ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು : ಗುರುಕುಲ ಶ್ರೀ

ತಿಪಟೂರು :

             ಪಟ್ಟಣದಲ್ಲಿ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣ್‍ರವರ 131ನೇ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ದೇಶವನ್ನು ಕಟ್ಟಿ ಅಭಿವೃದ್ಧಿ ಪತದತ್ತಸಾಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು ಎಂದರು.
            ಶಿಕ್ಷಕರ ದಿನಾಚರಣೆ ಎನ್ನುವುದು ಶಿಕ್ಷಕರ ಹಬ್ಬವಾಗಿದೆ, ವಿಶ್ವದಲ್ಲಿ ಎಲ್ಲಿಯೂ ಶಾಲೆಗಳ ಪರಿಚಯವೇ ಇಲ್ಲದಂತಹ ಸಂದರ್ಭದಲ್ಲಿ ಭಾರತದಲ್ಲಿ ಗುರುಕುಲ ಪದ್ದತಿ ಇದ್ದು ಅಲ್ಲಿನ ಗುರುಗಳ ಮುಖೇನ ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿಯುತ್ತಿದ್ದರು. ಆದ್ದರಿಂದ ಹಿಂದೆ ನೆರೆಹೊರೆಯ ರಾಷ್ಟ್ರಗಳಿಂದ ಶಿಕ್ಷಣವನ್ನು ಕಲಿಯುವುದಕ್ಕೆ ಭಾರತಕ್ಕೆ ಆಗಮಿಸಿದಂತೆ ಯಾತ್ರಾತ್ರಿಗಳನ್ನು ನಾವು ಕಾಣಬಹುದು. ಆದ್ದರಿಂದ ಮಕ್ಕಳಿಗಾಗಿ ಆಸ್ತಿಮಾಡುವುದನ್ನು ಬಿಟ್ಟು ಮಕ್ಕಳನ್ನೇ ದೇಶಕ್ಕೆ ಆಸ್ತಿಯಾಗುವಂತೆ ಮಾಡಿ ಎಂದು ಕರೆನೀಡಿದರು.

             ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಬೆಂಗಳೂರಿನ ವಕೀಲರಾದ ತೇಜಸ್ವಿ ಸೂರ್ಯರವರು ಮಾತನಾಡುತ್ತಾ ಎಲ್ಲಾ ವೃತ್ತಿಗಳಲ್ಲಿ ಶಿಕ್ಷಕರ ವೃತ್ತಿಯು ಮಹತ್ವವಾದುದು, ಇಂದು ಶಿಕ್ಷಕರ ಸಮಾರಂಭದಲ್ಲಿ ಮಾತನಾಡುತ್ತಿರುವುದು ನನಗೆ ಅತೀವ ಸಂತೋಷವನ್ನುಂಟುಮಾಡಿದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡ ನೀವೆ ದನ್ಯರು. ಹಿಂದೆ ಶಿಕ್ಷಕರು ಮಕ್ಕಳಲ್ಲಿ ಕನಸನ್ನು ಬಿತ್ತಿ ಅದಕ್ಕೆ ನೀರೆರೆದಂತೆ ಮಕ್ಕಳನ್ನು ತಮ್ಮ ಗುರಿಯತ್ತ ಸಾಗಿಸುತ್ತಿದ್ದರು ಉದಾಹರಣೆಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರ ಗುರುಗಳಾದ ಸುಬ್ರಮಣ್ಯರವರು ಮಕ್ಕಳಿಗೆ ಪಾಠಮಾಡಲು ಪುಸ್ತಕಗಳಿಲ್ಲದೆ ದಿನನಿತ್ಯದ ಪತ್ರಿಕೆಗಳಲ್ಲಿನ ಸುದ್ದಿಗಳನ್ನು ವಿವರಿಸುತ್ತಾ ಇರುವಾಗ ಒಂದು ದಿನ ಕಲಾಂರವರು ಆಕಾಶದಲ್ಲಿ ಸಂಚರಿಸುತ್ತಿದ್ದ ವಿಮಾನವನ್ನು ನೋಡಿ ಗುರುಗಳೇ ವಿಮಾನ ಹೇಗೆ ಗಾಳಿಯಲ್ಲಿ ಹಾರುತ್ತಿದ್ದೆ ಎಂದಾಗ ಆದು ನನಗೆ ಗೊತ್ತಿಲ್ಲ ನೀನೇ ತಿಳಿದುಕೊಂಡು ನೀನೇ ತಯಾರು ಮಾಡು ಎಂದರಂತೆ.

            ಕಲಾಂರವರು ಆ ಕನಸನ್ನೇ ಕಾಣುತ್ತಾ ಮುಂದೆ ಭಾರತವೇ ಕಂಡಂತಹ ಮಹಾನ್ ಕ್ಷಿಪಣಿ ಪಿತಾಮಹರಾದರು ಹೀಗೆ ಮಕ್ಕಳಲ್ಲಿ ಉನ್ನತವಾದ ಕನಸನ್ನು ಬಿತ್ತಿ ಅದು ಸಾಕಾರಗೊಳ್ಳುವಂತೆ ಮಾಡುವುದು ಶಿಕ್ಷಕರ ಕರ್ತವ್ಯ ವಾಗಬೇಕೆಂದರು. ಇಂದು ಶಿಕ್ಷಣವೆಂದರೆ ಕೇವಲ ಕಟ್ಟಡ, ಡಿಜಿಟಲ್ ಕೊಠಡಿ, ಉತ್ತಮ ಸಮವಸ್ತ್ರವಲ್ಲ, ದುಬಾರಿ ಶುಲ್ಕವನ್ನೇ ಶಿಕ್ಷಣವೆಂದು ತಪ್ಪು ತಿಳುವಳಿಕೆಯಿಂದ ಪೋಷಕರು ಮೋಸಹೋಗುತ್ತಿದ್ದಾರೆ ಇದು ತಪ್ಪಿ ಮೌಲ್ಯಶಿಕ್ಷಣವನ್ನು ನೀಡುವಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ. ಇಂದು ಶಿಕ್ಷಕರೆಂದರೆ ಎಲ್ಲಾ ಕೆಲಸಗಳನ್ನು ಮಾಡುವವರು ಎಂದು ಜನರು ತಪ್ಪು ತಿಳಿದಿದ್ದಾರೆ ದಯವಿಟ್ಟು ಶಿಕ್ಷಕರನ್ನು ಸೆನ್ಸಸ್, ಚುನಾವಣೆ ಮುಂತಾದ ಕಾರ್ಯಗಳಿಗೆ ನಿಯೋಜಿಸದೇ ಶಿಕ್ಷಕರಿಗೆ ಹೆಚ್ಚುಹೆಚ್ಚು ಪಾಠಮಾಡಲು ಅನುಕೂಲಮಾಡಿಕೊಡಬೇಕು. ಹಾಗೇ ಶಿಕ್ಷಕರುಕೂಡ ಇಂದಿನ ಮುಂದುವೆರೆದ ಜಗತ್ತಿನಲ್ಲಿ ಅಂತರ್ಜಾಲದಲ್ಲಿ ಸಿಗುವ ಹೊಸಹೊಸ ವಿಷಯಗಳನ್ನು ಕಲಿಯುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ವಿದ್ಯೆಯನ್ನು ಕಲಿಸಬೇಕೆಂದರು. ಆದರೆ ಇಂದು ಶಿಕ್ಷಕರು ತಮ್ಮ ಮೌಲ್ಯಗಳನ್ನು ಮರೆತು

          ಸಮಾರಂಭದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್‍ರವರು ಶಿಕ್ಷಕರು ಜಾನ್ ಲೆನಾನ್‍ರವರನ್ನು ಉದಾಹರಣೆ ಕೊಟ್ಟು “ಜೀವನದ ಯಶಸ್ಸು ಸಂತೋಷದಲ್ಲಿದೆ” ಜೀವನವೆಂದರೆ ಸದಾ ಸಂತೋಷದಿಂದಿರುವುದು. ಶಿಕ್ಷಕರು ಸಂತೋಷವಾಗಿದ್ದರೆ ವಿದ್ಯಾರ್ಥಿಗಳು ಸಂತೋಷದಿಂದ ಕಲಿಯುತ್ತಾರೆ. ವಿದ್ಯಾರ್ಥಿಗಳಿಗೆ ಕಲಿಯುವಾಗ ಅವರಿಗೆ ಯಾವ ವಿಷಯದಲ್ಲಿ ಆಸಕ್ತಿಯಿದೆ ಎಂದು ತಿಳಿದು ಅದನ್ನೇ ಅವನಿಗೆ ಕೊಡಿಸಿ ಅದರಲ್ಲೇ ಪರಿಣಿತನಾಗುವಂತೆ ಮಾಡಬೇಕು. ಇಂದು ಅಂತರ್ಜಾಲದಲ್ಲಿಸಿಡಿಮದ್ದನ್ನು ಹೇಗೆ ತಯಾರಿಸಬೇಕೆಂಬುದನ್ನು ಕಲಿಸುತ್ತದೆ. ಅದರಂತೆ ಅದನ್ನು ಹೇಗೆ ಬಳಸಬೇಕೆಂದು ತಿಳಿಯದೆ ಇಂದು ಅಪಾಯಕಾರಿ ಭಯೋತ್ಪಾದಕರಾಗಿದ್ದಾರೆ. ಅದೇ ವಿದ್ಯಾರ್ಥಿಗಳಿಗೆ ಬುದ್ದಿ, ಜ್ಞಾನ ವಿವೇಕದ ಜೊತೆಗೆ ಕರುಣೆಯನ್ನು ಶಿಕ್ಷಕರು ಕಲಿಸಿದ್ದರೆ ಅವರು ಭಯೋತ್ಪಾದಕರಾಗುತ್ತಿರಲಿಲ್ಲ. ಮಕ್ಕಳಲ್ಲಿ ಮಾನವೀಯತೆಯನ್ನು ಬೆಳಸೆಬೇಕೆಂದರು.

ಇದೇ ಸಂದರ್ಭಲ್ಲಿ 2017-18ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರಿಗೆ ಸನ್ಮಾನಿಸಲಾಯಿತು.

             ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷರಾದ ಎನ್.ಎಂ.ಸುರೇಶ್, ತಹಸೀಲ್ದಾರ್ ಶಿವರಾಜ್, ಇ.ಓ.ಷಡಕ್ಷರಿ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರಾದ ಸಿದ್ದಯ್ಯ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಸಿ.ಸುರೇಶ್, ಕ.ರಾ.ಸ.ನಂ ಅಧ್ಯಕ್ಷರಾದ ರಮೇಶ್, ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್.ಆರ್.ರಮೇಶ್, ಎಲ್ಲಾ ಸಿ.ಆರ್.ಪಿಗಳು, ಜಿ.ಪಂ ಸದಸ್ಯ ಜಿ.ನಾರಾಯಣ್, ಗಂಗರಾಜು, ತಾ.ಪಂ ಸದಸ್ಯರಾದ ಪುಟ್ಟಸ್ವಾಮಿ, ಶಂಕರಪ್ಪ, ನಗರಸಭಾ ಸದಸ್ಯರಾದ ಉಪಾಧ್ಯಕ್ಷರಾದ ಶ್ರೀಮತಿ ಜಹರಾ ಜಬೀನಾ, ಸದಸ್ಯರಾದ ರೇಖಾ ಅನೂಪ್, ಹರಿಬಾಬು, ಲೋಕೇಶ್ ಮುಂತಾದವರಿದ್ದರು, ಬಿ.ಇ.ಓ ಮಂಗಳಗೌರಮ್ಮ ಸ್ವಾಗತಿಸಿದರು, ಟಿ.ಕೆ.ಪಟ್ಟಾಭಿರಾಮು ನಿರೂಪಿಸಿದರು.

Recent Articles

spot_img

Related Stories

Share via
Copy link