ಶಿಶು ಮತ್ತು ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಗತ್ಯ

ತಿಪಟೂರು 

           ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಿಪಟೂರು, ಆರೋಗ್ಯ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕೊನೇಹಳ್ಳಿ ಹಾಗೂ ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ ತಿಪಟೂರು ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದ ಮೊದಲದಿನದ ಕಾರ್ಯಕ್ರಮ ತಾಲ್ಲೂಕಿನ ಬಸ್ತಿಹಳ್ಳಿ ಗ್ರಾಮದಲ್ಲಿ ಜರುಗಿತು.
             ಶೀ ಮಲ್ಲಿಕಾರ್ಜುನರವರು ಗ್ರಾಮ ಪಂಚಾಯಿತಿ ಸದಸ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಸ್ಥಳೀಯವಾಗಿ ದೊರೆಯುವ ಆಹಾರ ಪದಾರ್ಥಗಳಲ್ಲಿ ಪೌಷ್ಟಿಕಕಾಂಶವಿದ್ದು ತಪ್ಪದೇ ಸ್ಥಳೀಯ ಆಹಾರಗಳನ್ನು ಉಪಯೋಗಿಸಿ ಪೌಷ್ಟಿಕತೆಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
             ಜಾಗೃತಿ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವ ಕುರಿತು ಮಾಹಿತಿ ನೀಡಿದ ಡಾ|| ಬಿಂದು, ಪೌಷ್ಟಿಕ ಆಹಾರ ವಿಷಯ ತಜ್ಞರು ಇವರು ಮಾತನಾಡಿ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಆಚರಣೆಯ ಉದ್ದೇಶ ತಿಳಿಸಿ ಪ್ರತಿಯೊಬ್ಬ ವ್ಯಕ್ತಿಗೂ ದಿನ ನಿತ್ಯದ ಆಹಾರದಲ್ಲಿ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಅಗತ್ಯ ಇದರಿಂದ ಸದೃಡವಾದ ಆರೋಗ್ಯ ಮತ್ತು ಪೌಷ್ಟಿಕ ಮಟ್ಟವನ್ನು ಕಾಪಾಡಲು ಸಾದ್ಯ. ಮುಖ್ಯವಾಗಿ 06 ವರ್ಷದೊಳಗಿನ ಮಕ್ಕಳು, ಗರ್ಭಿಣಿ ಬಾಣಂತಿಯರು, ಕಿಶೋರಿಯರಿಗೆ ಪೌಷ್ಟಿಕಾಂಶವುಳ್ಳ ಸಮತೋಲನ ಆಹಾರ ಅತ್ಯಗತ್ಯ ಸ್ಥಳೀಯವಾಗಿ ದೊರೆಯುವ ಏಕದಳ, ದ್ವಿದಳ ದಾನ್ಯಗಳು, ಮೊಳಕೆ ಭರಿಸಿದ ಕಾಳು, ಸೊಪ್ಪು, ತರಕಾರಿ, ಹಾಗೂ ಬೆಣ್ಣೆ, ತುಪ್ಪ, ಹಣ್ಣುಗಳ ನಿಯಮಿತ ಸೇವನೆಯಿಂದ ಉತ್ತಮ ಪೌಷ್ಟಿಕ ಮಟ್ಟವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
           ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ||ಚನ್ನಕೇಶವರವರು, ಮಾತನಾಡಿ ನಮ್ಮಲ್ಲಿಯೇ ಸ್ಥಳೀಯವಾಗಿ ದೊರೆಯುವ ಸೊಪ್ಪು ತರಕಾರಿಗಳು, ಆಹಾರಪದಾರ್ಥಗಳನ್ನು ನಿಯಮಿತವಾಗಿ ಉಪಯೋಗಿಸುವುದರಿಂದ ಉತ್ತಮ ಆರೋಗ್ಯ,ಪೌಷ್ಟಿಕತೆಯನ್ನು ಹೊಂದಬಹುದಾಗಿದ್ದು ಆಸ್ಪತ್ರೆಯಿಂದ ದೂರವಿರಬಹುದು ಎಂದು ತಿಳಿಸಿದರು. ಹಾಗೂ ಸುಚಿತ್ವಕ್ಕೆ ಹೆಚ್ಚಿನ ಆಧ್ಯತೆ ನೀಡುವುದರಿಂದ ಖಾಯಿಲೆಗಳಿಂದ ದೂರವಿರಬಹುದು ಹಾಗೂ ಹಣದ ಉಳಿತಾಯವನ್ನು ಮಾಡಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಪಿ.ರೇಖಾ, ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ, ತಿಪಟೂರು ಇವರು ಮಾತನಾಡಿ ಪೌಷ್ಟಿಕ ಆಹಾರ ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾಗಿದ್ದು ಪ್ರತಿಯೊಬ್ಬರು ಬ್ಯಾಂಕ್ ಖಾತೆಯನ್ನು ತೆರೆದು ಉಳಿತಾಯ ಮಾಡುವುದರ ಬಗ್ಗೆ ತಿಳಿಸಿದರು. ಹಾಗೂ ಸ್ತ್ರೀಶಕ್ತಿ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆಯರು ತಾಯಂದಿರು ತಯಾರಿಸಿದ ವಿವಿಧ ರೀತಿಯ ಪೌಷ್ಟಿಕ ಆಹಾರಗಳ ಪ್ರಾತ್ಯಕ್ಷಿತೆಯ ಮೂಲಕ ವಿವರಣೆ ನೀಡಿದರು.
             ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಪಿ.ಓಂಕಾರಪ್ಪನವರು ಮಾತನಾಡುತ್ತಾ ಅಂಗನವಾಡಿ ಕೇಂದ್ರದಿಂದ ನೀಡುವ ಪೂರಕ  ಪೌಷ್ಟಿಕ ಆಹಾರ ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳಾದ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಮಾತೃಪೂರ್ಣ ಯೋಜನೆ, ಇತರೆ ಸೌಲಭ್ಯಗಳ ಬಗ್ಗೆ ಅರ್ಹ ಫಲಾನುಭವಿಗಳು ಪಡೆದುಕೊಳ್ಳಲು ತಿಳಿಸಿದರು. ಹಾಗೂ ಆರೋಗ್ಯ ನಿರ್ವಹಣೆಯಲ್ಲಿ ಶುದ್ಧಕುಡಿಯುವ ನೀರಿನ ಬಳಕೆ, ವೈಯಕ್ತಿಕ ಸ್ವಚ್ಚತೆಗೆ ಮತ್ತು ಶೌಚಾಲಯ ಬಳಸುವಂತೆ ತಿಳಿಸಿದರು. ಹಾಗೂ ಸಿರಿಧಾನ್ಯವನ್ನು ಬಳಸುವಂತೆ ಹಾಗೂ ಆಹಾರ ಪದ್ದತಿಯ ಬಗ್ಗೆ ತಿಳಿಸಿದರು.
            ಕಾರ್ಯಕ್ರಮದಲ್ಲಿ ಮಹಿಳಾ ಸಂರಕ್ಷಣಾಧಿಕಾರಿಗಳಾದ ಶ್ರೀಮತಿ ಶ್ರೀಲತಾ ರವರು ಮಾತನಾಡುತ್ತಾ, ಮಹಿಳೆಯರಿಗೆ ಕುಟುಂಬದಲ್ಲಿ ಸಮಸ್ಯೆಯು ಬಂದಲ್ಲಿ ಅಂಗನವಾಡಿ ಕೇಂದ್ರಕ್ಕೆ ಬಂದು ಮಾಹಿತಿ ನೀಡುವುದು. ಹಾಗೂ ನಮ್ಮ ಇಲಾಖೆಯು ಸದಾ ನಿಮ್ಮ ಸೇವೆಗೆ ಸಿದ್ದವಿರುತ್ತದೆ ಎಂದು ತಿಳಿಸಿದರು.
            ಕಾರ್ಯಕ್ರಮದಲ್ಲಿ ನೆಲ್ಲಿಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅನಿತಾ ಆರ್.ಜಿ. ಮಾತನಾಡುತ್ತಾ ತಮ್ಮ ಮನೆಯ ಅಕ್ಕ ಪಕ್ಕದ ಜಾಗದಲ್ಲಿ ಕೈತೋಟನ್ನು ನಿರ್ಮಿಸಿಕೊಳ್ಳಬೇಕು ಹಾಗೂ ಬೇಕರಿ ತಿಂಡಿಗಳಿಗೆ ಮಾರುಹೋಗದೆ ತಮ್ಮ ಮನೆಯಲ್ಲಿಯೇ ದೊರೆಯುವಂತಹ ದಾನ್ಯಗಳನ್ನು ಬಳಸಿಕೊಂಡು ಪೌಷ್ಟಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.
             ಶ್ರೀಮತಿ ಸರಳಾದೇವಿ, ಹಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ, ಶ್ರೀಮತಿ ಸುವರ್ಣಮ್ಮ, ಮೇಲ್ವಿಚಾರಕಿ, ಶ್ರೀಮತಿ ಬಿ.ಎಸ್.ಅನುಸೂಯಮ್ಮ, ಅಂಗನವಾಡಿ ಕಾರ್ಯಕರ್ತೆಯ ಸಂಘದ ಅಧ್ಯಕ್ಷರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಶ್ರೀಮತಿ ಜಯಮ್ಮ, ಗ್ರಾಮ ಪಂಚಾಯಿತಿ ಸದಸ್ಯರು, ಆರೋಗ್ಯ ಇಲಾಖೆಯ ಶ್ರೀ ಪ್ರಭುಸ್ವಾಮಿ ಮತ್ತು ಶ್ರೀಮತಿ ಆಶಾ, ಶ್ರೀ ಭರತ್‍ರವರು, ಊರಿನ ಗ್ರಾಮಸ್ಥರಾದ ಶ್ರೀ ಶಿವಶಂಕರಪ್ಪ, ಶ್ರೀರಾಜಣ್ಣನವರು, ವಿಎಸ್‍ಎಸ್‍ಎನ್ ಕಾರ್ಯದರ್ಶಿ ಶ್ರೀ ಆರಾಧ್ಯರವರು, ಅಂಗನವಾಡಿ ಕಾರ್ಯಕರ್ತೆಯರು, ತಾಯಂದಿರು ಸ್ತ್ರೀಶಕ್ತಿ ಮಹಿಳೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
            ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಪೌಷ್ಟಿಕ ಆಹಾರ ಪ್ರಾತ್ಯಕ್ಷಿತೆಯಲ್ಲಿ ವಿವಿಧ ಬಗೆಯ ಸ್ಥಳೀಯ ಪೌಷ್ಟಿಕ ಆಹಾರಗಳು ಎಲ್ಲರ ಗಮನ ಸೆಳೆದವು.
              ಮೊದಲಿಗೆ ಶ್ರೀಮತಿ ಶಾರದಮ್ಮ, ಅಂಗನವಾಡಿ ಕಾರ್ಯಕರ್ತೆ ಇವರ ಪ್ರಾರ್ಥನೆ ಜರುಗಿತು ಶ್ರೀಮತಿ ಗೌರವ್ವ ಎಣ್ಣಿ, ಮೇಲ್ವಿಚಾರಕಿ, ಇವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಸುವರ್ಣಮ್ಮ, ಮೇಲ್ವಿಚಾರಕಿ ಇವರು ವಂದನಾರ್ಪಣೆ ನಡೆಸಿಕೊಟ್ಟರು. ಶ್ರೀ ಕೆ.ಪಿ.ಕೃಷ್ಣಮೂರ್ತಿ, ಮುಖ್ಯ ಶಿಕ್ಷಕರು, ಬಸ್ತಿಹಳ್ಳಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು, ಸ್ತ್ರೀಶಕ್ತಿ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಭಾಗವಹಿಸಿ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link