ಬ್ಯಾಡಗಿ:
ಶಿಕ್ಷಕ ವೃತ್ತಿಯಂತಹ ಶ್ರೇಷ್ಠ ವೃತ್ತಿ ಮತ್ತೊಂದಿಲ್ಲ ಶಿಕ್ಷಕ ವೃತ್ತಿಯಲ್ಲಿತ್ಯಾಗ ಮನೋಭಾವನೆ ಬೇಕು, ಅದರಿಂದ ಮಾತ್ರ ಸಮಾಜ ಸಮೃದ್ಧಿ ಹಾಗೂ ಸುಧಾರಣೆಯಾಗಲಿದೆ. ಜ್ಞಾನದ ಹಸಿವನ್ನು ಇಂಗಿಸುವ ಪರಮೋಚ್ಚ ಶಕ್ತಿ ಶಿಕ್ಷಕರಲ್ಲಿದ್ದು ತಮ್ಮಜವಾಬ್ದಾರಿಯನ್ನುಅರಿತು ನಡೆದುಕೊಳ್ಳಬೇಕಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು
ಬುಧವಾರ ಸ್ಥಳೀಯ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿಕ್ಷರ ದಿನಾಚರಣೆ ಸಮಿತಿ ಬ್ಯಾಡಗಿ ಇರವುಗಳ ಸಂಯುಕ್ತಾಶ್ರಯದಲ್ಲಿಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಸಂಸ್ಕಾರಯುತ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ದೇಶದಅಭ್ಯುದಯಕ್ಕೆಅಡಿಪಾಯ ಹಾಕುವ ಮಹತ್ತರಜವಾಬ್ದಾರಿ ಶಿಕ್ಷಕರ ಮೇಲಿದೆಈಡೀದೇಶತಮ್ಮ ಮೇಲೆ ಬಹಳಷ್ಟು ನಿರೀಕ್ಷೆಯನ್ನಿಟ್ಟಿದ್ದುತಮ್ಮಕಾರ್ಯ ವೈಖರಿಯನ್ನು ಅವಲೋಕಿಸುತ್ತಿದೆಗುರುವಿನ ಸ್ಥಾನಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು..
ಸೇವಾ ಭದ್ರತೆ ಸದನದಲ್ಲಿ ಚರ್ಚೆ:ಕಳೆದ ಕೆಲ ವರ್ಷಗಳಿಂದ ಸರಕಾರಜಾರಿಗೆತಂದಿರುವ ನಿಯಮಗಳು ಶಿಕ್ಷಕರ ಮೇಲಿನ ಹೊರೆಯನ್ನುಇನ್ನಷ್ಟು ಹೆಚ್ಚುವಂತೆ ಮಾಡಿವೆಇದರಿಂದ ಶಾಲೆಯಲ್ಲಿ ಮಕ್ಕಳಿಗೆ ಕಲಿಸುವುದಕ್ಕಿಂತ ಸರಕಾರದ ಕೆಲಸ ಮಾಡುವವಲ್ಲಿಯೇ ನಿರತರಾಗಿದ್ದಾರೆಅಲ್ಲದೇಅವರ ಸೇವಾ ಭದ್ರತೆಯನ್ನು ಕಸಿದುಕೊಂಡಿದ್ದು ಈ ಕುರಿತಂತೆ ಸದನದಲ್ಲಿ ಸರಕಾರದ ಗಮನ ಸಳೆದು ಭದ್ರತೆಯ ಹಳೆ ನಿಯಮಜಾರಿಗೆತರುವಂತೆಇತ್ತಾಯ ಮಾಡುವುದಾಗಿ ತಿಳಿಸಿದರು..
ಮಕ್ಕಳ ಮನಸ್ಸು ಮಲೀನವಾಗುತ್ತಿದೆ:ಉಪನ್ಯಾಸ ನೀಡಿ ಮಾತನಾಡಿದಚಿರ್ತದುರ್ಗದಉಪನ್ಯಾಸಕ ಭರಮಪ್ಪ ಮೈಸೂರತಂತ್ರಜ್ಞಾನ ಬೆಳೆದಂತೆಲ್ಲ ಮಕ್ಕಳ ಮನಸ್ಸುವಿಚಲಿತಗೊಂಡುಮಲೀನವಾಗುತ್ತಿರುವುದುದುರಂತ ವಿಷಯಇಂತಹ ಸಂದರ್ಬದಲ್ಲಿ ಮಕ್ಕಳನ್ನು ತಿದ್ದಿದೇಶದ ಶಕ್ತಿಯನ್ನಾಗಿಸಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕಿದೆಎಂದರು.
ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ:ಪುರಸಭೆಅಧ್ಯಕ್ಷ ಬಸವರಾಜಛತ್ರದ ಮಾತನಾಡಿ, ಶಿಕ್ಷಕರು ಸಾಮಾಜಿಕ ನ್ಯಾಯದಡಿಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜಮುಖಿಯಾಗಿಕೆಲಸ ಮಾಡುವಂತೆಪ್ರೇರೇಪಿಸಬೇಕುವಿದ್ಯೆ,ಬುದ್ಧಿ ಸೇರಿದಂತೆ ಭಾವನಾತ್ಮಕ ಸಂಬಂಧಗಳನ್ನು ಬೆಳೆಸುವ ಮೂಲಕ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಬೇಕಾಗಿದೆ ಎಂದರು.
ಮಡಿದವರಿಗೆ ಸಂತಾಪ:ಇದೇ ಸಂದರ್ಭದಲ್ಲಿಕೇರಳ ಕೊಡಗಿನಲ್ಲಿ ಮಹಾಮಳಗೆ ಮಡಿದಜನರಿಗೆ ಮಣವಾಚರಣೆ ಮಾಡುವ ಮೂಲಕ ಮತ್ತುಇತ್ತಿಚೇಗೆ ನಿಧನರಾದ ಶಿಕ್ಷಕರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಮತ್ತುನಿವೃತ್ತಿಶಿಕ್ಷಕರನ್ನು ಅತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಬೆಳಿಗ್ಗೆ 8.30 ರಿಂದ ಸರ್ವಪಲ್ಲಿರಾಧಾಕೃಷ್ಣನರವರ ಭಾವಚಿತ್ರವನ್ನುಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ನಗರದ ಪ್ರಮುಖಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ವೇದಿಕೆಯಲ್ಲಿ ಜಿಪಂ ಸದಸ್ಯರಾದ ಸುಮಂಗಲಾ ಪಟ್ಟಣಶೆಟ್ಟಿ, ಅನುಸೂಯಮ್ಮ ಕುಳೆನೂರ,ತಾಪಂಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ ಪಾಟೀಲ, ಸದಸ್ಯರಾದ ಪ್ರಶಾಂತಯಾದವಾಡ, ನಾರಾಯಣಪ್ಪಕರ್ನೂಲ ರಮೇಶ ಸುತ್ತಕೋಟಿ, ವಿರೇಂದ್ರ ಶೆಟ್ಟರ, ಕಸಾಪ ತಾಲೂಕಾಧ್ಯಕ್ಷ ಬಿ.ಎಮ್.ಜಗಾಪುರ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಅಧ್ಯಕ್ಷ ಮಹೇಶ ನಾಯ್ಕ, ಬಿಎಚ್‍ಎನ್.ರಾವಳ,ಜೀವರಾಜಛತ್ರದಇನ್ನಿತರರು ಉಪಸ್ಥಿತರಿದ್ದರು.ಶಿಕ್ಷಣಾಧಿಕಾರಿ ಎಂ.ಮಂಜುನಾಥಸ್ವಾಮಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮನ್ವಯಾಧಿಕಾರಿ ಎಮ್.ಎಫ್.ಬಾರ್ಕಿ.ಸ್ವಾಗತಿಸಿದರು.ಎಂ.ಎನ್.ಮಲ್ಲಾಡದ ನಿರೂಪಿಸಿದರು.