ಹಾವೇರಿ :
ಇಲ್ಲಿನ ಬಸವೇಶ್ವರ ನಗರದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜ್ ಹಾಗೂ ವಿಶ್ವಭಾರತಿ ಇಂಗ್ಲೀಷ್ ಮಿಡಿಯಂ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ 130 ನೇ ಜನ್ಮ ದಿನೋತ್ಸವದ ಶಿಕ್ಷಕರ ದಿನಾಚಾರಣೆಯನ್ನು ಕಾಲೇಜಿನ ವಿದ್ಯಾರ್ಥಿ ವೃಂದದವರು ಕೇಕ್ ಕತ್ತರಿಸಿ ಗೌರವ ಪೂರ್ವಕವಾಗಿ ಆಚರಿಸಿದರು. ವಿಶ್ವಭಾರತಿ ಇಂಗ್ಲೀಷ್ ಮಿಡಿಯಂ ಶಾಲೆಯ ಅಧ್ಯಕ್ಷರಾದ ಎಂಕೆ ಪಾಟೀಲ ಮಾತನಾಡಿ ಎಲ್ಲ ಜೀವನ ಶಿಕ್ಷಕರಿಂದ ಪ್ರಭಾವಿವಾಗಿದ್ದು, ಎಲ್ಲರಿಗೂ ಗುರುಗಳು ಇದ್ದಾರೆ. ಡಾ|| ಸರ್ವಪಲ್ಲಿ ರಾಧಾಕ್ರಷ್ಣನ್ ರವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಿ ಎಂದು ಹೇಳಿದ್ದು ಶಿಕ್ಷಕ ಸೇವೆ ಅವರ ಮೇಲೆ ಇಟ್ಟು ಗೌರವದ ಸಂಕೇತವಾಗಿದೆ. ವಿದ್ಯಾರ್ಥಿಗಳು ಈ ದಿನದಂದು ತಮಗೆ ಕಲಿಸುವ ಶಿಕ್ಷಕರಿಗೆ ಶ್ರೇಷ್ಠತಾ ಮನೋಭಾವದಿಂದ ಆಚರಿಸುತ್ತಿರುವುದು ಸಂತೋಷಕರ. ಅವರ ಮಾರ್ಗದರ್ಶನ ಎಲ್ಲರಿಗೂ ಅಗತ್ಯ. ಗುರುವಿನ ಗುಲಾಮನಾಗುವ ತನಕ ದೊರಕದಣ್ಣ ಮುಕುತಿ ಎಂದು ದಾರ್ಶನಿಕರು ಹೇಳುವುದು ಸತ್ಯವಾಗಿದೆ ಎಂದು ಹೇಳಿದರು.
ಕಾಲೇಜಿನ ಉಪನ್ಯಾಸಕರಾದ ಸಂತೋಷ ವೈಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು. ಎಲ್ಲರಿಗೂ ಶಿಕ್ಷಕರು ಇದ್ದೆ ಇರುತ್ತಾರೆ. ಅವರು ಮಾರ್ಗದರ್ಶನವನ್ನು ಪಡೆದುಕೊಂಡು ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳು ಶ್ರಮವಹಿಸಬೇಕು ಎಂದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ವಿಶ್ವನಾಥ.ಮುತ್ತುರಾಜ ತಳವಾರ.ಕಾವ್ಯ ಆರ್.ವಿಜಯಲಕ್ಷ್ಮಿ ಪಾಟೀಲ ಸೇರಿದಂತೆ ಉಭಯ ಸಂಸ್ಥೆಯ . ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದದವರು ಪಾಲ್ಗೊಂಡಿದ್ದರು.