ತುಮಕೂರು :
ತುಮಕೂರಿನ ಎಸ್.ಐ.ಟಿ. ಬಡಾವಣೆಯ 28ನೇ ಕ್ರಾಸ್ನಲ್ಲಿರುವ (ಶಾರದಾ ನಿವಾಸ) ಹೆಬ್ಬೂರು ರಾಮಣ್ಣ ಫೌಂಡೇಷನ್ ವತಿಯಿಂದ `ನಗೆಮುಗುಳು’ ಹಾಸ್ಯ ಮಾಸಪತ್ರಿಕೆ ಮತ್ತು ಪೂರ್ಣಿಮಾ ಸಾಹಿತ್ಯ ಮಂದಿರಯ ಪುಸ್ತಕ ಪ್ರಕಾಶನ ಸಂಸ್ಥೆಗಳ ಸಹಕಾರದಿಂದ ಆಯೋಜಿಸುತ್ತಿರುವ ತಿಂಗಳ ಕಾರ್ಯಕ್ರಮ ಸರಣಿಯಲ್ಲಿ 83ನೇ ತಿಂಗಳ ಕಾರ್ಯಕ್ರಮ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣೆ ಮತ್ತು ರಾಷ್ಟ್ರದ ಪ್ರಗತಿ ಕುರಿತು ಚಿಂತನೆ ಕಾರ್ಯಕ್ರಮ 2018 ರ ಸೆಪ್ಟೆಂಬರ್ 11 ರಂದು ಮಂಗಳವಾರ ಸಂಜೆ 6-15 ರಿಂದ ತುಮಕೂರಿನ ಎಸ್.ಐ.ಟಿ. ಬಡಾವಣೆಯ 28ನೇ ಕ್ರಾಸ್ನಲ್ಲಿರುವ (ಶಾರದಾ ನಿವಾಸ) ಹೆಚ್.ಎಸ್.ಆರ್. ಸಭಾಂಗಣದಲ್ಲಿ ನಡೆಯಲಿದೆ.
ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗಣ್ಯರುಗಳಾದ ವಿದ್ಯಾನಿಕೇತನ ಕಾರ್ಯದರ್ಶಿ ಡಾ|| ಸಿ.ಜಯರಾಮರಾವ್, ಮಾಜಿ ಸಚಿವರು ಹಾಗೂ ಬಿ.ಜೆ.ಪಿ ಮುಖಂಡರಾದ ಸೊಗಡು ಶಿವಣ್ಣ, ವಾಸವಿ ವಿದ್ಯಾಪೀಠದ ಅಧ್ಯಕ್ಷರಾದ ಸಿ.ಎ.ಸೋಮೇಶ್ವರಗುಪ್ತ, ಹಿರಿಯ ಬಿ.ಜೆ.ಪಿ ಮುಖಂಡರಾದ ಸಿ.ವಿ.ಮಹದೇವಯ್ಯ, ಹಿರಿಯ ವಕೀಲರಾದ ಹೆಚ್.ಎಲ್.ಕೃಷ್ಣಮೂರ್ತಿ, ಕನ್ಸಲ್ಟಿಂಗ್ ಇಂಜಿನಿಯರ್ ಆದ ಎಸ್.ದೇವರಾಜ್ ಮತ್ತು ಸಮಾಜ ಸೇವಕರಾದ ಶ್ರೀಮತಿ ಸುಭಾಷಿಣಿ ರವೀಶ್ ಮತ್ತಿತರ ಗಣ್ಯರು ಭಾಗವಹಿಸುವರು.
ಈ ಕಾರ್ಯಕ್ರಮದಲ್ಲಿ ಆಸಕ್ತ ನಾಗರಿಕರೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೆಬ್ಬೂರು ರಾಮಣ್ಣ ಫೌಂಡೇಷನ್