ಹಾವೇರಿ
ಹಾವೇರಿ ನೆಲದ ವೀರ ಸ್ವಾತಂತ್ರ್ಯ ಯೋಧ ಹುತಾತ್ಮ ಮೈಲಾರ ಮಹಾದೇವರ ಸಂಸ್ಮರಣ ಅಂಚೆ ಚೀಟಿ ನಾಳೆ (ಸೆ 03) ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆಯಾಗಲಿದೆ.ಕೇಂದ್ರ ಸರಕಾರದ ಸಂಪರ್ಕ ಸಚಿವಾಲಯ , ಅಂಚೆ ಇಲಾಖೆ ಹುತಾತ್ಮ ಮೈಲಾರ ಮಹಾದೇವ ಟ್ರಸ್ಟ ಹಾಗೂ ಬೆಂಗಳೂರಿನ ಗಾಂಧೀ ಸ್ಮಾರಕ ನಿದಿ ಸಂಸದ್ಥೆಗಳು ಜಂಟಿಯಾಗಿ ನಿಯೋಜಿಸಿರುವ ಸಮಾರಂಭದಲ್ಲಿ ಸಂಪರ್ಕ ಇಲಾಖೆ ಮತ್ತು ರಾಜ್ಯ ರೈಲ್ವೆ ಇಲಾಖೆಯ ಕೇಂದ್ರ ಸಚಿವರಾದ ಮನೋಜ ಸಿನ್ಹಾ ಬಿಡುಗಡೆ ಮಾಡುವರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ ಅಧ್ಯಕ್ಷತೆ ವಹಿಸುವರು.
1911 ಜೂನ್ 08 ರಂದು ಜಿಲ್ಲೆಯ ಮೊಟೇಬೆನ್ನೂರಿನಲ್ಲಿ ಮಹಾದೇವಪ್ಪನವರು ಜನಿಸಿದರು. ಗಾಂದೀಜಿಯವರ ನಿಕಟವರ್ತಿಯಾಗಿ, ದಾಂಡಿಯಾತ್ರೆ ಉಪ್ಪಿನ ಸತ್ಯಾಗ್ರಹದಲ್ಲಿ ಆಯ್ದ 78 ಯಾತ್ರಿಗಳಲ್ಲಿ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿದ್ದವರು. ಪತ್ನಿ ಸಿದ್ದಮ್ಮನವರು ಕೂಡ ಗಾಂಧಿಜಿಯವರ ಅನುಯಾಯಿ ಮಾತ್ರವಲ್ಲ ಕಸ್ತೀರಿಬಾ ಅವರ ಅವರ ನೆರಳಿನಂತಿದ್ದವರು.ಗಾಂಧೀಜಿಯವರ ಸಾಬರಮತಿ ಆಶ್ರಮದ ಪ್ರೇರಣೆಯಿಂದ ಇಲ್ಲಿಗೆ ಹತ್ತಿರದ ಕೊರಡೂರಿನಲ್ಲಿ ಗಾಂಧೀ ಸೇವಾಶ್ರಮವನ್ನು ಕಟ್ಟಿ ಬೆಳೆಸಿದವರು. 300 ಕ್ಕೂ ಹೆಚ್ಚು ಸ್ವಾತಂತ್ರ್ಯ ಯೋಧರನ್ನು ಕಟ್ಟಿಕೊಂಡು ದೇಶಪ್ರೇಮ ಮತ್ತು ಗಾಂಧಿ ತ್ತ್ವಗಳನ್ನು ಪ್ರಚಾರ ಮಾಡಿದವರು.ಮಾಡು ಇಲ್ಲವೆ ಮಡಿ ಘೋಷಣೆ ದೇಶವನ್ನು ವ್ಯಾಪಿಸಿದಾಗ 74 ಬಾರಿ ಜಿಲ್ಲೆಯ ಹಲವಿ ಕಡೆ ಬಿಟೀಷ ಸರಕಾರಿ ಯಂತ್ರವನ್ನು ಅತಂತ್ರಗೊಳಿಸಿದರು. ದುರ್ದೈವದಿಂದ 1943 ಎಪ್ರಲ್ 01 ರಂದು ಹೊಸರತ್ತಿಯಲ್ಲಿ ನಡೆದ ಹಪ್ತೆ ಲೂಟಿ ದಾಳಿಯಲ್ಲಿ ಗುಂಡಿಗೆ ತಮ್ಮ ಅನುಯಾಯಿಗಳಾದ ತಿರಕಪ್ಪಾ ಮಡಿವಾಳರ ಮತ್ತು ವೀರಯ್ಯ ಹಿರೇಮಠ ಅವರೊಂದಿಗೆ ಹುತಾತ್ಮರಾದವರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ 32 ನೇ ವಯಸ್ಸಿನಲ್ಲಿ ರಕ್ತ ಅರ್ಪಣೆ ಮಾಡಿದ ಮೈಲಾರ ಮಹಾದೇವಪ್ಪನವರ ತ್ಯಾಗ ಬಿಲಿದಾನಗಳ ಸಂದೇಶ ಮತ್ತೊಮ್ಮೆ ದೇಶದ ಮೂಲೆ ಮೂಲೆಗೆ ಅಂಚೆ ಚೀಟಿಯ ಮೂಲಕ ರವಾನೆಯಾಗಲಿದೆ. ಸಂಸದ ಶಿವಕುಮಾ ಉಸಾಸಿ, ಜಗದೀಶ ಶೆಟ್ಟರ, ಎಚ್ ಕೆ ಪಾಟೀಲ ಜಿಲ್ಲಾಧಿಕಾರಿ ಡಾ. ಎಂ ವ್ಹಿ ವೆಂಕಟೇಶ ಮುಂತಾದವರು ಹೆಚ್ಚು ಆಸಕ್ತಿ ವಹಿಸಿದ್ದರಿಂದ ಅಂಚೆ ಚೀಟಿ ಹೊರ ಬರಲು ಸಾಧ್ಯವಾಗಿದೆ. ಕೇಂದ್ರ ಸರಕಾರ ಮೈಲಾರ ಮಹಾದೇವರ ತ್ಯಾಗ ಬಲಿದಾನವನ್ನು ಸ್ಮರಿಸಿ ದೇಶಕ್ಕೆ ಮತ್ತೊಮ್ಮೆ ಪರಿಚಯಿಸಿದಂತಾಗಿದೆ ಎಂದು ಟ್ರಸ್ಟ ಸದಸ್ಯೆ ವ್ಹಿ ಎನ್ ತಿಪ್ಪನಗೌಡರು ಮತ್ತು ಮೈಲಾರ ಮಹದೇವರ ಮೊಮ್ಮಗ ಎಚ್ ಎಸ್ ಮಹಾದೇವ ಹೇಳುತ್ತಾರೆ.
ಈಗಾಗಲೇ ಕನ್ನಡ 7ನೇ ತರಗತಿ ಮೊದಲನೆಯ ಸೆಮಸ್ಸರ್ ನ ಪ್ರಥಮ ಭಾಷೆ ಪಠ್ಯ ಪುಸ್ತಕದಲ್ಲಿ ಮಹಾದೇವಪ್ಪನವರ ಆತ್ಮ ಚರಿತ್ರೆ ಪಠ್ಯವಾಗಿದೆ. ರಾಷ್ಟ್ರೀಯ ಮೈಜಿಯಂ, ಪೂರ್ಣ ಪ್ರಮಾಣ ಸಭಾಭವನ, ಆಕರ್ಷಕ ಉದ್ಯಾನವನ, ಎಲ ್ಲಸ್ವಾತಂತ್ರ್ಯ ಹೋರಾಟಗಾರರ ಸಾಕ್ಷ್ಯ ಚಿತ್ರ ಬಹಳಷ್ಟು ಕೆಲಸಗಳು ಟ್ರಸ್ಟಿನಿಂದ ಆಗಬೇಕಾಗಿದೆ. ಇಂಥ ಪ್ರಯತ್ನಕ್ಕೆ ಅಂಚೆ ಚೀಟಿ ಮುನ್ನುಡಿಯಾಗಬೇಕೆಂದು ದೇಶಪ್ರೇಮಿಗಳ ಆಶಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ