ದೇಶಾದ್ಯಂತ 24 ಗಂಟೆಯಲ್ಲಿ ಶೇ.55ರಷ್ಟು ಏರಿಕೆ ಕಂಡ ಕೊರೋನಾ: 500ರ ಗಡಿದಾಟಿದ ಸಾವಿನ ಸಂಖ್ಯೆ

ನವದೆಹಲಿ:

      ಭಾರತದಲ್ಲಿ ಕೋವಿಡ್ ಪ್ರಕರಣಗಳು  24 ಗಂಟೆಗಳಲ್ಲಿ ಶೇ.55% ಜಿಗಿತ ಕಂಡಿದೆ. ಅಲ್ಲದೇ ಸಾವಿನ ಸಂಖ್ಯೆ 500ರ ಗಡಿಯನ್ನು ದಾಟಿದೆ. ಈ ಮೂಲಕ ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯನ್ನು ಕಂಡಿದೆ.

        ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 58,097 ಜನರಿಗೆ ಕೋವಿಡ್ ( Covid19 Case ) ಹೊಸದಾಗಿ ದೃಢಪಟ್ಟಿದೆ. ಇದರ ಜೊತೆಗೆ 15,389 ಮಂದಿ ಸೋಂಕಿತರು ಗುಣಮುಖಲಾಗಿದ್ದಾರೆ. ಅಲ್ಲದೇ ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 534 ಸಾವನ್ನಪ್ಪಿರೋದಾಗಿ ತಿಳಿಸಿದೆ.

ಇನ್ನೂ ಇಂದಿನ ಕೊರೋನಾ ಪಾಸಿಟಿವ್ ( Corona Positive ) ಪ್ರಕರಣದಿಂದಾಗಿ ದೈನಂದಿನ ಧನಾತ್ಮಕತೆ ದರ ( Daily positivity rate ) ಶೇ.4.18%ಕ್ಕೆ ಏರಿಕೆಯಾಗಿದೆ. ಈಗ ಭಾರತದಲ್ಲಿ 2,14,004 ಸಕ್ರೀಯ ಕೊರೋನಾ ( Active cases ) ಪ್ರಕರಣಗಳಿದ್ದಾವೆ.

ಇದುವರೆಗೆ 3,43,21,803 ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೇ 4,82,551 ಮಂದಿ ಸೋಂಕಿತರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 147.72 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap