ತಂಬರಿ ಹಾಗೂ ಇನ್ನಿತರ ಬೆಳೆ ಹಾಗೂ ಹೈನುಗಾರಿಕೆ ವಿಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ನಾನು ನಮ್ಮ ತಂದೆಯವರ ಜೊತೆಗೆ 1965-68ನೇ ಇಸವಿಯಲ್ಲಿ ಈ ಭಾಗದಲ್ಲಿ ಪ್ರಯಾಣಿಸುತ್ತಿದೆ. ನಂತರದ ದಿನಗಳಲ್ಲಿ ಈ ಮಾರ್ಗದಲ್ಲಿ ಕಮ್ಮಿ ಸಂಚಾರವನ್ನು ಮಾಡಿದ್ದಾನೆ. ಇತ್ತೀಚಿನ ವರ್ಷದಲ್ಲಿ ಈ ಭಾಗದ ತಿಪಟೂರಿನಲ್ಲಿ ಯಶ್ವಸಿಯಾದ ಕೃಷಿ ಮೇಳ ಹಲವರ ಸಹಕಾರೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆವತಿಯಿಂದ ನಡೆಯಿತು ಎಂದರು.
ಪಟ್ಟಣಗಳು ಅಭಿವೃದ್ಧಿಯಾಗುವುದಕ್ಕಿಂತ ಗ್ರಾಮೀಣ ಭಾಗದ ಹಳ್ಳಿಗಳು ಅಭಿವೃದ್ದಿಯಾದರೆ ದೇಶದ ಅಭಿವೃದ್ದಿಯಾಗುತ್ತಾದೆ. ಅತಂಹ ನಿಟ್ಟಿನಲ್ಲಿ ಸರ್ಕಾರದ ಸಹಾಯದೊಂದಿಗೆ ನಮ್ಮಂತಹ ಸಂಸ್ಥೆಗಳ ಸಹಕಾರದಿಂದ ಸಹಾಯ ಪಡೆದು ಗ್ರಾಮೀಣ ಭಾಗದ ರೈತರು, ಸ್ವಸಹಾಯ ಸಂಘದವರು ಅರ್ಥಿಕವಾಗಿ ತಾವು ಬೆಳೆದು ತಮ್ಮ ಕುಟುಂಬದ ರಕ್ಷಣೆಯನ್ನು ಮಾಡಿಕೊಳ್ಳಬಹುದು ಎಂದು ಹೇಳಿದರು.
ಈ ಯೋಜನೆಯ ಸದಸ್ಯರ ಪ್ರತಿವಾರದ 20 ರೂ.ಗಳ ಉಳಿತಾಯದಿಂದ ಈಗ 1400 ಕೋಟಿ ರೂ. ಉಳಿತಾಯವಾಗಿದೆ. ದುಡಿಮೆಯ ಒಂದು ಭಾಗ ಉಳಿತಾಯವನ್ನು ಮಾಡಿದ್ದಾರೆ. ಇನ್ನುಷ್ಟು ಹಣ ಉಳಿತಾಯವಾಗುತ್ತದೆ. ದುಡಿಮೆಯ ಶ್ರಮವನ್ನು ನಾವುಗಳು ಮಾಡುವುದರಿಂದ ನೆಮ್ಮದಿಯ ಜೀವನ, ಮಕ್ಕಳ ಭವಿಷ್ಯ ಅವರ ಸುಖದ ಜೀವನಕ್ಕೆ ದಾರಿಯಾಗುತ್ತಾದೆ. ಅದನ್ನು ಬಿಟ್ಟು ಮಧ್ಯಪಾನದತಂಹ ದುಶ್ಚಟಗಳಿಗೆ ಬಲಿಯಾದರೆ ಆರೋಗ್ಯದ ಜೊತೆಗೆ ಕುಟುಂಬದ ಅರ್ಥಿಕ ಮಟ್ಟವು ಕ್ಷೀಣಿಸುತ್ತಾದೆ ಎಂದು ಡಾ.ವೀರೇಂದ್ರ ಹೆಗಡೆಯವರು ಹೇಳಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಯೋಜನೆಯಿಂದ ಹಲವುರು ಗ್ರಾಮೀಣ ಭಾಗದ ರೈತರು ಸಾರ್ವಜನಿಕರಿಗೆ ಅನುಕೂಲವಾಗಿವೆ. ಈ ಸಂಸ್ಥೆಯ ಅರ್ಥಿಕ ಸಹಾಯ ಇಲ್ಲದಿದ್ದರೆ ಮೀಟರ್ ಬಡ್ಡಿಯತಂಹ ದಂಧೆಯಿಂದ ಕುಟುಂಬಗಳು ಬೀದಿ ಪಾಲಗುತ್ತಿದ್ದವು. ಅತಂಹ ಕುಟುಂಬಗಳ ರಕ್ಷಣೆ ಜೊತೆಗೆ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಹಣದ ಸಹಾಯ ಮಾಡುವುದು, ಧಾರ್ಮಿಕವಾಗಿ ಅನುಕೂಲಮಾಡುವುದು, ಹೈನುಗಾರಿಕೆಗೆ ಹಾಗೂ ಇನಿತ್ತರ ಕಾರ್ಯಕ್ಕೆ ಅರ್ಥಿಕವಾದ ಸಹಾಯವನ್ನು ಮಾಡುತ್ತಿದ್ದಾರೆ. ರೈತರ ಸಾರ್ವಜನಿಕರ ಅನುಕೂವಾಗಲಿಂದ ಹಲವು ಯೋಜನೆಗಳ ಮುಖಾಂತರ ಸಹಾಯದ ಹಸ್ತ ನೀಡುತ್ತಿರುವ ಡಾ.ವೀರೇಂದ್ರ ಹೆಗ್ಗೆಡೆಯವರ ಶ್ರಮ, ಸೇವೆ ಅಧಿಕವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ,ಜಿಲ್ಲಾ ನಿರ್ದೇಶಕಿ ದಯಾಶೀಲಾ, ಯೋಜನಾಧಿಕಾರಿ ಆರ್.ಎಸ್.ಹರೀಶ್, ರಾಘವೇಂದ್ರ, ಎಪಿಎಂಸಿ ನಿರ್ದೇಶಕ ಲೋಕೇಶ್ವರ್, ಸಿಪಿಐ ರಾಮಕೃಷ್ಣಯ್ಯ, ಪಿಎಸ್‍ಐ ವಿಜಯಕುಮಾರ್, ಪ್ರೋಬೇಶನರಿ ಪಿಎಸ್‍ಐ ಶಿವಕುಮಾರ್ ಯೋಜನೆಯ ಮೇಲ್ವಿಚಾರಕರು, ಸೇವಾಪ್ರನಿಧಿಗಳು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ