ದೆಹಲಿ:
ಪ್ರಖ್ಯಾತ ಜೈನ ಮುನಿ ಶ್ರೀ ತರುಣ ಸಾಗರ ಅವರು ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದರು.
ದೆಹಲಿಯ ಕೃಷ್ಣ ನಗರದಲ್ಲಿರುವ ರಾಧಪುರಿ ಜೈನ್ ದೇವಾಲಯದಲ್ಲಿ ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ.
51 ವರ್ಷದ ಮುನಿಶ್ರೀಗಳು ಬಹಳ ದಿನಗಳಿಂದ ಜಾಂಡೀಸ್ ನಿಂದ ಬಳಲುತ್ತಿದ್ದು, ಅವರನ್ನು 20 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತೀರಾ ಹದಗೆಟ್ಟಿದ್ದರೂ ಕಳೆದ ಎರಡು ದಿನಗಳಿಂದ ಔಷಧವನ್ನೂ ಸೇವಿಸದೆ ಇದ್ದರು. ಜೊತೆಗೆ ಜೈನ ಮಂದಿರಕ್ಕೆ ತಮ್ಮನ್ನು ಕರೆದೊಯ್ಯುವಂತೆ ಅವರೇ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಜೈನ ಮಂದಿರಕ್ಕೆ ಕರೆದುಕೊಂಡು ಬರಲಾಗಿತ್ತು. ಇಂದು ಮಧ್ಯಾಹ್ನ ಉತ್ತರಪ್ರದೇಶದ ಮುರದ್ನಗರ್ನ ತರುಣ್ಸಾಗರಂನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಕಹಿ ಮಾತ್ರೆಗಳು ಎಂಬ ಹೆಸರಲ್ಲಿ ಪ್ರವಚನ ನೀಡುತ್ತಿದ್ದರು. ಅವರು ತಮ್ಮ 13ನೇ ವಯಸ್ಸಿನಲ್ಲಿ, 1988ರ ಜುಲೈ 20ರಂದು ಆಚಾರ್ಯ ಪುಷ್ಪದಂತ್ ಸಾಗರ್ ಅವರಿಂದ ದಿಗಂಬರ ಸನ್ಯಾಸಿಯಾಗಿ ದೀಕ್ಷೆ ಪಡೆದಿದ್ದರು.
ದಿಗಂಬರ ಪಂಥದ ಅನುಯಾಯಿಯಾಗಿದ್ದ ತರುಣ ಸಾಗರ ಅವರಿಗೆ ಲಕ್ಷಾಂತರ ಜನ ಭಕ್ತರಿದ್ದರು. ಅವರ ನಿಧನಕ್ಕೆ ದೇಶದಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ. ಜೈನ ಮುನಿಯಾಗಿದ್ದರೂ, ಜೈನ ಸಮಾಜದ ಆಚೆಗಿನ ಜನರ ಜತೆ ಉತ್ತಮ ಒಡನಾಟವನ್ನು ಅವರು ಹೊಂದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ