ಸಿರಿಗೇರಿ
ಸಮೀಪದ ಸಿರಿಗೇರಿ ಕ್ರಾಸ್ ಕೆಇಬಿ ಹತ್ತಿರ ಸರಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಂ ಎಸ್ ಸೋಮಲಿಂಗಪ್ಪ ಭೂಮಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.
ಹೆಚ್ ಕೆ ಅರ್ ಡಿ ಬಿ ಯೋಜನೆಯ 97 ಲಕ್ಷದ ಅನುದಾನದಲ್ಲಿ 8 ಕೊಠಡಿಗಳು ನಿರ್ಮಾಣವಾಗಲಿದ್ದು, ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಂ ಎಸ್ ಸೋಮಲಿಂಗಪ್ಪ, ಶಾನವಾಸಪುರದ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಸಿರಿಗೇರಿಗೆ ತೆರಳಬೇಕಿತ್ತು ಅದ್ದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಅನೂಕುಲವಾಗುತ್ತದೆ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಯವಾಗಿ ಶಿಕ್ಷಣ ಕೊಡಿಸಬೇಕು. ನಮ್ಮ ಕ್ಷೇತ್ರದ ಮಕ್ಕಳು ಶಿಕ್ಷಣ ವಂಚಿತರಾಗಬಾರದು. ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ,ಜಿಪಂ ಸದಸ್ಯಕೊಟೇಶ್ ರೆಡ್ಡಿ, ತಾಪಂ ಉಪಾಧ್ಯಕ್ಷ ಶಾಂತನ ಗೌಡ ಸದಸ್ಯೆ ನಾಗರತ್ನಮ್ಮ ದೊಡ್ಡ ಎರ್ರಿಸ್ವಾಮಿ,ಗ್ರಾಪಂ ಉಪಾಧ್ಯಕ್ಷೆ ಹೋನ್ನುರುಬಿ ಮಾಬುಸಾಬ್, ನೆನೆಕ್ಕಿ ವಿರುಪಾಕ್ಷಿಪ್ಪ, ಗುತ್ತಿಗೆದಾರ ರಾಜಗೋಪಲ ರೆಡ್ಡಿ, ಹಾಗೂ ಗ್ರಾಪಂ ಸದಸ್ಯರು, ಮುಖಂಡರು, ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ