ಕಾರುಗಳ ಡಿಕ್ಕಿ: ಓರ್ವ ಸಾವು

 ತುಮಕೂರು:

      ತಿಪಟೂರು ತಾಲ್ಲೂಕು ಬೊಮ್ಮೇನಹಳ್ಳಿ-ಕೋಟನಾಯಕನಹಳ್ಳಿ ಮಧ್ಯೆ ರಾಷ್ಟ್ರೀಯ ಹೆದ್ದಾರಿ-206 ರಲ್ಲಿ ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು ತಿಪಟೂರು ಕಡೆಯಿಂದ ಬರುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ಇತ್ತೀಚೆಗೆ ಮಧ್ಯಾಹ್ನ 1-30 ರಲ್ಲಿ ನಡೆದಿದೆ.

      ಇದರಿಂದ ವೆಂಕಟೇಶ್, ಲತಾ, ವಿಶಾಲಾಕ್ಷಮ್ಮ, ಗಂಗಮ್ಮ, ಶ್ರೀನಿವಾಸ, ರೋಹನ್ ಎಂಬುವವರಿಗೆ ತೀವ್ರ ಗಾಯಗಳಾಗಿವೆ. ಕಾರಿನ ಚಾಲಕ ಶ್ರೀನಿವಾಸ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಿಪಟೂರು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಮೂರೂ ಕಾರುಗಳು ಜಖಂಗೊಂಡಿದೆ. ಈ ಬಗ್ಗೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 279, 337, 304 (ಎ) ಪ್ರಕಾರ ಮೊಕದ್ದಮೆ ದಾಖಲಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link