ತುಮಕೂರು:
ಬಡ್ಡಿ ದರಗಳು
ಗೃಹ ಸಾಲಕ್ಕಾಗಿ ಪ್ರತಿಯೊಬ್ಬರೂಕಡಿಮೆ ಬಡ್ಡಿ ದರಗಳ ಬಗ್ಗೆ ಹೆಚ್ಚು ಗಮನಹರಿಸುವುದು ಸಾಮಾನ್ಯ ಸಂಗತಿ.ಇದರಿಂದ, ಗೃಹ ನಿರ್ಮಾಣಕ್ಕೆಕಡಿಮೆ ವೆಚ್ಚ ತಗಲುತ್ತದೆಎನ್ನುವ ಮನೋಭಾವ ಸಾರ್ಮನ್ಯ.ಆದರೆ, ಇದುತಪ್ಪು.ಇದಕ್ಕಿಂತ ಮುಖ್ಯವಾಗಿ ಸಾಲಕ್ಕಾಗಿ ಅಸಲು ಮೊತ್ತ, ಸಾಲಕ್ಕಾಗಿ ಅರ್ಹತೆ, ಸಾಲದಅವಧಿ, ಪರಿಷ್ಕರಣೆ ಶುಲ್ಕ, ಕಡತಗಳ ಶುಲ್ಕ, ಸ್ಟ್ಯಾಂಪ್ ಶುಲ್ಕ, ವಿಮೆ ಮತ್ತು ಸುಲಭ ತಿಂಗಳ ಕಂತುಗಳ ಬಗ್ಗೆ ಹೆಚ್ಚು ಗಮನ ನೀಡಬೇಕು.ಎಲ್ಲ ಶುಲ್ಕಗಳು, ಅರ್ಹತೆಕುರಿತಾದ ವಿವರ ನೀಡುವ ದಾಖಲೆಗಳು ಮತ್ತು ಮಹತ್ವದ ಷರತ್ತುಗಳು (ಎಂಐಟಿಸಿ) ಬಗ್ಗೆ ಗ್ರಾಹಕರು ಹೆಚ್ಚು ವಿವರಗಳನ್ನು ಸಂಗ್ರಹಿಸಬೇಕು.ಮನೆ ಸಾಲವು ಹಣಕಾಸು ಸಂಸ್ಥೆ ಜತೆ ಸುದೀರ್ಘಅವಧಿಗೆ ಸಂಬಂಧ ಹೊಂದಿರುತ್ತದೆ.ಆದ್ದರಿಂದ, ಹಣಕಾಸು ಸಂಸ್ಥೆಗಳ ಪೂರ್ವಾಪರದ ಬಗ್ಗೆ ಎಚ್ಚರವಹಿಸಬೇಕು.ಈ ಸಂಸ್ಥೆಗಳ ಘನತೆ, ಗ್ರಾಹಕರ ಸೇವೆಗಳು ಮತ್ತು ಸಾಮಥ್ರ್ಯದ ಬಗ್ಗೆಯೂ ವಿಶ್ಲೇಷಿಸಬೇಕು.
ಸಂಪತ್ತಿನ ಸಾಲದಅನುಪಾತ
ಸಾಲಕ್ಕೆ ಅರ್ಜಿ ಹಾಕುವ ಮುನ್ನ, ಖರೀದಿಸುವ ಅಪಾರ್ಟ್ಮೆಂಟ್ನ ಮೌಲ್ಯ ಮತ್ತು ಸಾಲದಅನುಪಾತ (ಎಲ್ಟಿವಿ) ಎಷ್ಟು ಇದೆಎನ್ನುವುದನ್ನೂ ತಿಳಿದುಕೊಳ್ಳಬೇಕು.ಪಡೆಯಲಿರುವಒಟ್ಟು ಸಾಲಕ್ಕೆ ಮುಂಗಡ ಹಣ ಎಷ್ಟು ಪಾವತಿಸಬೇಕು/ ಹೊಂದಿಸಿಕೊಳ್ಳಬೇಕು ಎನ್ನುವುದನ್ನೂಇದು ಸೂಚಿಸುತ್ತದೆ.ಇದಕ್ಕೂ ಮೊದಲು ‘ಎಲ್ಟಿವಿ’ ಯನ್ನು ಶೇಕಡ 80ರಷ್ಟು ಮೌಲ್ಯಕ್ಕೆ ಪರಿಗಣಿಸಲಾಗುತ್ತಿತ್ತು.ಈಗ ಇದನ್ನು ರೂ.30 ಲಕ್ಷಕ್ಕಿಂತ ಸಾಲ ಕಡಿಮೆಇದ್ದರೆ ಶೇಕಡ 90ಕ್ಕೆ ಹೆಚ್ಚಿಸಲಾಗಿದೆ.ಅಂದರೆ, 30 ಲಕ್ಷ ಮೊತ್ತದವರೆಗಿನ ಸಾಲಕ್ಕೆ ಗ್ರಾಹಕರು ಶೇಕಡ 10ರಷ್ಟು ಮಾತ್ರ ಮುಂಗಡ (ಡೌನ್ ಪೇಮೆಂಟ್) ಪಾವತಿಸಬೇಕು.
ಅವಧಿಗೆ ಮುನ್ನ ಮರುಪಾವತಿ ಶುಲ್ಕ
ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಬಗ್ಗೆ ಗ್ರಾಹಕರಲ್ಲಿಇನ್ನೊಂದುತಪ್ಪು ಮಾಹಿತಿಇದೆ.ಅವಧಿಗೆ ಮುನ್ನವೇ ಸಾಲವನ್ನು ಮರುಪಾವತಿಸಿದರೆ ದಂಡ ಪಾವತಿಸಬೇಕಾಗುತ್ತದೆಎನ್ನುವ ಮಾಹಿತಿ ಹೊಂದಿರುತ್ತಾರೆ.ಆದರೆಗ್ರಾಹಕರಿಗೆ ಅನುಕೂಲ ಮಾಡುವದೃಷ್ಟಿಯಿಂದಅವಧಿಗೆ ಮುನ್ನವೇ ಸಾಲ ಮರುಪಾವತಿಸಿದರೆ ದಂಡ ವಿಧಿಸುವುದಕ್ಕೆ ವಿನಾಯ್ತಿ ನೀಡಿ ಭಾರತೀಯರಿಸರ್ವ್ ಬ್ಯಾಂಕ್ ಮತ್ತುಎನ್ಎಚ್ಬಿ ಆದೇಶ ಹೊರಡಿಸಿವೆ.
ಉತ್ತಮಕ್ರೆಡಿಟ್ ಸ್ಕೋರ್ ಮುಖ್ಯ
ಸಾಲ ಪಡೆಯುವವರ ಸಾಮಥ್ರ್ಯವನ್ನು ಅಳೆಯುವುದೇ ‘ಕ್ರೆಡಿಟ್ ಸ್ಕೋರ್’.ಸಕಾಲಕ್ಕೆ ಮತ್ತು ಸರಿಯಾದ ಸಾಲದ ಮೊತ್ತವನ್ನು ಮರುಪಾವತಿಸುವ ಮೂಲಕ ಉತ್ತಮಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳಬಹುದು.ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವಾಗ, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಕ್ರೆಡಿಟ್ ಸ್ಕೋರ್ಅನ್ನು ಪರಿಶೀಲಿಸುವುದು ಸಾಮಾನ್ಯ.ಇದರಿಂದ, ಈ ಸಂಸ್ಥೆಗಳಿಗೆ ಸಾಲ ಮರುಪಾವತಿಸುವವರ ಹಣಕಾಸಿನ ಸಾಮಥ್ರ್ಯದ ವಿವರಗಳು ಲಭ್ಯವಾಗುತ್ತವೆ. ಜತೆಗೆಉತ್ತಮಕ್ರೆಡಿಟ್ ಸ್ಕೋರ್ಇದ್ದರೆ, ಸುಲಭವಾಗಿಗ್ರಾಹಕರಿಗೆ ಗೃಹ ಸಾಲದಅರ್ಹತೆ ನೀಡುವುದು ನಿರ್ಧಾರವಾಗುತ್ತದೆ.ಆದರೆ, ಇದೊಂದೇ ಮಾನದಂಡವಾಗುವುದಿಲ್ಲ. ಇತರ ಸಂಗತಿಗಳು ಸಹ ಗೃಹ ಸಾಲದ ಬಗ್ಗೆ ನಿರ್ಧಾರ ಕೈಗೊಳ್ಳಲು ನೆರವಾಗುತ್ತವೆ. ಗ್ರಾಹಕರ ವೃತ್ತಿ, ಉದ್ಯೋಗಅಥವಾ ವ್ಯಾಪಾರದಲ್ಲಿ ಸ್ಥಿರತೆ, ಸ್ಥಿರ ಆದಾಯ, ಸಾಲದಇತಿಹಾಸ ಮುಂತಾದ ಸಂಗತಿಗಳು ಸಹ ನಿರ್ಣಾಯಕವಾಗಿರುತ್ತವೆ.
ಗೃಹ ಸಾಲದಅವಧಿ
ಗೃಹ ಸಾಲದಅವಧಿಯು ಹಲವಾರು ಸಂಗತಿಗಳನ್ನು ಒಳಗೊಂಡಿರುತ್ತದೆ.ಗ್ರಾಹಕರ ವಯಸ್ಸು, ಮನೆ ಸಾಲದ ಮೊತ್ತ, ಆದಾಯ, ಉದ್ಯೋಗ, ಹಿಂದಿನ ಸಾಲ ಮರುಪಾವತಿ ಸಂಗತಿಗಳು ಸಹ ಮುಖ್ಯವಾಗುತ್ತವೆ. ಸಾಮಾನ್ಯವಾಗಿ ಪ್ರಸ್ತುತಆದಾಯದ ಮೇಲೆ ಹಣಕಾಸು ಸಂಸ್ಥೆಗಳು ಸಾಲ ನೀಡುತ್ತವೆ. ಸುದೀರ್ಘಅವಧಿಗೆ ಸಾಲ ಪಡೆಯುವಾಗಗ್ರಾಹಕರು, ಹೆಚ್ಚಿನ ಮೊತ್ತದ ಸಾಲ ಪಡೆಯಬೇಕು.ಇದುಅವರ ವಯಸ್ಸು ಮತ್ತು ಮರುಪಾವತಿ ಸಾಮಥ್ರ್ಯವನ್ನು ಅವಲಂಬಿಸಿರುತ್ತದೆ.ಒಂದು ವೇಳೆ ಗ್ರಾಹಕರಿಗೆ ಹೆಚ್ಚುವರಿಯಾಗಿ ಹಣಕಾಸು ಹೊಂದಿಸಿಕೊಳ್ಳುವ ಸಾಮಥ್ರ್ಯಇದ್ದರೆ, ಅವಧಿಗೆ ಮುನ್ನವೇ ಸಾಲ ಮರುಪಾವತಿಸಬಹುದು.ಸುದೀರ್ಘಅವಧಿಯ ಸಾಲದ ಮೊತ್ತಕ್ಕೆಕಡಿಮೆ ಮೊತ್ತದ ತಿಂಗಳ ಕಂತುಗಳು ದೊರೆಯುತ್ತವೆ. ಇದರಿಂದ ಹಣಕಾಸಿಗೆ ಸಂಬಂಧಿಸಿದ ಇತರ ಅನುಕೂಲಗಳನ್ನು ಕಲ್ಪಿಸಿಕೊಳ್ಳಬಹುದು.ಸುದೀರ್ಘ ಮತ್ತುಅಲ್ಪಾವಧಿಗೆ ಸಾಲ ಪಡೆಯುವುದು ಅನುಕೂಲವೂ ಹೌದು.ಹೀಗಾಗಿ, ಸಾಲದಅವಧಿ, ಲಾಭ ಮತ್ತು ನಷ್ಟದಕುರಿತು ವಿಶ್ಲೇಷಣೆ ಮಾಡಿಯೇ ನಿರ್ಧಾರ ಕೈಗೊಳ್ಳುವುದು ಉತ್ತಮ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








