ಕೊಟ್ಟೂರು:

ಪಟ್ಟಣದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಹಾಗೂ ಅಪಘತಕ್ಕೆ ಕಾರಣವಾಗುತ್ತಿದ್ದ ಬೀಡಾಡಿ ಹಸುಗಳ ಹಾವಳಿಯನ್ನು ನಿಯಂತ್ರಿಸಲು ಪೊಲೀಸರು ಅವುಗಳನ್ನು ಹಿಡಿದು ಶನಿವಾರ ಮಲಪನಗುಡಿ ಗೋಶಾಲೆಗೆ ರವಾನಿಸಿದರು.
ಬೀಡಾಡಿ ಹಸುಗಳು ಬೈಕ್, ಕಾರು, ಬಸ್ಸು,ಲಾರಿಗಳು ಸಂಚರಿಸುವಾಗ ಅಡ್ಡಿ ಬಂದಾಗ ಅನೇಕ ಸಾರಿ ಅಪಘಾತಗಳಗಿವೆ ರಾತ್ರಿ ವೇಳೆ ಗುಂಪು ಗುಂಪಾಗಿ ರಸ್ತೆಯ ನಡುವೆ ಮಲಗುತ್ತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದವು.
ಹಸುಗಳ ಹಾವಳಿ ಅನುಭವಿಸಿದ ವಾಹನಗಳ ಚಾಲಕರು ಪೋಲಿಸರಿಗೆ ದೂರು ನೀಡಿದ್ದರಿಂದ ಹಸುಗಳ ಮಾಲಿಕರು ತಮ್ಮ ಮನೆಗಳಲ್ಲಿ ಸಾಕುವಂತೆ ಪೋಲಿಸರು ಪ್ರಚಾರ ಪಡಿಸಿ ಕೆಲವನ್ನು ವಶಪಡಿಸಿಕೊಂಡಗ ಹಸುಗಳ ಮಾಲಿಕರು ಬಂದು ಬಿಡಿಸಿಕೊಂಡು ಹೋಗಿದ್ದರು.
ಪಟ್ಟಣದಲ್ಲಿ ನೂರಾರು ಬೀಡಾಡಿ ಹಸುಗಳಿದ್ದು ಇವುಗಳು ಕರುವಾಗಿದ್ದಾಗ ಕೊಟ್ಟೂರೇಶ್ವರ ಸ್ವಾಮಿಯ ಭಕ್ತರು ಅರಕೆ ರೂಪದಲ್ಲಿ ಬಿಟ್ಟಿದ್ದಾರೆ ಈ ಸಂಗತಿ ತಿಳಿದ ಪೋಲಿಸರು ಇವುಗಳನ್ನು ನಿಯಂತ್ರಿಸುವಂತೆ ಮೂರು ಭಾರಿ ಶ್ರೀ ಮಠದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಧರ್ಮಕರ್ತರಿಗೆ ನೋಟಿಸ್ ನೀಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಈಕ್ರಮಕೈಗೊಂಡಿದ್ದಾಗಿ ಸಬ್ಇನ್ಸ್ಫೆಕ್ಟರ್ ತಿಮ್ಮಣ್ಣ ಚಾವನೂರು ಪತ್ರಿಕೆಗೆ ತಿಳಿಸಿದರು.
ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ರೂಪದಲ್ಲಿ ಕೊಟ್ಟೂರೇಶ್ವರ ಸ್ವಾಮಿಗೆ ಅರ್ಪಣೆ ಮಾಡಿದ್ದ ಹಸುವಿನ ಕರುಗಳೆ ಈ ಬೀಡಾಡಿ ಗೋವುಗಳು ಇವುಗಳ ಅನಾಥ ಸ್ಥಿತಿಯ ಕುರಿತ ವಿಜಯವಾಣಿ ಪತ್ರಿಕೆ ವಿಶೇಷ ವರದಿ ಪ್ರಕಟಿಸಿತ್ತು.
ಈ ವರದಿಗೆ ಸ್ಪಂದಿಸಿದ ಶ್ರೀಮಠದ ಧರ್ಮಾಧಿಕಾರಿ ಹಾಗೂ ಕಾರ್ಯನಿರ್ವಾಹಕಾಧಿಕಾರಿ ಪಟ್ಟಣದ ಇಟಗಿ ಮಾರ್ಗದ ಸಮೀಪವಿರುವ ಶ್ರೀಮಠದ ಮೂರು ಎಕರೆ ಭೂಮಿಯಲ್ಲಿ ಗೋಶಾಲೆ ಮಾಡುವುದಾಗಿ ತಿಳಿಸಿದ್ದು ಇದುವರೆವಿಗೂ ಕಾರ್ಯರೂಪಕ್ಕೆ ಬಂದಿಲ್ಲ.
ಭಕ್ತರು ಹರಕೆಯ ರೂಪದಲ್ಲಿ ಆರ್ಪಿಸಿದ ಗೋವುಗಳು ರಕ್ಷಣೆ ಇಲ್ಲದಕಾರಣ ಪೋಲಿಸರು ಮಲಪನಗುಡಿ ಗೋಶಾಲೆಗೆ ಬಿಡುತ್ತಿದ್ದಾರೆ ಇದರಿಂದ ಭಕ್ತರು ಶ್ರೀಮಠದ ಆಡಳಿತದ ವಿರುದ್ದ ಬೇಸರಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








