ಆಂಜನೇಯ ದೇವಾಲಯದಲ್ಲಿ ನಿರಂತರ ಕಳವು

 ಬುಕ್ಕಾಪಟ್ಟಣ :

      ಬುಕ್ಕಾಪಟ್ಟಣ ಗ್ರಾಮದ ಇಟ್ಟಿಗೆ ಆಂಜನೇಯ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಹುಂಡಿ ಒಡೆದು ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಈ ಇಟ್ಟಿಗೆ ಆಂಜನೇಯ ದೇವಸ್ಥಾನವು ಊರ ಹೊರಗಡೆ ಇರುವುದರಿಂದ ಯಾವಾಗಲೂ ಜನಸಂದಣಿ ಇರುವ ಕಾರಣ ಹುಂಡಿಯಲ್ಲಿ ಅಪಾರ ಮೊತ್ತದ ಹಣ ಕಳವು ಆಗಿರಬಹುದೆಂದು ದೇವಸ್ಥಾನದ ಟ್ರಸ್ಟ್‍ನ ಪದಾಧಿಕಾರಿಗಳು ತಿಳಿಸಿದ್ದಾರೆ.

      ಪ್ರತಿ ವರ್ಷ ಈ ದೇವಸ್ಥಾನದಲ್ಲಿ ಕಳವು ಪದೆ ಪದೆ ಆಗುತ್ತಲೆ ಇರುತ್ತದೆ. ಆದರೆ ಇಲ್ಲಿಯವರೆಗೂ ಕಳವು ಮಾಡಿರುವವರು ಯಾರು ಎಂಬುದು ಸುಳಿವು ಸಿಕ್ಕಿರುವುದಿಲ್ಲ. ಈ ಬಾರಿ ಕಳವು ಮಾಡಿರುವುದು 3 ಜನ ಆಗಂತುಕರು ಎಂಬುದು ದೇವಸ್ಥಾನದ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ. ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಿ.ಸಿ.ಕ್ಯಾಮೆರಾದ ರೆರ್ಕಾಡಿಂಗ್ ನಕಲು ಹಾಗೂ ಕಂಪ್ಲೇಟ್ ಅನ್ನು ದೇವಸ್ಥಾನದ ಅಭಿವೃದ್ದಿ ಮಂಡಳಿಯವರು ನೀಡಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link