ಪಾಲಿಕೆ ಕಚೇರಿ: ತಣ್ಣಗಿದ್ದ ವಾತಾವರಣ

 ತುಮಕೂರು:

      ತುಮಕೂರು ಮಹಾನಗರ ಪಾಲಿಕೆಯ ಚುನಾವಣೆ ಲಿತಾಂಶ ಪ್ರಕಟವಾದ ಮರುದಿನವಾದ ಮಂಗಳವಾರ ಮಹಾನಗರ ಪಾಲಿಕೆ ಕಚೇರಿಯು ಸಂಪೂರ್ಣವಾಗಿ ತಣ್ಣಗಾಗಿತ್ತು.

      ಚುನಾವಣಾ ಪ್ರಕ್ರಿಯೆ ನಡೆಯುವ ಸಂದ‘ರ್ದಲ್ಲೂ ‘‘ಶ್ವೇತ ವಸ್ತ್ರಧಾರಿ’’ಗಳಿಂದ ತುಂಬಿರುತ್ತಿದ್ದ ಪಾಲಿಕೆ ಕಚೇರಿಯಲ್ಲಿ ಮಂಗಳವಾರ ರಾಜಕಾರಣಿಗಳ ಉಪಸ್ಥಿತಿ ಕಾಣಲಿಲ್ಲ. ಅಧಿಕಾರಿ-ನೌಕರರು ಎಂದಿನಂತೆ ಕೆಲಸದಲ್ಲಿ ತಲ್ಲೀನರಾಗಿದ್ದರು. ಆಯಕ್ತ ಎಲ್. ಮಂಜುನಾಥ ಸ್ವಾಮಿ ಅವರು ಕಚೇರಿಯಲ್ಲಿದ್ದರು.

      ಚುನಾವಣೆ ನಡೆದು ಲಿತಾಂಶ ಪ್ರಕಟವಾಗಿ ಹೊಸ ಚುನಾಯಿತ ಮಂಡಲಿ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಹಜವಾಗಿ ಹಳಬರು ‘‘ಮಾಜಿ’’ ಆಗಿದ್ದು, ಅವರ್ಯಾಿರೂ ಮಂಗಳವಾರ ಕಚೇರಿಯಲ್ಲಿ ಕಂಡುಬಂದಿರಲಿಲ್ಲ. ಹೊಸದಾಗಿ ಗೆದ್ದವರೂ ಇತ್ತ ಬಂದಂತಿರಲಿಲ್ಲ. ವಿವಿಧ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರ ಸಂಖ್ಯೆಯೂ ಹೆಚ್ಚಾಗಿರಲಿಲ್ಲ. ಸದಾ ಜನಪ್ರತಿನಿಧಿಗಳಿಂದ ಮತ್ತು ಸಾರ್ವಜನಿಕರಿಂದ ಗಿಜಿಗಿಡುತ್ತಿದ್ದ ಪಾಲಿಕೆ ಕಚೇರಿ ಸದ್ಯಕ್ಕೆ ತಣ್ಣಗಿತ್ತು.

     ಪಾಲಿಕೆಯ ಮೇಯರ್ ಕೊಠಡಿ ಇನ್ನೂ ಚುನಾವಣಾ ವೀಕ್ಷಕರ ವಶದಲ್ಲೇ ಇದೆ. ಸದ್ಯವೇ ಅವರು ನಿರ್ಗಮಿಸಲಿದ್ದು, ಬಳಿಕ ಅದನ್ನು ಪಾಲಿಕೆ ಸಿಬ್ಬಂದಿ ಹೊಸ ಮೇಯರ್ ಅವರಿಗಾಗಿ ಸಜ್ಜುಗೊಳಿಸಲಿದ್ದಾರೆನ್ನಲಾಗಿದೆ.

ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ:

      ‘‘ಪಕ್ಷಗಳು ಹೇಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೆ ಬರಬಹುದು? ಮೇಯರ್ ಮತ್ತು ಉಪಮೇಯರ್ ಹುದ್ದೆಗಳನ್ನು ಯಾವ-ಯಾವ ಪಕ್ಷಗಳು ಹಂಚಿಕೊಳ್ಳಬಹುದು? ಮೀಸಲಾತಿ ಪ್ರಕಾರ ಯಾರು ಮೇಯರ್ ಹಾಗೂ ಉಪಮೇಯರ್ ಆಗಬಹುದು?’’ ಎಂಬ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ಪ್ರಾರಂ‘ವಾಗಿದೆ. ಇದೇ ರೀತಿ ಪಾಲಿಕೆ ಚುನಾವಣೆಯಲ್ಲಿ ಗೆದ್ದವರು ಮತ್ತು ಸೋತವರ ಬಗ್ಗೆಯೂ ಜನರು ತಮ್ಮದೇ ರೀತಿಯಲ್ಲಿ ಇನ್ನೂ ವಿಮರ್ಶಿಸುತ್ತಲೇ ಇದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap